ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಎಎಸ್ಐ ಪುತ್ರಿ ಆತ್ಮಹತ್ಯೆ
ಸುಹಾನಾ ಮೈಸೂರಿನಲ್ಲಿ ಪ್ರಥಮ ವರ್ಷದ ಬಿಎ ವ್ಯಾಸಂಗ ಓದುತ್ತಿದ್ದು, ಕಾಲೇಜು ಮುಗಿಸಿಕೊಂಡು ಮನೆಗೆ ಬಂದು ಬಂದೀಗೌಡ ಬಡಾವಣೆ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸುಹಾನಾ ಅವರ ಕುಟುಂಬಿಕರು ಹಾಗೂ ಸಹಪಾಠಿಗಳನ್ನು ವಿಚಾರಿಸಲಾಗುತ್ತಿದೆ.