Earthquake: ಕೊಡಗು ಜಿಲ್ಲೆಯಲ್ಲಿ ಲಘು ಭೂಕಂಪ, 1.6 ರಿಕ್ಟರ್ ದಾಖಲು
ಮದೆನಾಡು ಸುತ್ತಮುತ್ತಲಿನ 15 ರಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಯಾವುದೇ ಹಾನಿಯಾಗಿಲ್ಲ KSNDMC ಎಂದು ಮಾಹಿತಿ ನೀಡಿದೆ. ಕೊಡಗಿನಲ್ಲಿ 2018 ಹಾಗೂ ಕಳೆದ ವರ್ಷವೂ ಸಹ ಭೂಕಂಪನದ ಅನುಭವಾಗಿತ್ತು.

ಕೊಡಗು

ಮಡಿಕೇರಿ: ಕೊಡಗು (Coorg news) ಜಿಲ್ಲೆಯ ಹಲವೆಡೆ ಬುಧವಾರ 1.6 ತೀವ್ರತೆಯ ಲಘು ಭೂಕಂಪದ (Earthquake) ಅನುಭವವಾಗಿದೆ. ಮದೆನಾಡು ಗ್ರಾಮ ಪಂಚಾಯಿತಿಯ ವಾಯವ್ಯ ದಿಕ್ಕಿನಲ್ಲಿ 2.4 ಕಿಮೀ ದೂರದ 5 ಕಿಮೀ ಆಳವನ್ನು ಭೂಕಂಪದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ರಿಕ್ಟರ್ ಮಾಪಕದಲ್ಲಿ ಸುಮಾರು 1.6 ರಷ್ಟು ಪ್ರಮಾಣದಲ್ಲಿ ಭೂಕಂಪನ ದಾಖಲಾಗಿದೆ. ನಿನ್ನೆ ಬೆಳಗ್ಗೆ 10.49ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಮದೆನಾಡು ಸುತ್ತಮುತ್ತಲಿನ 15 ರಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಯಾವುದೇ ಹಾನಿಯಾಗಿಲ್ಲ KSNDMC ಎಂದು ಮಾಹಿತಿ ನೀಡಿದೆ. ಕೊಡಗಿನಲ್ಲಿ 2018 ಹಾಗೂ ಕಳೆದ ವರ್ಷವೂ ಸಹ ಭೂಕಂಪನದ ಅನುಭವಾಗಿತ್ತು.
ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಯಾದಗಿರಿ: ಕೌಟುಂಬಿಕ ಕಲಹದಿಂದ ನೊಂದ ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ವಡಗೇರಾ ತಾಲೂಕಿನ ಕಂಠಿ ತಾಂಡಾದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ನೀಲಾಬಾಯಿ ಶಂಕರ್ (35) ಪುತ್ರಿಯರಾದ ರಾಜೇಶ್ವರಿ (10) ನಿಶಾ (4) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಶೀಲ ಶಂಕಿಸಿ ಗಂಡನ ನಿರಂತರ ಕಿರುಕುಳ ನೀಡಿದ್ದೆ ಮಹಿಳೆಯ ಆತ್ಮಹತ್ಯೆಗೆ ಪ್ರಮುಖ ಕಾರಣವೆಂದು ಸಂಬಂಧಿಕರೊಬ್ಬರು ಆರೋಪಿಸಿದ್ದಾರೆ.
ಮೃತ ದುರ್ದೈವಿ ನೀಲಾಬಾಯಿಗೆ ನಾಲ್ವರು ಪುತ್ರಿಯರು, ಒರ್ವ ಪುತ್ರ ಒಟ್ಟು ಐದು ಜನ ಮಕ್ಕಳಿದ್ದು, ಬೇಬಿ (12) ಹಾಗೂ 11 ತಿಂಗಳು ಗಂಡು ಮಗು ಶೆವಾನನ್ನು ಮನೆಯಲ್ಲಿ ಬಿಟ್ಟು, ಇನ್ನುಳಿದ ಮೂವರು ಹೆಣ್ಣು ಮಕ್ಕಳನ್ನು ಜತೆಯಲ್ಲಿ ಕರೆದುಕೊಂಡು ತಾಂಡಾದ ಬಳಿ ಇರುವ ಬಾವಿ ಬಳಿ ಹೋಗಿದ್ದಾಳೆ. ಮೊದಲು ಇಬ್ಬರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿದ್ದಾಳೆ, ಇನ್ನೊಬ್ಬ ಮಗಳು ಸಂಜು (6) ಬಾವಿಗೆ ತಳ್ಳುವಾಗ ತಪ್ಪಿಸಿಕೊಂಡು ಓಡಿ ಹೋಗಿ ತಾಂಡಾದಲ್ಲಿ ಈ ವಿಷಯ ತಿಳಿಸಿದ್ದಾಳೆ. ಅಲ್ಲಿನ ನಿವಾಸಿಗಳು ಬಾವಿಯ ಹತ್ತಿರ ಬರುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ವಿಷಯ ತಿಳಿದ ಸಂಬಂಧಿಕರು ಮತ್ತು ತಾಂಡಾದ ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಶಂಕರ್, ಡಿವೈಎಸ್ಪಿ ಅರುಣ್ ಕುಮಾರ್, ತಹಸೀಲ್ದಾರ್ ಶ್ರೀನಿವಾಸ್ ಚಾಪೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: Hit and Run: ಉಡುಪಿ ಬಳಿ ಹಿಟ್ ಆ್ಯಂಡ್ ರನ್, ಬೈಕ್ ಸವಾರ ಸಾವು