ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka Weather: ತಂಪಾಯ್ತು ರಾಜಧಾನಿ, ಇಂದೂ ಸುರಿಯಲಿದೆ ಮಳೆ, ಕೆಲವೆಡೆ ಯೆಲ್ಲೋ ಅಲರ್ಟ್

ಭಾನುವಾರ ಸುರಿದ ಮಳೆಯಿಂದಾಗಿ, ಬಿಸಿಲಿನ ಧಗೆಯಿಂದ ತತ್ತರಿಸುತ್ತಿದ್ದ ರಾಜಧಾನಿ ಹಾಗೂ ರಾಜ್ಯದ ಇತರ ಹಲವೆಡೆ ತಂಪಾಗಿದೆ. ಇಂದು ಕೂಡ ಮಧ್ಯಾಹ್ನದ ಬಳಿಕ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೆಲವೆಡೆ ಯೆಲ್ಲೋ ಅಲರ್ಟ್‌ ಇದೆ.

ತಂಪಾಯ್ತು ರಾಜಧಾನಿ, ಇಂದೂ ಸುರಿಯಲಿದೆ ಮಳೆ, ಕೆಲವೆಡೆ ಯೆಲ್ಲೋ ಅಲರ್ಟ್

ರಾಜಧಾನಿಯಲ್ಲಿ ಮಳೆ -

ಹರೀಶ್‌ ಕೇರ
ಹರೀಶ್‌ ಕೇರ Mar 30, 2026 8:45 AM

ಬೆಂಗಳೂರು, ಮಾ.​ 30: ಭಾನುವಾರ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ (rain) ಸುರಿದಿದ್ದು, ಬಿಸಿಲ ಬೇಗೆ ಆರಿದಂತಾಗಿದೆ. ಇಂದೂ ಸಹ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ (Karnataka Weather Forecast) ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ಮೈಸೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ನಿನ್ನೆ ಈ ಕೆಳಗಿನ ಪ್ರಮಾಣದಲ್ಲಿ ಮಳೆಯಾಗಿದೆ:

ಬೆಂಗಳೂರು ನಗರ – 18.8 ಮಿಮೀ

ಎಚ್‌ಎಎಲ್ ವಿಮಾನ ನಿಲ್ದಾಣ (HAL Airport) – 3.7 ಮಿಮೀ

ಬೆಂಗಳೂರು ಗ್ರಾಮಾಂತರ – 19.0 ಮಿಮೀ

ಚಿಂತಾಮಣಿ – 4.5 ಮಿಮೀ

ಗೋಣಿಕೊಪ್ಪಲ್ – 2.0 ಮಿಮೀ

ದೊಡ್ಡಬಳ್ಳಾಪುರ – 1.0 ಮಿಮೀ

ಯೆಲ್ಲೋ ಅಲರ್ಟ್​

ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಹಾವೇರಿ, ದಕ್ಷಿಣ ಕನ್ನಡ, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

ಇಂದಿನಿಂದ 4 ದಿನ ಕರ್ನಾಟಕದಲ್ಲಿ ಭಾರೀ ಮಳೆ; ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಘೋಷಣೆ

ಎಲ್ಲೆಲ್ಲಿ ಮಳೆ

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದಲ್ಲೂ ಗಾಳಿ ಮಳೆ ಜೋರಾಗಿರಲಿದೆ.