ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Koppal Horror: ಆನ್‌ಲೈನ್‌ ಗೇಮ್‌ ಆಡದಂತೆ ಬುದ್ಧಿಮಾತು; ಕೊಪ್ಪಳದಲ್ಲಿ ತಂದೆ, ಅಕ್ಕನನ್ನು ಕತ್ತು ಸೀಳಿ ಕೊಂದ ಬಾಲಕ!

ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಬಾಲಕ ಮೊಬೈಲ್ ದಾಸನಾಗಿದ್ದ. ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಬಾಲಕನ ತಾತ ನೀಡಿದ ದೂರಿನ ಮೇರೆಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗಂಗಾವತಿ: ಆನ್‌ಲೈನ್‌ ಗೇಮ್‌ ಆಡದಂತೆ ಬುದ್ಧಿಮಾತು ಹೇಳಿದ್ದಕ್ಕೆ ಪೋಷಕರಿಗೆ ಬಾಲಕನೊಬ್ಬ ಚಾಕುವಿನಿಂದ ಇರಿದಿರುವುದು ಕೊಪ್ಪಳ ಜಿಲ್ಲೆ (Koppal Horror) ಗಂಗಾವತಿ ತಾಲೂಕಿನ ಹೊಸ ಅಯೋಧ್ಯ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಬಾಲಕನ ತಂದೆ ಹಾಗೂ ಅಕ್ಕ ಮೃತಪಟ್ಟಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಕೃತ್ಯದ ನಂತರ ಬಾಲಕ ಕೂಡ ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಗಾಯಾಳುಗಳನ್ನು ಬಳ್ಳಾರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಂಕಟನಾಯ್ಡು (45) ಹಾಗೂ ಪುತ್ರಿ ಪ್ರಗತಿ (19) ಮೃತರು. ಪತ್ನಿ ಸೌಜನ್ಯ ಸ್ಥಿತಿ ಗಂಭೀರವಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಬಾಲಕ ಮೊಬೈಲ್ ದಾಸನಾಗಿದ್ದ. ಆನ್‌ಲೈನ್ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಅಷ್ಟಕ್ಕೂ ಆಗಿದ್ದೇನು?

ಹೊಸ ಆಯೋಧ್ಯೆ ಗ್ರಾಮದ ವೆಂಕಟನಾಯ್ಡು ಅವರು ಖಾಸಗಿ ಶಾಲೆಯೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದು, ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅವರ ತಂದೆ ತಾಯಿ ಶನಿವಾರ ರಾತ್ರಿ ಒಟ್ಟಿಗೆ ಊಟ ಮಾಡಿದ್ದಾರೆ. ಬಳಿಕ ವೆಂಕಟನಾಯ್ಡು ಕುಟುಂಬದ ನಾಲ್ವರು ಒಂದು ಕೊಠಡಿಗೆ ಹಾಗೂ ಅವರ ಪೋಷಕರು ಒಂದು ಕೊಠಡಿಯಲ್ಲಿ ಮಲಗಿದ್ದಾರೆ. ರಾತ್ರಿ 10.30ರ ಸುಮಾರಿಗೆ ವೆಂಕಟನಾಯ್ಡು ಮಲಗಿದ್ದ ಕೊಠಡಿಯಲ್ಲಿ ಗಲಾಟೆಯಾಗುತ್ತಿದ್ದ ಸದ್ದು ಕೇಳಿದ್ದು ಬಾಗಿಲು ತೆರೆಯಿರಿ ಎಂದು ಅರಚಿದ್ದಾರೆ.

ಆಗ ವೆಂಕಟನಾಯ್ಡು ಅವರ ತಂದೆ ತಾತಾರಾವ್ ಕೊಠಡಿ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಮೊದಲು ಸಾಧ್ಯವಾಗಿಲ್ಲ. ಬಳಿಕ ನೆರೆಯವರ ಸಹಾಯ ಪಡೆದು ಬಾಗಿಲು ಮುರಿದಾಗ ಮಗ, ಸೊಸೆ ಹಾಗೂ ಮೊಮ್ಮಗಳು ರಕ್ತದ ಮುಡುವಿನಲ್ಲಿ ಬಿದ್ದಿದ್ದು ಕಂಡಿದೆ. ಪ್ರಗತಿ ಸ್ಥಳದಲ್ಲಿಯೇ ಮೃತಪಟ್ಟರೆ, ವೆಂಕಟನಾಯ್ಡು ಆಸ್ಪತ್ರೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.

"ಮೊಮ್ಮಗ ಏಕಾಏಕಿ ಸಿಟ್ಟಿಗೆ ಬಂದು ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಮೊಮ್ಮಗಳು ಪ್ರಗತಿಗೆ ಚುಚ್ಚಿ ಕೊಲೆ ಮಾಡಿದ್ದಾನೆ. ಅಪ್ಪ-ಅಮ್ಮನಿಗೂ ಚುಚ್ಚಿದ್ದು ತಾನೂ ಕುತ್ತಿಗೆಗೆ ಕೊಯ್ದುಕೊಂಡಿದ್ದಾನೆ ಎಂದು ತಾತ ನೀಡಿದ ದೂರಿನ ಮೇರೆಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.