Stree dogs Attack: ಕೋಲಾರದಲ್ಲಿ ಬಾಲಕನ ಮೇಲೆ ಬೀದಿನಾಯಿಗಳ ಬರ್ಬರ ದಾಳಿ
Kolar News: ಕೋಲಾರ ಜಿಲ್ಲೆ ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಮೂರು ಬೀದಿ ನಾಯಿಗಳು ದಾಳಿ ನಡೆಸಿ ಆತನನ್ನು ಎಳೆದಾಡಿ ಕಚ್ಚಿ ಗಾಯಗೊಳಿಸಿವೆ. ನಾಲ್ಕು ವರ್ಷದ ಅಲೆಕ್ಸ್ ಎಂಬ ಬಾಲಕ ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದಾನೆ.

-

ಕೋಲಾರ: ರಾಜ್ಯದಲ್ಲಿ ಬೀದಿ ನಾಯಿಗಳ (street Dogs attack) ಹಾವಳಿ ಹೆಚ್ಚಾಗಿದೆ. ಕೋಲಾರದಲ್ಲಿ (Kolara news) 4 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಮನೆಯ ಮುಂದಿನ ರಸ್ತೆಯಲ್ಲಿ ಒಂಟಿಯಾಗಿ ಹೋಗ್ತಿದ್ದ ಬಾಲಕನನ್ನು ನಾಯಿಗಳು ಕಚ್ಚಿ ಎಳೆದಾಡಿವೆ. ಈ ದೃಶ್ಯ ಸಿಸಿಟಿವಿಯಲ್ಲಿ (CCTV footage) ಸೆರೆಯಾಗಿದೆ.
ಕೋಲಾರ ಜಿಲ್ಲೆ ಕೆಜಿಎಫ್ ನಗರದ ಬಾಲಕೃಷ್ಣ ಬಡಾವಣೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಮೂರು ಬೀದಿ ನಾಯಿಗಳು ದಾಳಿ ನಡೆಸಿ ಆತನನ್ನು ಎಳೆದಾಡಿ ಕಚ್ಚಿ ಗಾಯಗೊಳಿಸಿವೆ. ನಾಲ್ಕು ವರ್ಷದ ಅಲೆಕ್ಸ್ ಎಂಬ ಬಾಲಕ ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದಾನೆ. ತಕ್ಷಣ ಪೋಷಕರು ಮಗನನ್ನು ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬೀದಿ ನಾಯಿ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Stray Dogs: 2 ಬಾರಿ ಕಚ್ಚುವ ಬೀದಿ ನಾಯಿಗೆ ಜೀವಾವಧಿ ಶಿಕ್ಷೆ! ಏನಿದು ಹೊಸ ಆದೇಶ?
ಕೋಲಾರದಲ್ಲಿ ಅಪಘಾತ, ಒಬ್ಬ ಸಾವು
ಕೋಲಾರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕೆಜಿಎಫ್ ಹೊರವಲಯದ ಕೃಷ್ಣವರಂ ಮತ್ತು ಸೀ ಲೈಟ್ ರಸ್ತೆಯ ನಡುವೆ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಐವರು ಇದ್ದ ಕಾರು ಪಲ್ಟಿಯಾಗಿ, 10 ಅಡಿ ಆಳದ ಮೋರಿಗೆ ಬಿದ್ದಿದೆ. ಈ ಅಪಘಾತದಲ್ಲಿ 48 ವರ್ಷ ಪ್ರಾಯದ ಕರ್ಣ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ದೇವಿ, ವಿಯನಸೈ, ಡೆನ್ನಿಸ್, ಶೆರ್ಲಿ ಎಂಬ ನಾಲ್ವರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಕಾರಿನ ಗಾಜು ವಿದ್ಯುತ್ ಲೈನ್ ಮೇಲೆ ಹಾರಿ ಬಿದ್ದಿದೆ. ಈ ಸಂಬಂಧ ಕೆಜಿಎಫ್ ನ ಬೆಮೆಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.