ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಗುಂಡು ತಾಗಿದ್ದ ಮಹಿಳೆ ಆರೋಗ್ಯ ವಿಚಾರಿಸಿದ್ದೇ ತಪ್ಪಾಯ್ತಾ? ಭಾರತೀಯನ ತಲೆಗೇ ಶೂಟ್‌ ಮಾಡಿದ ಅಮೆರಿಕ್‌ ಪ್ರಜೆ

ತನ್ನೊಂದಿಗೆ ಇದ್ದ ಮಹಿಳೆಯ ಮೇಲೆ ಗುಂಡಿಕ್ಕಿದ ಸ್ಟಾನ್ಲಿ ಯುಜೀನ್ ವೆಸ್ಟ್ ಎಂಬಾತ ಬಳಿಕ ತಾನು ಮತ್ತು ಮಹಿಳೆ ತಂಗಿದ್ದ ಮೋಟೆಲ್ ಮಾಲೀಕ ರಾಕೇಶ್ ಎಹಗಾಬನ್ (51) ಎಂಬವರಿಗೆ ಗುಂಡು (US Murder Case) ಹಾರಿಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಾಕೇಶ್ ಎಹಗಾಬನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ಭಾರತೀಯನನ್ನು ಗುಂಡಿಕ್ಕಿ ಕೊಂದ ವ್ಯಕ್ತಿ

-

ಪಿಟ್ಸ್‌ಬರ್ಗ್‌: ಮೋಟೆಲ್ ನಲ್ಲಿ ತಂಗಿದ್ದ ವ್ಯಕ್ತಿಯು ಭಾರತೀಯ ಮೂಲದ (Indian Origin man) ಮೋಟೆಲ್ ಮಾಲೀಕನ ಮೇಲೆ ಗುಂಡು (Murder Case) ಹಾರಿಸಿದ ಘಟನೆ ಅಮೆರಿಕದಲ್ಲಿ (America) ನಡೆದಿದೆ. ಮೋಟೆಲ್ ಮಾಲೀಕ (Motel Owner) ರಾಕೇಶ್ ಎಹಗಾಬನ್ (51) ಎಂಬವರಿಗೆ ಗುಂಡು ಹಾರಿಸಿದ ಬಳಿಕ ಆರೋಪಿಯು ಬಳಿಕ ಬನ್ ಅವರ ಬಳಿ ನೀವು ಚೆನ್ನಾಗಿದ್ದೀರಾ, ಬಡ್? ಎಂದು ಕೇಳಿದ್ದಾನೆ ಎನ್ನಲಾಗಿದೆ. ರಾಕೇಶ್ ಎಹಗಾಬನ್ ಅವರಿಗೆ ಗುಂಡು ಹಾರಿಸುವ ಮೊದಲು ಆರೋಪಿಯು ತನ್ನೊಂದಿಗೆ ಇದ್ದ ಮಹಿಳೆ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಸುಮಾರು ಎರಡು ವಾರಗಳ ಮೊದಲು ಮೋಟೆಲ್‌ನಲ್ಲಿ ತಂಗಿದ್ದ ಆರೋಪಿಯು ಮಹಿಳೆ ಮತ್ತು ಮಗುವಿನೊಂದಿಗೆ ತಂಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಮೇಲೆ ಶುಕ್ರವಾರ ಗುಂಡು ಹಾರಿಸಿದ ಆರೋಪಿಯು ಬಳಿಕ ರಾಕೇಶ್ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮೋಟೆಲ್ ಮಾಲೀಕ ರಾಕೇಶ್ ಎಹಗಾಬನ್ ಅವರು ಮಹಿಳೆ ಮತ್ತು ಆರೋಪಿಯ ನಡುವೆ ನಡೆಯುತ್ತಿದ್ದ ವಿವಾದವನ್ನು ಪರಿಶೀಲಿಸಲು ಹೋದಾಗ ಈ ಘಟನೆ ನಡೆದಿದೆ. ಪಾರ್ಕಿಂಗ್ ಸ್ಥಳದಲ್ಲಿ ನಡೆಯುತ್ತಿದ್ದ ಗದ್ದಲ ಕೇಳಿ ಅಲ್ಲಿಗೆ ಬಂದ ರಾಕೇಶ್ ತಲೆಗೆ ಶೂಟ್ ಮಾಡಿದ ಆರೋಪಿ ಬಳಿಕ ಅವರ ಬಳಿಗೆ ಬಂದು ನೀವು ಚೆನ್ನಾಗಿದ್ದೀರಾ ಬಡ್? ಎಂದು ಕೇಳಿದ್ದನು. ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಕೇಶ್ ಮೇಲೆ ದಾಳಿ ನಡೆಸಿದ ವ್ಯಕ್ತಿಯನ್ನು ಸ್ಟಾನ್ಲಿ ಯುಜೀನ್ ವೆಸ್ಟ್ (37) ಎಂದು ಗುರುತಿಸಲಾಗಿದೆ. ಘಟನೆಯ ಪೂರ್ತಿ ದೃಶ್ಯಾವಳಿಯು ಮೋಟೆಲ್ ನ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಆರೋಪಿ ಸ್ಟಾನ್ಲಿ ಯುಜೀನ್ ವೆಸ್ಟ್ ಸುಮಾರು ಎರಡು ವಾರಗಳ ಮೊದಲು ಮಹಿಳೆ ಮತ್ತು ಮಗುವಿನೊಂದಿಗೆ ಮೋಟೆಲ್‌ಗೆ ಬಂದು ತಂಗಿದ್ದನು. ಎಹಗಾಬನ್ ಮೇಲೆ ಗುಂಡು ಹಾರಿಸುವ ಮೊದಲು ಆತ ಮೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಮಗುವಿನೊಂದಿಗೆ ಕಾರಿನಲ್ಲಿ ಕುಳಿತಿದ್ದಾಗ ಆರೋಪಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಗಾಯಗೊಂಡ ಮಹಿಳೆ ಹತ್ತಿರದ ಆಟೋ ಸರ್ವಿಸ್ ಸೆಂಟರ್‌ಗೆ ಓಡಿದ್ದಾಳೆ. ತಕ್ಷಣ ಅವಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಆರೋಪಿಯು ತಪ್ಪಿಸಿಕೊಂಡಿದ್ದಾನೆ. ಸ್ಟಾನ್ಲಿ ಯುಜೀನ್ ವೆಸ್ಟ್ ವಿರುದ್ಧ ಕ್ರಿಮಿನಲ್ ದೂರು ದಾಖಲಾಗಿದೆ.

ದಾಳಿಯ ಅನಂತರ ಸ್ಟಾನ್ಲಿ ಯುಜೀನ್ ವೆಸ್ಟ್ ಅನ್ನು ಬೆನ್ನತ್ತಿದ್ದ ಪೊಲೀಸರು ಪಿಟ್ಸ್‌ಬರ್ಗ್‌ನ ಈಸ್ಟ್ ಹಿಲ್ಸ್ ಪ್ರದೇಶದಲ್ಲಿ ಆರೋಪಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರಿಗೆ ಗಾಯವಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಸ್ಟ್‌ನ ಮೇಲೂ ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದು, ಆತನಿಗೂ ಗಾಯಗಳಾಗಿವೆ. ಅವನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Fire Accident: ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಎಂಟು ಮಂದಿ ಸಜೀವ ದಹನ

ಸುಮಾರು ಒಂದು ತಿಂಗಳ ಹಿಂದೆ ವಾಷಿಂಗ್ ಮೆಷಿನ್‌ಗೆ ಸಂಬಂಧಿಸಿದ ವಿವಾದದಿಂದ ಭಾರತೀಯ ಮೂಲದ ಮೋಟೆಲ್ ಮ್ಯಾನೇಜರ್‌ನ ಶಿರಚ್ಛೇದನ ಮಾಡಲಾಗಿತ್ತು. ಇದಾದ ಒಂದು ತಿಂಗಳ ಬಳಿಕ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.