Kolar News: ಮುಡಿ ಕೊಡುತ್ತೇನೆ, ಪ್ರದೀಪ ನಾನು ಬೇಗ ಒಂದಾಗಬೇಕು... ಚಿಕ್ಕ ತಿರುಪತಿ ಹುಂಡಿಯಲ್ಲಿ ಸಿಕ್ತು ಲವ್‌ಲೆಟರ್!
ಯುವತಿಯೊಬ್ಬಳು ತನ್ನ ಪ್ರೀತಿ ಸಕ್ಸಸ್‌ಗೆ ಕೋರಿ ದೇವರ ಮೊರೆ ಹೋಗಿದ್ದಾಳೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಚಿಕ್ಕತಿರುಪತಿ ದೇವಾಲಯದ ಹುಂಡಿ ಎಣಿಕೆ ವೇಳೆ ಸಿಕ್ಕ ಪತ್ರ ಇದಾಗಿದ್ದು, ಪತ್ರದಲ್ಲಿ ವೆಂಕಟರಮಣ ಸ್ವಾಮಿ...ತಿರುಪತಿ ತಿಮ್ಮಪ್ಪ, ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗಬೇಕು ಎಂದು ಬರೆದಿದ್ದಳು.


ಕೋಲಾರ: ದೇವರ ಹುಂಡಿಯಲ್ಲಿ ಚಿತ್ರ-ವಿಚಿತ್ರ ಕೋರಿಕೆಗಳನ್ನು ಬರೆದಿರುವ ಪತ್ರಗಳು ಸಿಗುವುದು ಸರ್ವೇ ಸಾಮಾನ್ಯ. ಇದೀಗ ಮತ್ತೊಂದು ಅಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಇಲ್ಲಿನ ಚಿಕ್ಕತಿರುಪತಿ ದೇಗುಲ ಹುಂಡಿಯಲ್ಲೊಂದು ಪ್ರೇಮ ಕೋರಿಕೆ ಪತ್ರ ಸಿಕ್ಕಿದೆ. ಯುವತಿಯೊಬ್ಬಳು ತನ್ನ ಪ್ರೀತಿ ಸಕ್ಸಸ್‌ಗೆ ಕೋರಿ ದೇವರ ಮೊರೆ ಹೋಗಿದ್ದಾಳೆ. ಕೋಲಾರ ಜಿಲ್ಲೆ(Kolar News) ಮಾಲೂರು ತಾಲ್ಲೂಕು ಚಿಕ್ಕತಿರುಪತಿ ದೇವಾಲಯದ ಹುಂಡಿ ಎಣಿಕೆ ವೇಳೆ ಸಿಕ್ಕ ಪತ್ರ ಇದಾಗಿದ್ದು, ಪತ್ರದಲ್ಲಿ ವೆಂಕಟರಮಣ ಸ್ವಾಮಿ...ತಿರುಪತಿ ತಿಮ್ಮಪ್ಪ, ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗ ಬೇಕು,
ಅವನು ನನ್ನನ್ನು ತುಂಬಾ ಇಷ್ಟ ಪಡಬೇಕು. ನನ್ನ ಬಿಟ್ಟು ಇರಲು ಆಗದಂತೆ ಮಾಡು, ಆಫೀಸ್‌ನಲ್ಲಿ ಎಲ್ಲರಕ್ಕಿಂತ ಹೊರಗಡೆ ಎಲ್ಲರಿಗಿಂತ ನನ್ನ ಜಾಸ್ತಿ ಪ್ರೀತಿಸಬೇಕು. ಆದಷ್ಟು ಬೇಗ ನಾವಿಬ್ಬರೂ ಒಂದಾಗಬೇಕು, ಆಗ ಇಡೀ ಆಫೀಸ್ ನನ್ನ ಜೊತೆ ಆ ಬಗ್ಗೆ ಮಾತನಾಡಬೇಕು, ಆದಷ್ಟು ಬೇಗ ನನಗೆ ಏನು ಅವನ ಮೇಲೆ ಏನು ಫೀಲಿಂಗ್ ಇದಿಯೋ, ಅವನಿಗೂ ಅದಕ್ಕಿಂತ 7% ಜಾಸ್ತಿ ಫೀಲಿಂಗ್ಸ್ ಇರಬೇಕು ಎಂದು ಬರೆದು ಹುಂಡಿಯಲ್ಲಿ ಹಾಕಿದ್ದಾಳೆ. ಆ ಮೂಲಕ ತನ್ನ ಪ್ರೇಮ ನಿವೇದನೆಯನ್ನು ದೇವರ ಮುಂದಿಟ್ಟಿದ್ದಾಳೆ.
ಕಳೆದ ವರ್ಷ ಕಲಬುರಗಿಯಲ್ಲೂ ದೇವರ ಹುಂಡಿ ಎಣಿಕೆ ವೇಳೆ ವಿಚಿತ್ರ ಪತ್ರವೊಂದು ಸಿಕ್ಕಿತ್ತು. ಸೊಸೆಯೊಬ್ಬಳು ತನ್ನ ಅತ್ತೆ ಕಾಟ ತಾಳಲಾರದೇ ನೋಟಿನ ಮೇಲೆ ಏನೋ ಕೋರಿಕೆ ಬರೆದು ದೇವರ ಹುಂಡಿಗೆ ಹಾಕಿದ್ದಳು. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿರುವಂತ ಭಾಗ್ಯವಂತಿ ದೇವಿ ತುಂಬಾನೇ ಪ್ರಸಿದ್ಧ ದೇವಸ್ಥಾನ. ಈ ದೇವಾಲಯಕ್ಕೆ ಹಲವೆಡೆಯಿಂದ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸುವಂತೆ ಭಾಗ್ಯವಂತಿ ದೇವಿಯನ್ನು ಕೋರೋದು ರೂಢಿ.
ಈ ಸುದ್ದಿಯನ್ನೂ ಓದಿ: Chamarajanagar News: ಮಲೆ ಮಹದೇಶ್ವರ ದೇಗುಲದ ಹುಂಡಿ ಎಣಿಕೆ: 28 ದಿನಗಳಲ್ಲಿ 1.94 ಕೋಟಿ ರೂ. ಸಂಗ್ರಹ
ಈ ದೇವಸ್ಥಾನಕ್ಕೆ ಬಂದಿರುವಂತ ಸೊಸೆಯೊಬ್ಬರು 20 ರೂಪಾಯಿಯ ನೋಟಿನ ಮೇಲೆ ತಾಯಿ ನಮ್ಮ ಅತ್ತೆ ಬೇಗ ಸಾಯಲಿ ತಾಯಿ ಅಂತ ಹರಕೆ ಬರೆದು ಹಾಕಿರೋದು ದೇವಸ್ಥಾನದ ಹುಂಡಿಯನ್ನು ತೆರೆದು ಕಾಣಿಕೆ ಏಣಿಸುವಂತ ಸಂದರ್ಭದಲ್ಲಿ ಪತ್ತೆಯಾಗಿತ್ತು. 20 ರೂಪಾಯಿ ನೋಟಿನ ಮೇಲೆ ಅತ್ತೆಯ ಬಗ್ಗೆ ಸೊಸೆ ಬರೆದಿರುವಂತ ಬರಹ ಕಂಡಂತ ದೇವಸ್ಥಾನದವರು ಅಚ್ಚರಿ ಪಟ್ಟಿದ್ದಾರೆ. ಈಗ ಈ ಪೋಟೋ ಎಲ್ಲೆಡೆ ವೈರಲ್ ಆಗಿತ್ತು. ಹೀಗೆ ಅತ್ತೆ ಸಾಯುವಂತೆ ಕೋರಿಕೊಂಡ ಆ ಸೊಸೆ ಯಾರು ಎಂಬುದು ಗೊತ್ತಾಗಿಲ್ಲ.