ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಸಂಧಿ ರಕ್ಷಣೆಗೆ ಅಮೆರಿಕದ ಜತೆ ನಿಲ್ಲುತ್ತಾ ಚೀನಾ?

ಯುಎಸ್ ಮತ್ತು ಇಸ್ರೇಲ್ ಸೇನಾ ಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿ ಜಾಗತಿಕ ವ್ಯಾಪಾರ ಚಟುವಟಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಜಲಸಂಧಿಯ ದಾರಿಯನ್ನು ಸುರಕ್ಷಿತಗೊಳಿಸಲು ಚೀನಾ ಸೇರಿದಂತೆ ಹಲವಾರು ರಾಷ್ಟ್ರಗಳ ಬೆಂಬಲ ಕೋರಿದ್ದರು. ಇದಕ್ಕೆ ಈಗ ಚೀನಾ ಮೊದಲ ಪ್ರತಿಕ್ರಿಯೆ ನೀಡಿದೆ.

ಇರಾನ್ ವಿರುದ್ಧ ಸಂಘರ್ಷಕ್ಕೆ ಇಳಿಯುತ್ತ ಚೀನಾ?

ಸಂಗ್ರಹ ಚಿತ್ರ -

ಇರಾನ್: ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿ (Strait Of Hormuz) ಕಳೆದ ಎರಡು ವಾರಗಳಿಂದ ಮುಚ್ಚಿದ್ದು, ಇರಾನ್ (Iran war) ಇದರ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಿದೆ. ಫೆಬ್ರವರಿ 28ರ ಬಳಿಕ ಯುಎಸ್, ಇಸ್ರೇಲ್ ನಡೆಸುತ್ತಿರುವ ದಾಳಿಗೆ ಪ್ರತೀಕಾರವಾಗಿ ಇರಾನ್ ಈ ಜಲಮಾರ್ಗವನ್ನು ಮುಚ್ಚಿ ಜಾಗತಿಕ ವ್ಯಾಪಾರ ಚಟುವಟಿಕೆಗೆ ಅಡ್ಡಿಪಡಿಸಿದೆ. ಈ ಜಲಸಂಧಿಯ ದಾರಿಯನ್ನು ಸುರಕ್ಷಿತಗೊಳಿಸಲು ಹಾಗೂ ಇಲ್ಲಿ ಸಾಗುವ ಹಡಗುಗಳಿಗೆ ಬೆಂಗಾವಲು ನೀಡಲು ಯುದ್ಧ ನೌಕೆಗಳನ್ನು ಕಳುಹಿಸಲು ಚೀನಾ (china) ಸೇರಿದಂತೆ ಹಲವಾರು ರಾಷ್ಟ್ರಗಳ ಬೆಂಬಲ ಕೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಚೀನಾ ಈಗ ಪ್ರತಿಕ್ರಿಯೆ ನೀಡಿದೆ.

ಡೊನಾಲ್ಡ್ ಟ್ರಂಪ್ ಸಹಾಯ ಕೇಳಿದ ಕೆಲವೇ ಗಂಟೆಗಳ ಬಳಿಕ ಪ್ರತಿಕ್ರಿಯೆ ನೀಡಿರುವ ಬೀಜಿಂಗ್, ಜಾಗತಿಕ ಸರಕು ಮತ್ತು ಇಂಧನ ವ್ಯಾಪಾರಕ್ಕೆ ಹೊರ್ಮುಜ್ ಜಲಸಂಧಿ ಜಲಮಾರ್ಗವು ಪ್ರಮುಖ ಮಾರ್ಗವಾಗಿದೆ ಎಂದು ಹೇಳಿದೆ.

ಭಾರತಕ್ಕೆ ಎಲ್‌ಪಿಜಿ ಹೊತ್ತು ತರುವ ನೌಕೆಗೆ ಮಾತ್ರ ಹೊರ್ಮುಜ್ ಜಲಸಂಧಿಯ ದಾರಿ ಬಿಡಲು ಇರಾನ್ ಒಪ್ಪಿಗೆ

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಅವರು ಪ್ರತಿಕ್ರಿಯೆ ನೀಡಿ, ಹೊರ್ಮುಜ್ ಜಲಸಂಧಿ ಮತ್ತು ಸುತ್ತಮುತ್ತಲಿನ ನೀರು ಅಂತಾರಾಷ್ಟ್ರೀಯ ಹಡಗು ಮಾರ್ಗಗಳಾಗಿವೆ. ಈ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅಂತಾರಾಷ್ಟ್ರೀಯ ಸಮುದಾಯದ ಸಾಮಾನ್ಯ ಹಿತಾಸಕ್ತಿಯಾಗಿದೆ ಎಂದು ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿ ಮೂಲಕ ಹಡಗುಗಳಿಗೆ ಬೆಂಗಾವಲು ನೀಡಲು ಹಲವಾರು ದೇಶಗಳು ಒಕ್ಕೂಟವನ್ನು ರಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಸೋಮವಾರ ಒಪ್ಪಿಕೊಂಡಿವೆ. ಇದಕ್ಕೆ ಸಂಬಂಧಿಸಿ ಚೀನಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಯುದ್ಧನೌಕೆಗಳನ್ನು ಕಳುಹಿಸಲು ಟ್ರಂಪ್ ಕರೆ ನೀಡಿದ್ದರು. ಈ ನಡುವೆ ಚೀನಾ ಸಂಬಂಧಿತ ಹಡಗುಗಳಿಗೆ ವಿಶೇಷವಾಗಿ ತೈಲ ಟ್ಯಾಂಕರ್‌ಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಇರಾನ್ ಅನುಮತಿ ನೀಡಿದೆ ಎನ್ನಲಾಗಿದೆ.

ಹೊರ್ಮುಜ್ ಜಲಸಂಧಿ ಮೈತ್ರಿಕೂಟ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಚಿಸಿರುವ ಹೊರ್ಮುಜ್ ಜಲಸಂಧಿ ಮೈತ್ರಿಕೂಟ ಸೇರಲು ಅವರು ಹಲವು ದೇಶಗಳನ್ನು ಒತ್ತಾಯಿಸುತ್ತಿದ್ದಾರೆ. ಮುಖ್ಯವಾಗಿ ಈ ದಾರಿಯಲ್ಲಿ ತೈಲ ಸಾಗಣೆಯನ್ನು ಹೆಚ್ಚು ಅವಲಂಬಿಸಿರುವ ದೇಶಗಳು ಅದನ್ನು ರಕ್ಷಿಸಲು ಸಹಾಯ ಮಾಡಬೇಕು ಎಂದು ಹೇಳಿದ್ದರು.

ಪ್ರತಿಯೊಂದು ದೇಶವೂ ಒಳಗೆ ಬಂದು ತಮ್ಮ ಸ್ವಂತ ಪ್ರದೇಶವನ್ನು ರಕ್ಷಿಸಿಕೊಳ್ಳಬೇಕೆಂದು ಒತ್ತಾಯಿಸುವುದಾಗಿ ಹೇಳಿದ ಅವರು, ಈ ಪ್ರದೇಶ ಎಲ್ಲರಿಗೂ ಸೇರಿದೆ. ಹೀಗಾಗಿ ಎಲ್ಲರೂ ಬಂದು ಅದನ್ನು ರಕ್ಷಿಸಲು ನಮಗೆ ಸಹಾಯ ಮಾಡಬೇಕು ಎಂದರು.

ಚೀನಾದ ಕಚ್ಚಾ ತೈಲ ಆಮದುಗಳಲ್ಲಿ ಸುಮಾರು ಶೇ.90ರಷ್ಟು ತೈಲ ಈ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಯುನೈಟೆಡ್ ಸ್ಟೇಟ್ಸ್ ಕೇವಲ ತನ್ನ ತೈಲ ಪೂರೈಕೆಯ ಶೇ. 1 ಅಥವಾ 2ರಷ್ಟಕ್ಕೇ ಮಾತ್ರ ಇದನ್ನು ಅವಲಂಬಿತವಾಗಿದೆ. ಆದರೂ ಇಲ್ಲಿ ಆಗಿರುವ ಅಡಚಣೆಯನ್ನು ತೆರವುಗೊಳಿಸಲು ಚೀನಾ ಏಕೆ ಮುಂದೆ ಬರುತ್ತಿಲ್ಲ ಎಂದು ಟ್ರಂಪ್ ಪ್ರಶ್ನಿಸಿದ್ದರು.

Iran Israel War: ಇರಾನ್‌ನ ಮೃತ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಬಳಸುತ್ತಿದ್ದ ವಿಮಾನ ಧ್ವಂಸಗೊಳಿಸಿದ ಇಸ್ರೇಲ್‌

ಕಳೆದ ಎರಡು ದಶಕಗಳಲ್ಲಿ ಬೀಜಿಂಗ್ ಇಲ್ಲಿ ಉಂಟಾಗುವ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಇಂಧನ ಪೂರೈಕೆಗಳಲ್ಲಿ ಅಳವಡಿಸಿಕೊಂಡಿದೆ. ಹಲವಾರು ನಿಕ್ಷೇಪಗಳನ್ನು ನಿರ್ಮಿಸಿದೆ ಎನ್ನುತ್ತಾರೆ ವಿಶ್ಲೇಷಕರು.

ಚೀನಾ ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು ಸಹಾಯ ಮಾಡದಿದ್ದರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ತಮ್ಮ ಯೋಜಿತ ಶೃಂಗಸಭೆ ವಿಳಂಬವಾಗಬಹುದು ಎಂದು ಹೇಳಿರುವ ಟ್ರಂಪ್, ಈ ಜಲಸಂಧಿಯ ಪ್ರಯೋಜನ ಪಡೆಯುವವರು ಇಲ್ಲಿ ಯಾವುದೇ ಕೆಟ್ಟ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಸಹಾಯ ಮಾಡುವುದು ಒಳ್ಳೆಯದು ಎಂದು ಎಚ್ಚರಿಕೆ ನೀಡಿದ್ದಾರೆ.