ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Power Cut: ವಿದ್ಯುತ್‌ ದರ ಏರಿಕೆ ಜೊತೆಗೆ ಈಗ ಲೋಡ್‌ ಶೆಡ್ಡಿಂಗ್‌ ಶಾಕ್‌

ಕಳೆದ ಒಂದು ವಾರದಿಂದ ಎಸ್ಕಾಂಗಳು ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿವೆ. ವಿದ್ಯುತ್ ಮಾರ್ಗ ನಿರ್ವಹಣೆ, ಮಳೆ, ಗಾಳಿ, ಇತರೆ ಕಾರಣ ನೀಡಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಧಿಕೃತವಾಗಿ ವಿದ್ಯುತ್ ಕಡಿತ ಬದಲು ಅನಿಯಮಿತ ಕಡಿತ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ವಿದ್ಯುತ್‌ ಶುಲ್ಕವನ್ನು (Electricity price hike) ಹೆಚ್ಚಿಸಿರುವ ರಾಜ್ಯ ಸರಕಾರ (Karnataka government) ಇದೀಗ ಇನ್ನೊಂದು ಶಾಕನ್ನೂ ಪ್ರಜೆಗಳಿಗೆ ನೀಡಲು ಆರಂಭಿಸಿದೆ. ಬೇಸಿಗೆ ಕಾರಣದಿಂದ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗದ ಕಾರಣ ಎಸ್ಕಾಂಗಳು ಅನಿಯಮಿತ ವಿದ್ಯುತ್ ಕಡಿತದ (Power cut) ಮೊರೆ ಹೋಗಿವೆ. ಇದರ ಪರಿಣಾಮ ರಾಜ್ಯಾದ್ಯಂತ ವಿದ್ಯುತ್ ಕಡಿತ (load shedding) ಶುರು ಆಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ವಿದ್ಯುತ್ ಗರಿಷ್ಠ ಬೇಡಿಕೆ 18,350 ಮೆಗಾ ವ್ಯಾಟ್ ಇದ್ದು, ಈ ವರ್ಷದ ಮಾರ್ಚ್ 7 ರಂದು 18,395ರಷ್ಟು ಇದೆ. ಕಳೆದ ವರ್ಷಕ್ಕಿಂತ 2000 ಮೆಗಾ ವ್ಯಾಟ್ ನಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮ ಕಳೆದ ಒಂದು ವಾರದಿಂದ ಎಸ್ಕಾಂಗಳು ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿವೆ. ವಿದ್ಯುತ್ ಮಾರ್ಗ ನಿರ್ವಹಣೆ, ಮಳೆ, ಗಾಳಿ, ಇತರೆ ಕಾರಣ ನೀಡಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಧಿಕೃತವಾಗಿ ವಿದ್ಯುತ್ ಕಡಿತ ಬದಲು ಅನಿಯಮಿತ ಕಡಿತ ಮಾಡಲಾಗುತ್ತಿದೆ.

ಪ್ರಸ್ತುತ ಬೇಡಿಕೆ 18,500 ಮೆ.ವ್ಯಾಟ್ ಗಿಂತಲೂ ಹೆಚ್ಚಾಗಿದ್ದರೂ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. 16000 ಮೆ. ವ್ಯಾಟ್‌ನಿಂದ 17300 ಮೆ.ವ್ಯಾಟ್‌ನಷ್ಟು ಮಾತ್ರ ವಿದ್ಯುತ್ ಪೂರೈಸಲಾಗುತ್ತಿದ್ದು, ಮಾ.23ರಂದು ಅಂತೂ ಗರಿಷ್ಠ 14,849 ಮೆ. ವ್ಯಾಟ್ ಮಾತ್ರ ಪೂರೈಸಲಾಗಿದೆ.

ಏಪ್ರಿಲ್‌ 1ರಿಂದ ವಿದ್ಯುತ್‌ ದರ ಹೆಚ್ಚಾಗಿತ್ತು. ಇಂಧನ ಇಲಾಖೆ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿದೆ. ಈ ನೂತನ ದರ ಏರಿಕೆ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ವಿದ್ಯುತ್‌ ದರ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (KERC) ಆದೇಶ ಹೊರಡಿಸಿತ್ತು. ಕೆಇಆರ್‌ಸಿ ಹೊರಡಿಸಿರುವ ಆದೇಶದ ಪ್ರಕಾರ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಲಾಗಿದೆ. ಈ ವಿದ್ಯುತ್ ದರ ಏರಿಕೆಯು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ.

ಇದನ್ನೂ ಓದಿ: Electricity Price Hike: ವಿದ್ಯುತ್ ಗ್ರಾಹಕರಿಗೆ ಶಾಕ್‌, ಕೆಇಆರ್‌ಸಿಯಿಂದ ದರ ಏರಿಕೆ

ಹರೀಶ್‌ ಕೇರ

View all posts by this author