ಕೊಪ್ಪಳ: ಕಳೆದ ವರ್ಷ ಬಾರೀ ಚರ್ಚೆಯಲ್ಲಿದ್ದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಹಗರಣ ಸಾಕಷ್ಟು ಸದ್ದು ಮಾಡಿದ್ದು, ಇದೀಗ ಅಂತಹುದೇ ಪ್ರಕರಣ ಈ ಹಗರಣದಲ್ಲಿ ಭಾಗಿಯಾದ ಇಬ್ಬರು ಅಧಿಕಾರಿಗಳ ವಿರುದ್ದ ಕೊಪ್ಪಳ ಲೋಕಾಯುಕ್ತರಿಗೆ (Lokayukta) (KRIDL) ದೂರು ನೀಡಲಾಗಿದೆ. 96 ಕಾಮಗಾರಿಗಳಲ್ಲಿ 72 ಕೋಟಿ ಸರ್ಕಾರಿ ಹಣವನ್ನ ದುರ್ಬಳಕೆ ಮಾಡಿರೋ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನ ಸಲ್ಲಿಕೆ ಮಾಡಿದ್ದಾರೆ. 2019 ರಿಂದ 2025 ರ ವರೆಗೆ ಕೊಪ್ಪಳ ಜಿಲ್ಲೆಯ ವಿವಿದೆಡೆ ನಡೆದ 96 ಕಾಮಗಾರಿಗಳಲ್ಲಿ ಅಂದಿನ ಇಇ ಆಗಿದ್ದ ಝಡ್ ಎಂ ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ನಿಡಗುಂದಿ ಎಂಬುವವರು 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದೆ.
2019 ರಿಂದ 2025 ರ ವರೆಗಿನ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಕುಡಿಯೋ ನೀರು ಸೇರಿ 96 ಕಾಮಗಾರಿಗಳನ್ನ ಮಾಡಿರೋದಾಗಿ ಕೊಟ್ಟಿ ಬಿಲ್ ಪಾವತಿ ಮಾಡುವ ಮೂಲಕ 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ, ಎಂದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು, ಸದ್ರ ಹಣ ದುರ್ಬಳಕೆ ಹಿನ್ನೆಲೆ ಕೆಆರ್‌ಐಡಿಎಲ್ ಎಂ ಡಿ ಬಸವರಾಜ ನಿರ್ದೇಶನದಂತೆ ದೂರು ಸಲ್ಲಿಸಿದ್ದು, ಲೋಕಾಯುಕ್ತ ಪೊಲೀಸರು 13 ಅಂಶಗಳ ಒಳಗೊಂಡ ಕಾಮಗಾರಿ ಟೆಂಡರ್ ಮೊತ್ತ ಟೆಂಡರ್ ದಿನಾಂಕ, ಪೂರ್ಣಗೊಂದ ಕಾಮಗಾರಿ ಅರ್ಧ ಮುಗಿಸಿರುವ ಕಾಮಗಾರಿ ಜೊತೆಗೆ ಬಿಲ್ ಪಾವತಿಯಾಗಿರುವ ಮಾಹಿತಿ ಹಾಗೂ ಬಾಕಿ ಇರುವ ಎಲ್ಲ ಎಲ್ಲ ದಾಖಲೆಗಳನ್ನ ಲೋಕಾಯುಕ್ತಕ್ಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Bhupesh Baghel: ಬಹುಕೋಟಿ ರೂ. ಹಗರಣ ಆರೋಪ; ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಮಗನನ್ನು ಬಂಧಿಸಿದ ED
ಈ ಝಡ್ ಎಂ ಚಿಂಚೋಳಿಕರ್ ಅಧಿಕಾರಾವಧಿಯಲ್ಲಿ 72 ಕೋಟಿ ರೂ. ಸರ್ಕಾರಿ ಹಣ ದುರ್ಬಳೆ ಆಗಿದೆ. ಇದೆ ವಿಚಾರಕ್ಕೆ ಸರ್ಕಾರಕ್ಕೆ ಇವರನ್ನ ಸಸ್ಪೆಂಡ್ ಸಹ ಮಾಡಲಾಗಿತ್ತು. ಆದ್ರೆ ಅದೆ ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಯನ್ನ ಸದ್ಯ ದಾವಣಗೆರೆ ವಿಭಾಗ 2 ರಲ್ಲಿ ನಿಯೋಜನೆ ಮಾಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮಾಡಿ, ಪ್ರಕರಣ ಲೋಕಾಯುಕ್ತದಲ್ಲಿ ತನಿಖೆ ಹಂತದಲ್ಲಿರೋ ವ್ಯಕ್ತಿಗೆ ಮತ್ತೆ ಆಡಳಿತಾತ್ಮಕ ಹುದ್ದೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.