ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚುಮುಚುಮು ಚಳಿಗೆ ಬಿಸಿಬಿಸಿ ಕಾಫಿ ಸಪ್ಲೈ ಮಾಡುವ ವಾಕಿಂಗ್ ಶಾಪ್: ಗಮನ ಸೆಳೆದ ಯುವಕನ ಹೊಸ ಐಡಿಯಾ

ಟೀ, ಕಾಫಿಗೆ ಅಡಿಕ್ಟ್ ಆಗಿರುವವರು ಅದನ್ನು ಪದೇ ಪದೆ ಸೇವಿಸುತ್ತಲೇ ಇರುತ್ತಾರೆ. ಅದರಲ್ಲೂ ಈ ಚಳಿ ವಾತಾವರಣಕ್ಕೆ ಬಿಸಿ ಬಿಸಿ ಪಾನೀಯ ಸಿಕ್ಕರೆ ಕೆಲವರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗುತ್ತದೆ. ಆದರೆ ಕೆಲವೊಮ್ಮೆ ಟೀ ಅಥವಾ ಕಾಫಿ ಇಲ್ಲದೆ ತಲೆ ನೋವು ಉಂಟಾದಾಗ ಹತ್ತಿರದಲ್ಲಿ ಯಾವ ಅಂಗಡಿ ಇಲ್ಲದಾಗ ಉಂಟಾಗುವ ನಿರಾಸೆ ಹೇಳತೀರದು. ಇದಕ್ಕಿಗ ಹೊಸ ಐಡಿಯಾ ಒಂದನ್ನು ಯುವಕನೊಬ್ಬ ಕಂಡು ಹಿಡಿದಿದ್ದಾನೆ. ಓಡಾಡಿಕೊಂಡೆ ಕಾಫಿ ತಯಾರಿಸಿ ವಿತರಿಸುತ್ತಿದ್ದಾನೆ. ಆತ ತನ್ನ ಮೈತುಂಬ ಕಪ್‌ ಅಳವಡಿಸಿಕೊಂಡಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ವಾಕಿಂಗ್ ಕಾಫಿ ಶಾಪ್: ಯುವಕನ ಹೊಸ ಐಡಿಯಾ ವೈರಲ್‌

ವಾಕಿಂಗ್ ಕಾಫಿ ಶಾಪ್ -

Profile
Pushpa Kumari Dec 25, 2025 5:20 PM

ನವದೆಹಲಿ, ಡಿ. 25: ಈಗಂತೂ ಎಲ್ಲ ಕಡೆ ಚಳಿಯ ವಾತಾವರಣವಿದ್ದು, ದೊಡ್ಡ ದೊಡ್ಡ ಹೊಟೇಲ್‌ನಿಂದ ರಸ್ತೆ ಬದಿಯ ಸಣ್ಣ ಪುಟ್ಟ ಗೂಡಂಗಡಿಗಳ ತನಕ ಟೀ, ಕಾಫಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಟೀ, ಕಾಫಿಗೆ ಅಡಿಕ್ಟ್ ಆಗಿರುವವರು ಒಂದು ಸಿಪ್ ಟೀ ಅಥವಾ ಕಾಫಿ ಕುಡಿಯಬೇಕು ಎಂದು ಮನಸಾದಾಗ ರಸ್ತೆ ಬದಿಯ ಅಂಗಡಿಗೆ ತೆರಳುತ್ತಾರೆ. ಆದರೆ ಇನ್ನು ಕೆಲವೊಮ್ಮೆ ಟೀ ಅಥವಾ ಕಾಫಿ ಇಲ್ಲದೆ ತಲೆ ನೋವು ಉಂಟಾದಾಗ ಹತ್ತಿರದಲ್ಲಿ ಯಾವ ಶಾಪ್ ಇಲ್ಲದಾಗ ಉಂಟಾಗುವ ನಿರಾಸೆ ಹೇಳತೀರದು. ಇದಕ್ಕೀಗ ಹೊಸ ಪರಿಹಾರವೊಂದನ್ನು ಯುವಕನೊಬ್ಬ ಕಂಡು ಹಿಡಿದಿದ್ದಾನೆ. ಅಂಗಡಿಗಳ ತಂಟೆ ತಕರಾರು ಇಲ್ಲದೆ ಓಡಾಡಿಕೊಂಡೆ ಕಾಫಿ ತಯಾರಿಸಿ ಮಾರಾಟ ಮಾಡುತ್ತಿದ್ದಾನೆ. ಸದ್ಯ ಆತನ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.

ಹೆಚ್ಚಾಗಿ ಅಂಗಡಿ ಮುಂಗಟ್ಟುಗಳಲ್ಲಿ ಚಹಾ, ಕಾಫಿ, ತಿಂಡಿ ತಯಾರು ಮಾಡಬೇಕು ಎಂದರೆ ಅದಕ್ಕೆ ಲೈಸೆನ್ಸ್ ಪಡೆಯುವುದು ಕಡ್ಡಾಯ. ಅದರ ಜತೆಗೆ ಟ್ಯಾಕ್ಸ್ ಕೂಡ ಕಟ್ಟಬೇಕು. ಆದರೆ ಇದ್ಯಾವುದರ ಸಮಸ್ಯೆ ಇಲ್ಲದೆ ಸರಳವಾಗಿ ಟೀ, ಕಾಫಿಯನ್ನು ಕ್ಷಣಾರ್ಧದಲ್ಲಿ ತಯಾರಿಸಿ ಮಾರಾಟ ಮಾಡಬಹುದು ಎಂದು ಈ ಯುವಕ ತೋರಿಸಿಕೊಟ್ಟಿದ್ದಾನೆ. ಬಸ್‌ನಲ್ಲಿ ತೆರಳಲು ಕಾಯುವ ಪ್ರಯಾಣಿಕರಿಂದ ಹಿಡಿದು ಪಾದಾಚಾರಿಗಳವರೆಗೂ ಗ್ರಾಹಕರಿಗೆ ಟೀ, ಕಾಫಿ ವಿತರಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ.

ವಿಡಿಯೊ ನೋಡಿ:

ವೈರಲ್ ಆದ ವಿಡಿಯೊದಲ್ಲಿ ಯುವಕ ಲೈಫ್ ಜಾಕೆಟ್ ಮಾದರಿಯ ಜಾಕೆಟ್‌ ಧರಿಸಿರುವುದನ್ನು ಕಂಡು ಬಂದಿದೆ. ಅದರಲ್ಲಿ ಕಾಫಿ ಮಾಡಲು ಬೇಕಾದ ಅಷ್ಟೂ ವಸ್ತುಗಳ ಜತೆ ಕಪ್‌ ಕೂಡ ಇದೆ. ಕಾಫಿ ಪುಡಿ, ಪೇಪರ್ ಗ್ಲಾಸ್, ಸಕ್ಕರೆ, ಹಾಲು ಪುಡಿ ಎಲ್ಲವನ್ನು ಜತೆಗೆ ಕಟ್ಟಿಕೊಂಡು ಬೇಕಾದಾಗ ಕಾಫಿ ತಯಾರಿಸಿ ಮಾರುತ್ತಿರುವ ದೃಶ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ. ಈ ವಿಡಿಯೊ ಹಂಚಿಕೊಂಡ ಕೆಲವೇ ಗಂಟೆಯಲ್ಲಿ ವೈರಲ್‌ ಆಗಿದೆ. ಆದರೆ ಈ ಯುವಕ ಯಾರು? ಇದು ಕಂಡು ಬಂದಿದ್ದು ಎಲ್ಲಿ ಎನನುವ ವಿವರ ತಿಳಿದು ಬಂದಿಲ್ಲ.

ಏಕಾಏಕಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ದೈತ್ಯ ಸರ್ಪ.... ಎದ್ನೋ ಬಿದ್ನೋ ಓಡಿದ ಜನ

ಇನ್‌ಸ್ಟಾಗ್ರಾಮ್‌ನಲ್ಲಿನ ವಿಡಿಯೊದಲ್ಲಿ ಈ ವ್ಯಕ್ತಿ ತನ್ನ ದೇಹದ ಸುತ್ತಲೂ ಬೇಕಾದ ಎಲ್ಲ ಉಪಕರಣಗಳನ್ನು ಕಟ್ಟಿಕೊಂಡಿದ್ದು ನಿಜಕ್ಕು ಕ್ರಿಯೆಟಿವ್ ಐಡಿಯಾ ಎಂಬಂತಿದೆ. ಬಿಸಿ ಕಪ್ ಕಾಫಿ ತಯಾರಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಜತೆಗೆ ಈತನ ಬಳಿ ಟೀ ಆಯ್ಕೆಯೂ ಇದೆ. ಇದು ಒಂದು ಸ್ಮಾರ್ಟ್ ಐಡಿಯಾ ಆಗಿದ್ದು ನಿರುದ್ಯೋಗ ಯುವಕ , ಯುವತಿಯ ಸ್ವುಸ್ಯೋಗಕ್ಕೆ ಈ ಮಾದರಿ ಬಳಸಬಹುದು ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿ ಕಪ್‌ಗೆ ಬಿಸಿನೀರನ್ನು ಸುರಿದು, ಬಳಿಕ ಕಪ್ ಕಾಫಿಗೆ ಕೆಲವು ಚಾಕೊಲೇಟ್ ಸಿರಪ್‌ ಹಾಕಿ ಅದನ್ನು ಮಿಕ್ಸ್‌ ಮಾಡುವಾಗ ನಮಗೂ ಕುಡಿಯಬೇಕು ಎಂದೆನಿಸುತ್ತದೆ. ಇಂತಹ ಒಂದು ಕಲ್ಪನೆಯನ್ನು ಹುಟ್ಟುಹಾಕಿದ ಕಾಫಿ ಮಾರಾಟಗಾರನ ಪ್ರಯತ್ನವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಅದರ ಜತೆಗೆ ಮಾಸ್ಕ್‌ ಧರಿಸುವಂತೆ ಸಲಹೆಯನ್ನೂ ನೀಡಿದ್ದಾರೆ.