ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Makara Sankranti 2026: ಮಕರ ಸಂಕ್ರಾಂತಿ ಸಂಭ್ರಮ: ದುಬಾರಿ ದುನಿಯಾ ನಡುವೆಯೂ ಖರೀದಿ ಜೋರು

ಸಿಲಿಕಾನ್ ಸಿಟಿ ಜನ ಸಹ ಹಬ್ಬಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಖರೀದಿ ಕೂಡ ಬಲು ಜೋರಾಗಿದೆ. ಆದರೆ ಹೂ, ಹಣ್ಣು, ಕಬ್ಬುಗಳ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ. ಕೆಆರ್ ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ವಿಜಯನಗರ, ಜಯನಗರ, ದಾಸರಹಳ್ಳಿ, ಕೆಆರ್ ಪುರ, ಮಲ್ಲೇಶ್ವರಂ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಕಬ್ಬು, ಖರೀದಿ ಭರಾಟೆ ಜೋರಾಗಿದೆ.

ಮಕರ ಸಂಕ್ರಾಂತಿ ಖರೀದಿ

ಬೆಂಗಳೂರು, ಜ.15: ಇಂದು ನಾಡಿನೆಲ್ಲೆಡೆ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ (Makara Sankranti 2026) ಸಂಭ್ರಮ ಮೇಳೈಸಿದೆ. ರಾಜ್ಯಾದ್ಯಂತ ಸುಗ್ಗಿ ಹಬ್ಬ ಜೋರಾಗಿದ್ದು, ರೈತರು ಎತ್ತುಗಳನ್ನು ಕಿಚ್ಚು ಹಾಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಸಂಕ್ರಾಂತಿಯ ಸುಗ್ಗಿ ಜೋರಾಗಿದ್ದು, ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಕಬ್ಬು, ಗೆಣಸು ಹಾಗೂ ಅವರೆಕಾಯಿ ಖರೀದಿಯ ಭರಾಟೆ ಕಳೆದ ಎರಡು ದಿನಗಳಿಂದ ಜೋರಾಗಿದೆ.

ಸಿಲಿಕಾನ್ ಸಿಟಿ ಜನ ಸಹ ಹಬ್ಬಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಖರೀದಿ ಕೂಡ ಬಲು ಜೋರಾಗಿದೆ. ಆದರೆ ಹೂ, ಹಣ್ಣು, ಕಬ್ಬುಗಳ ಬೆಲೆ ಗ್ರಾಹಕರ ಜೇಬು ಸುಡುತ್ತಿದೆ. ಕೆಆರ್ ಮಾರುಕಟ್ಟೆ, ಯಶವಂತಪುರ, ಬಸವನಗುಡಿ, ವಿಜಯನಗರ, ಜಯನಗರ, ದಾಸರಹಳ್ಳಿ, ಕೆಆರ್ ಪುರ, ಮಲ್ಲೇಶ್ವರಂ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಕಬ್ಬು, ಖರೀದಿ ಭರಾಟೆ ಜೋರಾಗಿದೆ.

ರಾಜ್ಯಾದ್ಯಂತ ಸಂಕ್ರಾತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಿದ್ದು, ಉತ್ತರಾಯಣ ಕಾಲಿಡುತ್ತಿದೆ. ಜನ ಎಳ್ಳು ಬೆಲ್ಲ ಹಂಚಿ ಹರ್ಷದಿಂದ ಆಚರಿಸುತ್ತಾರೆ. ಅದರಂತೆ ಸಿಲಿಕಾನ್ ಸಿಟಿ ಜನರು ಸಂಕ್ರಾತಿ ಹಬ್ಬವನ್ನ ಭರ್ಜರಿಯಾಗಿ ಸೆಲಬ್ರೇಟ್ ಮಾಡಲು ಕೆ.ಆರ್ ಮಾರುಕಟ್ಟೆಗೆ (KR Market) ಲಗ್ಗೆ ಇಟ್ಟಿದ್ದಾರೆ. ಹೂ, ಕಬ್ಬು, ಹಣ್ಣು, ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಜೊತೆಗೆ ರೆಡಿಮೇಡ್ ಎಳ್ಳು-ಬೆಲ್ಲಕ್ಕೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಈ ಮಧ್ಯೆ ಪ್ರತಿ ವರ್ಷದಂತೆ ಗಗನಕ್ಕೇರಿರೋ ಹೂವಿನ ದರ ಕಂಡು ಗ್ರಾಹಕರು ಕಂಗಾಲಾಗಿದ್ದಾರೆ.

Makara Sankranti: ಎಲ್ಲೆಲ್ಲೂ ಸಂಕ್ರಾಂತಿ ಸಂಭ್ರಮ; ಭಾರತದ ವಿವಿಧೆಡೆ ಹೇಗೆ ಆಚರಣೆ ಮಾಡ್ತಾರೆ ಗೊತ್ತಾ?

ಹೂವಿನ ಬೆಲೆ ಎಷ್ಟಿದೆ?

ಕನಕಾಂಬರ: 700 – 800 ರೂ.

ಕಾಕಡ: 500-600 ರೂ.

ಗುಲಾಬಿ: 80 ರೂ.

ಸೇವಂತಿ: 70 ರೂ.

ಹಣ್ಣುಗಳ ಬೆಲೆ ಏರಿಕೆ:

ಕಬ್ಬು ಜೋಡಿ: 150- 250 ರೂ.

ಸೇಬು ಹಣ್ಣು: 160 ರೂ.

ದಾಳಿಂಬೆ ಹಣ್ಣು: 140 ರೂ.

ಅವರೆಕಾಯಿ: 80-100 ರೂ.

ಮಾವಿನಸೊಪ್ಪು ಕಟ್ಟು- 20 ರೂ, ರೆಡಿಮೇಡ್ ಎಳ್ಳು ಬೆಲ್ಲಕ್ಕೂ ಡಿಮ್ಯಾಂಡ್ ಇದೆ. ಇದಕ್ಕೂ 250 ರಿಂದ 300 ರುಪಾಯಿ ಇದೆ. ಕಬ್ಬಿನ ಜೊತೆಗೆ ಮಾರುಕಟ್ಟೆಗೆ ಗೆಡ್ಡೆ, ಗೆಣಸು ಅವರೆಕಾಳು, ನೆಲ ಕಡಲೆ, ಹಬ್ಬಕ್ಕೆ ಬಹು ಮುಖ್ಯವಾಗಿ ಬೇಕಾಗುವಂತಹ ಹೂವಿನ ಎಲ್ಲದರ ಬೆಲೆ ಕೂಡ ಏರಿಕೆ ಕಂಡಿದೆ. ವರ್ಷದ ಮೊದಲನೇ ಹಬ್ಬ ಆಗಿರುವ ಕಾರಣ ಎಷ್ಟೇ ಬೆಲೆ ಏರಿಕೆ ಆದರೂ ಹಬ್ಬ ಮಾಡೋದು ಅನಿವಾರ್ಯ ಎಂದು ಜನ ಶಾಪಿಂಗ್‌ ಮಾಡುತ್ತಿದ್ದಾರೆ.

Makar Sankranti 2026: ಮನೆಯ ಸುಖ, ಸಂಪತ್ತಿಗಾಗಿ ಮಕರ ಸಂಕ್ರಾತಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ

ಹರೀಶ್‌ ಕೇರ

View all posts by this author