Priyank Kharge: ಆರ್‌ಎಸ್‌ಎಸ್‌ಗೆ ದೇಣಿಗೆ ನೀಡುವ ಸ್ವಯಂ ಸೇವಕರು ಯಾರು? 11 ಪ್ರಶ್ನೆಗಳನ್ನು ಪಟ್ಟಿ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ
Rashtriya Swayamsevak Sangh: ಆರ್‌ಎಸ್‌ಎಸ್ ಕಾರ್ಯ ವೈಖರಿಯ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಎತ್ತಿದ್ದಾರೆ. ಆರ್‌ಎಸ್‌ಎಸ್ ಸ್ವಯಂಸೇವಕರು ನೀಡಿದ ದೇಣಿಗೆಯಿಂದ ಕಾರ್ಯ ನಿರ್ವಹಿಸುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತವೆ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಆರ್‌ಎಸ್‌ಎಸ್ ದೇಣಿಗೆ ಬಗ್ಗೆ ಮೋಹನ್ ಭಾಗವತ್ ಅವರನ್ನು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ). -
ಬೆಂಗಳೂರು, ನ. 9: ಆರ್‌ಎಸ್‌ಎಸ್ (RSS) ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಮತ್ತೊಮ್ಮೆ ಅದರ ಕಾರ್ಯ ವೈಖರಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸಂಘದ ಶತಮಾನೋತ್ಸವದ ಸ್ಮರಣಾರ್ಥ ಬೆಂಗಳೂರಿನಲ್ಲಿ (Bengaluru) ಆಯೋಜಿಸಲಾದ 2 ದಿನಗಳ ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Swayamsevak Sangh) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat), ʼʼಆರ್‌ಎಸ್‌ಎಸ್ (RSS) ಬಾಹ್ಯವಾಗಿ ಒಂದೇ ಒಂದು ಪೈಸೆ ಹಣವನ್ನೂ ಕೂಡ ತೆಗೆದುಕೊಳ್ಳುವುದಿಲ್ಲ. ನಾವು ಎಂದಿಗೂ ಹೊರಗಿನಿಂದ ಯಾವುದೇ ಹಣವನ್ನು ತೆಗೆದುಕೊಂಡಿಲ್ಲ. ನಮ್ಮ ಸ್ವಯಂಸೇವಕರು ಪ್ರತಿ ವರ್ಷವೂ ಕೊಡುಗೆ ನೀಡುತ್ತಾರೆ. ಅವರು ಹೆಚ್ಚಿನದನ್ನು ನೀಡಲು ಪ್ರಯತ್ನಿಸುತ್ತಾರೆ. ಬಡವರಾಗಿರುವ ಸ್ವಯಂಸೇವಕರು ಸಹ ಕೊಡುಗೆ ನೀಡುವುದನ್ನು ರೂಢಿಸಿಕೊಂಡಿದ್ದಾರೆʼʼ ಎಂದು ಹೇಳಿದ್ದರು. ಇದೀಗ ಪ್ರಿಯಾಂಕ್ ಈ ಬಗ್ಗೆ ಎಕ್ಸ್‌ನಲ್ಲಿ 11 ಪ್ರಶ್ನೆಗಳನ್ನು ಕೇಳಿದ್ದಾರೆ.
ʼʼಆರ್‌ಎಸ್‌ಎಸ್ ಸ್ವಯಂಸೇವಕರು ನೀಡಿದ ದೇಣಿಗೆಯಿಂದ ಕಾರ್ಯ ನಿರ್ವಹಿಸುತ್ತದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತವೆʼʼ ಎಂದು ಪ್ರಿಯಾಂಕ್ ಹೇಳಿದ್ದಾರೆ. ಬಳಿಕ 11 ಪ್ರಶ್ನೆಗಳನ್ನು ಪಟ್ಟಿ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಎಕ್ಸ್ ಪೋಸ್ಟ್:
Mr. Bhagwat has stated that the RSS functions through donations made by its volunteers.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 9, 2025
However, several legitimate questions arise regarding this claim:
•Who are these volunteers and how are they identified?
•What is the scale and nature of the donations made?
•Through…
ಈ ಸುದ್ದಿಯನ್ನೂ ಓದಿ: Mohan Bhagwat: ಮುಸ್ಲಿಂ, ಕ್ರಿಶ್ಚಿಯನ್ನರ ಪೂರ್ವಜರು ಹಿಂದೂಗಳ ವಂಶಸ್ಥರೇ; RSS ಮುಖ್ಯಸ್ಥ ಮೋಹನ್ ಭಾಗವತ್
ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗಳು:
- ಈ ಸ್ವಯಂಸೇವಕರು ಯಾರು? ಅವರನ್ನು ಹೇಗೆ ಗುರುತಿಸಲಾಗುತ್ತದೆ?
- ನೀಡಲಾದ ದೇಣಿಗೆಗಳ ಪ್ರಮಾಣ ಎಷ್ಟು ಮತ್ತು ಸ್ವರೂಪ ಏನು?
- ಈ ಕೊಡುಗೆಗಳನ್ನು ಯಾವ ಕಾರ್ಯವಿಧಾನಗಳು ಅಥವಾ ಯಾವ ಮಾರ್ಗಗಳ ಮೂಲಕ ಸ್ವೀಕರಿಸಲಾಗುತ್ತದೆ?
- ಆರ್‌ಎಸ್‌ಎಸ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಾದರೆ ನೋಂದಾಯಿತ ಗುರುತಿನಡಿ ಸಂಸ್ಥೆಗೆ ನೇರವಾಗಿ ದೇಣಿಗೆಗಳನ್ನು ಯಾಕೆ ನೀಡಲಾಗುವುದಿಲ್ಲ?
- ನೋಂದಾಯಿತ ಘಟಕವಾಗದೆ ಆರ್‌ಎಸ್‌ಎಸ್ ಸಂಘಟನೆ ತನ್ನ ಹಣಕಾಸು, ಸಾಂಸ್ಥಿಕ ರಚನೆ ಹೇಗೆ ಉಳಿಸಿಕೊಳ್ಳುತ್ತದೆ?
- ಪೂರ್ಣ ಸಮಯದ ಪ್ರಚಾರಕರಿಗೆ ಯಾರು ವೇತನ ನೀಡ್ತಾರೆ? ಸಂಸ್ಥೆಯ ದಿನನಿತ್ಯದ ಕಾರ್ಯಾಚರಣೆಯ ವೆಚ್ಚವನ್ನು ಪೂರೈಸುತ್ತಾರೆ?
- ದೊಡ್ಡ ಪ್ರಮಾಣದ ಕಾರ್ಯಕ್ರಮಗಳು, ಅಭಿಯಾನಗಳು ಮತ್ತು ಜನಸಂಪರ್ಕ ಚಟುವಟಿಕೆಗಳಿಗೆ ಹೇಗೆ ಹಣಕಾಸು ಒದಗಿಸಲಾಗುತ್ತದೆ?
- ಸ್ವಯಂಸೇವಕರು ಸ್ಥಳೀಯ ಕಚೇರಿಗಳಿಂದ ಸಮವಸ್ತ್ರ ಅಥವಾ ವಸ್ತುಗಳನ್ನು ಖರೀದಿಸಿದಾಗ, ಈ ಹಣವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
- ಸ್ಥಳೀಯ ಕಚೇರಿಗಳು ಮತ್ತು ಇತರ ಮೂಲಸೌಕರ್ಯಗಳನ್ನು ನಿರ್ವಹಿಸುವ ವೆಚ್ಚವನ್ನು ಯಾರು ಭರಿಸುತ್ತಾರೆ?
- ರಾಷ್ಟ್ರೀಯ ಮಟ್ಟದಲ್ಲಿನ ಪ್ರಭಾವ ಮತ್ತು ಉಪಸ್ಥಿತಿಯ ಹೊರತಾಗಿಯೂ ಸಂಸ್ಥೆ ನೋಂದಣಿಯಾಗಿಲ್ಲ ಯಾಕೆ?
- ಭಾರತದಲ್ಲಿರುವ ಪ್ರತಿಯೊಂದು ಧಾರ್ಮಿಕ ಅಥವಾ ದತ್ತಿ ಸಂಸ್ಥೆಯು ಆರ್ಥಿಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾದಾಗ ಆರ್‌ಎಸ್‌ಎಸ್‌ಗೆ ಇದೇ ರೀತಿಯ ಹೊಣೆಗಾರಿಕೆ ಇಲ್ಲವೆ?
ಸದ್ಯ ಪ್ರಿಯಾಂಕ್ ಖರ್ಗೆ ಅವರ ಈ ಪ್ರಶ್ನೆಗಳು ಭಾರಿ ಚರ್ಚೆಗೆ ಕಾರಣವಾಗಿದ್ದು, ಆರ್‌ಎಸ್‌ಎಸ್ ಯಾವ ರೀತಿ ಉತ್ತರಿಸುತ್ತದೆ ಎನ್ನುವ ಕುತೂಹಲ ಮೂಡಿದೆ.
ಈ ಸುದ್ದಿಯನ್ನೂ ಓದಿ: Mohan Bhagwat: ಮುಸ್ಲಿಮರಿಗೆ ಆರ್‌ಎಸ್‌ಎಸ್‌ನಲ್ಲಿ ಅವಕಾಶವಿದೆಯೇ; ಮೋಹನ್ ಭಾಗವತ್ ಪ್ರತಿಕ್ರಿಯೆ ಹೀಗಿತ್ತು
ನೋಂದಣಿ ಮೋಹನ್ ಭಾಗವತ್ ಹೇಳಿದ್ದೇನು?
ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಆರ್‌ಎಸ್‌ಎಸ್ ಏಕೆ ನೋಂದಾಯಿತ ಸಂಘಟನೆಯಾಗಿಲ್ಲ? ಎಂಬ ಕಾಂಗ್ರೆಸ್ ನಾಯಕರು ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ʼʼಸಂಘವು 1925ರಲ್ಲಿ ಪ್ರಾರಂಭವಾಯಿತು. ನಾವು ಬ್ರಿಟಿಷ್ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕೆಂದು ನೀವು ನಿರೀಕ್ಷಿಸುತ್ತೀರಾ? ಸ್ವಾತಂತ್ರ್ಯದ ನಂತರ, ಕಾನೂನುಗಳು ನೋಂದಣಿಯನ್ನು ಕಡ್ಡಾಯಗೊಳಿಸುವುದಿಲ್ಲ. ನಾವು ಮಾನ್ಯತೆ ಪಡೆದ ಸಂಸ್ಥೆಯಾಗಿದ್ದೇವೆʼʼ ಎಂದು ಅವರು ಹೇಳಿದರು.