ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nandini prices: ನಂದಿನಿ ತುಪ್ಪ, ಬೆಣ್ಣೆ, ಪನೀರ್‌ ದರ ಇಳಿಕೆ; ಹಾಲು- ಮೊಸರು ಯಥಾಸ್ಥಿತಿ

KMF: ಹಾಲು ಹಾಗೂ ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿನ ಉತ್ಪನ್ನಗಳಿಗೆ ಮಾತ್ರ ದರ ಇಳಿಕೆ ಮಾಡಲಾಗಿದೆ. ಜಿಎಸ್‌ಟಿ ಅನ್ವಯ ಒಂದಷ್ಟು ಉತ್ಪನ್ನಗಳ ದರ ಇಳಿಸಿದ್ದೇವೆ. ಸೆಪ್ಟೆಂಬರ್ 22ರಿಂದ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಬೆಂಗಳೂರಿನಲ್ಲಿ ಕೆಎಂಎಫ್ ಎಮ್.ಡಿ ಶಿವಸ್ವಾಮಿ ಹೇಳಿಕೆ ನೀಡಿದರು.

ನಂದಿನಿ ತುಪ್ಪ, ಬೆಣ್ಣೆ, ಪನೀರ್‌ ದರ ಇಳಿಕೆ; ಹಾಲು- ಮೊಸರು ಯಥಾಸ್ಥಿತಿ

-

ಹರೀಶ್‌ ಕೇರ ಹರೀಶ್‌ ಕೇರ Sep 20, 2025 1:40 PM

ಬೆಂಗಳೂರು : ಕೇಂದ್ರ ಸರ್ಕಾರ ಜಿಎಸ್‌ಟಿ (GST) ಕಡಿತದ ಬೆನ್ನಲ್ಲೇ ಕೆಎಂಎಫ್ (KMF) ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಸೆಪ್ಟೆಂಬರ್ 22ರಿಂದ ನಂದಿನಿ ಹಾಲಿನ ಕೆಲವು ಉತ್ಪನ್ನಗಳ ದರ (Nandini prices) ಇಳಿಕೆ ಮಾಡಲಿದೆ. ಆದರೆ ಹಾಲು (milk) ಮತ್ತು ಮೊಸರಿನ (curd) ದರ ಯಥಾಸ್ಥಿತಿ ಮುಂದುವರೆಯಲಿದೆ. ವಿಶೇಷವಾಗಿ ತುಪ್ಪ, ಬೆಣ್ಣೆ, ಪನೀರ್‌, ಚೀಸ್‌ ಇತ್ಯಾದಿಗಳ ಬೆಲೆ ಇಳಿಕೆ ಮಾಡಲಾಗಿದೆ.

1000 ಮಿಲಿ ಲೀಟರ್ ತುಪ್ಪ ಹಳೆಯ ದರ 650 ಇದ್ದರೆ, ಹೊಸ ದರ 610 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇನ್ನು 500 ಮಿಲಿ ಲೀಟರ್ ಬೆಣ್ಣೆ ಹಳೆಯ ದರ 306 ಇದ್ದರೆ ಹೊಸ ದರ 286 ರೂಪಾಯಿ ಇದೆ. ಇನ್ನು 1000 ಗ್ರಾಮ ಪನೀರ್ ಹಳೆಯ ದರ 425 ಇದ್ದರೆ, ಹೊಸ ದರ 408 ರೂಪಾಯಿ ಇದೆ. ಒಂದು ಲೀಟರ್ ಗುಡ್ ಲೈಫ್ ಹಾಲು, ಹಳೆಯ ದರ ರೂ.70 ಇದ್ದರೆ, ಹೊಸ ದರ 68 ರೂಪಾಯಿ ಇದೆ. ಚೀಸ್ ಒಂದಕ್ಕೆ ಹಳೆಯ ದರ 480 ಇದ್ದರೆ ಹೊಸ ದರ 450 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸಂಸ್ಕರಿಸಿದ ಚೀಸ್ ಹಳೆಯ ದರ 530 ಇದ್ದರೆ ಹೊಸ ದರ 497ಕ್ಕೆ ಇಳಿಕೆ ಮಾಡಲಾಗಿದೆ.

ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡುವ ವಿಚಾರವಾಗಿ, ಹಾಲು ಹಾಗೂ ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿನ ಉತ್ಪನ್ನಗಳಿಗೆ ಮಾತ್ರ ದರ ಇಳಿಕೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಕೆಎಂಎಫ್ ಎಮ್.ಡಿ ಶಿವಸ್ವಾಮಿ ಹೇಳಿಕೆ ನೀಡಿದರು. ಜಿಎಸ್‌ಟಿ ಇಳಿಕೆ ಅನ್ವಯ ಒಂದಷ್ಟು ಉತ್ಪನ್ನಗಳ ದರ ಇಳಿಸಿದ್ದೇವೆ. ಸೆಪ್ಟೆಂಬರ್ 22ರಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಮಾರಾಟಗಾರರು ಹಾಗೂ ಗ್ರಾಹಕರು ಯಾವುದೇ ಕಾರಣಕ್ಕೂ ಗೊಂದಲ ಆಗಬೇಡಿ. ಸೆಪ್ಟೆಂಬರ್ 21ರ ತನಕ ಹಳೆ ದರ ಮುಂದುವರೆಯುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Nandini products: ನಂದಿನಿ ಗ್ರಾಹಕರಿಗೆ ಸಿಹಿ ಸುದ್ದಿ! ಮೊಸರು, ತುಪ್ಪ, ಬೆಣ್ಣೆ ಬೆಲೆ ಇಳಿಕೆ ಸಾಧ್ಯತೆ