ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಎಡಮುರಿ ಜಲಪಾತದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ (Yedamuri Falls) ಶುಕ್ರವಾರ ನಡೆದಿದೆ. ಪ್ರವಾಸಿ ತಾಣವಾಗಿರುವ ಎಡಮುರಿ ಫಾಲ್ಸ್ ನೋಡಲು ಬೆಂಗಳೂರಿನ ಡಾನ್ ಬಾಸ್ಕೋ ಪದವಿ ಕಾಲೇಜಿನ ಇಬ್ಬರು ತೆರಳಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಗನ್ನು ಶ್ಯಾಮ್(20) ವೆಂಕಟೇಶ್ (20) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ, ಮೃಹದೇಹಗಳನ್ನು ಹೊರ ತೆಗೆದಿದ್ದಾರೆ.
ಎಮ್ಮೆ ತೊಳೆಯಲು ಹೋಗಿ ಬಾವಿಯಲ್ಲಿ ಮುಳುಗಿ ದಂಪತಿ ಸಾವು
ಮಂಡ್ಯ : ಮಂಡ್ಯದಲ್ಲಿ (Mandya news) ದಾರುಣ ಘಟನೆ ನಡೆದಿದ್ದು, ಎಮ್ಮೆ ತೊಳೆಯುವ ವೇಳೆ ಬಾವಿಗೆ ಬಿದ್ದು (drowned) ದಂಪತಿ ಸಾವನ್ನಪ್ಪಿರುವ ಘಟನೆ ಅರೆಬೊಪ್ಪನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್‌ಪೇಟೆ ತಾಲೂಕಿನ ಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ಎಮ್ಮೆ ತೊಳೆಯಲು ಹೋದಾಗ ವಸಂತಮ್ಮ(65) ಹಾಗು ಕಾಳೇಗೌಡ (70) ಎಂಬ ದಂಪತಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಎಮ್ಮೆ ತೊಳೆಯಲು ಹೋಗಿದ್ದ ವೇಳೆ ತೆರೆದ ಬಾವಿಗೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿ ಕೂಡ ಸಾವನ್ನಪ್ಪಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ | Harassment: ಆತನ ಹೆಸರು ವಂದೇ ಮಾತರಂ, ಮಾಡಿದ್ದು ಇಂಥ ಹಲ್ಕಾ ಕೆಲಸ!
ಹೃದಯಾಘಾತಕ್ಕೆ ಕರ್ತವ್ಯನಿರತ ಕಾನ್‌ಸ್ಟೇಬಲ್ ಬಲಿ
ಕಲಬುರಗಿ: ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದೆ. ಕರ್ತವ್ಯನಿರತ ಹೆಡ್‌ಕಾನ್‌ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಳಖೇಡ ಠಾಣೆಯ ಹೆಡ್‌ಕಾನ್ಸ್ಟೇಬಲ್ ಮನೋಹರ್ ಪವಾರ್ (46) ಸಾವನ್ನಪ್ಪಿದ್ದಾರೆ. ನಿನ್ನೆ ಕರ್ತವ್ಯದ ಮೇಲೆ ಸೇಡಂ ಪಟ್ಟಣಕ್ಕೆ ಮನೋಹರ ಆಗಮಿಸಿದ್ದರು. ಈ ವೇಳೆ ಹೃದಯಾಘಾತದಿಂದ ಮನೋಹರ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.