ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IndiGo Flights: ಇಂಡಿಗೋ ವಿಮಾನ ಹಾರಾಟ ವ್ಯತ್ಯಯ: ಪಿಜಿ ನೀಟ್‌ ಪರೀಕ್ಷೆ ಮುಂದೂಡಿಕೆ

KEA PG NEET: ವಿಮಾನಗಳೇ ಇಲ್ಲದುದರಿಂದ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ಮುಂದೂಡಲು KEAಗೆ ಮನವಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಮನವಿ ಪರಿಗಣಿಸಿರುವ ಪ್ರಾಧಿಕಾರ ದಾಖಲಾತಿಗೆ ಡಿಸೆಂಬರ್ 8ರವರೆಗೆ ಅವಕಾಶ ನೀಡಿದೆ. ಈ ಮೊದಲು ಡಿ.5ರಂದು ಶುಲ್ಕಪಾವತಿ ಮಾಡಿ ಡಿ.6ಕ್ಕೆ ವರದಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಲಾಗಿತ್ತು. ಇದೀಗ ಡಿಸೆಂಬರ್ 8ರ ಮಧ್ಯಾಹ್ನ 12.30ರೊಳಗೆ ಶುಲ್ಕ ಪಾವತಿಗೆ ಅವಕಾಶ ನೀಡಿದೆ

ಪಿಜಿ ನೀಟ್‌ ವಿದ್ಯಾರ್ಥಿಗಳಿಗೆ ತುಸು ರಿಲೀಫ್‌ ನೀಡಿದ ಕೆಇಎ

ಬೆಂಗಳೂರು, ಡಿ.07: ಕಳೆದ 5 ದಿನಗಳಿಂದ ಬೆಂಗಳೂರಿನ (bengaluru) ಕೆಂಪೇಗೌಡ ವಿಮಾನ ನಿಲ್ದಾಣದಿಂದ (Kempegowda Airport) ಸಂಚಾರ ನಡೆಸಬೇಕಿದ್ದ ಇಂಡಿಗೋ ವಿಮಾನಗಳ (IndiGo Flights) ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ಇಂದೂ ಅದೇ ದುಃಸ್ಥಿತಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ನಾನಾ ವಿಧದಲ್ಲಿ ಕಷ್ಟಪಡುತ್ತಿದ್ದಾರೆ. ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪಿಜಿ ನೀಟ್​ನ (PG NEET) ಪ್ರವೇಶ ಪ್ರಕ್ರಿಯೆ ದಿನಾಂಕ ಮುಂದೂಡಿಕೆ ಮಾಡಿದೆ.

ನೂರಾರು ವಿಮಾನಗಳು ರದ್ದಾದುದರಿಂದ ನಾನಾ ಗೊಂದಲಗಳು ಉಂಟಾಗಿದ್ದವು. ವಿಮಾನ ರದ್ದಾದ ಕಾರಣ ವಧು-ವರರು ಆನ್​ಲೈನ್​ನಲ್ಲಿ ಆರತಕ್ಷತೆ ಮಾಡಿಕೊಂಡಿದ್ದರು. ಇಷ್ಟೇ ಅಲ್ಲದೇ ಕೆಲ ಖಾಸಗಿ ಬಸ್ ಕಂಪನಿಗಳು ಬೆಂಗಳೂರು-ಮುಂಬೈ ಮಾರ್ಗದ ಟಿಕೆಟ್ ದರವನ್ನು 10,000 ರೂ. ವರೆಗೆ ಹೆಚ್ಚಿಸಿದ್ದವು. ವಿಮಾನಗಳೇ ಇಲ್ಲದುದರಿಂದ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ಮುಂದೂಡಲು KEAಗೆ ಮನವಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಮನವಿ ಪರಿಗಣಿಸಿರುವ ಪ್ರಾಧಿಕಾರ ದಾಖಲಾತಿಗೆ ಡಿಸೆಂಬರ್ 8ರವರೆಗೆ ಅವಕಾಶ ನೀಡಿದೆ. ಈ ಮೊದಲು ಡಿ.5ರಂದು ಶುಲ್ಕಪಾವತಿ ಮಾಡಿ ಡಿ.6ಕ್ಕೆ ವರದಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಸೂಚಿಲಾಗಿತ್ತು. ಇದೀಗ ಡಿಸೆಂಬರ್ 8ರ ಮಧ್ಯಾಹ್ನ 12.30ರೊಳಗೆ ಶುಲ್ಕ ಪಾವತಿಗೆ ಅವಕಾಶ ನೀಡಿದ್ದು, ಮಧ್ಯಾಹ್ನ 2.30ರೊಳಗೆ ದಾಖಲೆ ಪತ್ರ ಸಲ್ಲಿಕೆಗೆ ಮಾಡಲು ಡೆಡ್​ಲೈನ್ ನಿಗದಿಪಡಿಸಿದೆ.

ಆಹಾರ, ನೀರಿಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ ಉಪಹಾರ ನೀಡಿದ ಬೆಂಗಳೂರು ಫ್ಲೈಟ್ ಸಿಬ್ಬಂದಿ

ಇಂಡಿಗೋ ಸಿಇಓಗೆ ಡಿಜಿಸಿಎ ನೋಟಿಸ್

ದೇಶಾದ್ಯಂತ ಇಂಡಿಗೋ ವಿಮಾನ ಅವ್ಯವಸ್ಥೆ ಹಿನ್ನೆಲೆ ಇಂಡಿಗೋ ಸಿಇಓ ಪೀಟರ್ ಎಲ್ಬರ್ಸ್‌ಗೆ ಡಿಜಿಸಿಎ (Directorate General of Civil Aviation) ನೋಟಿಸ್ ನೀಡಿದ್ದು, 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಇಂಡಿಗೋ ವಿಮಾನಗಳ ವಿಳಂಬ ಮತ್ತು ರದ್ದತಿ ಸೇರಿದಂತೆ ವಿಮಾನಗಳ ಕಾರ್ಯಾಚರಣೆಯ ಸಂಪೂರ್ಣ ವೈಫಲ್ಯ ಕುರಿತು ನೋಟಿಸ್ ನೀಡಲಾಗಿದ್ದು, ಉತ್ತರ ನೀಡಲು ವಿಫಲವಾದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಿಜಿಸಿಎ ಎಚ್ಚರಿಕೆ ನೀಡಿದೆ.

ರದ್ದಾದ ಇಂಡಿಗೋ ಏರ್‌ಲೈನ್ಸ್‌ ಟಿಕೆಟ್‌ ಹಣ ಕೂಡಲೇ ಮರುಪಾವತಿಗೆ ಕೇಂದ್ರ ಸೂಚನೆ

ಹರೀಶ್‌ ಕೇರ

View all posts by this author