ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

HD Devegowda: ಹುಟ್ಟೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೊಂದು ಮ್ಯೂಸಿಯಂ

ದೇವೇಗೌಡರ ಮ್ಯೂಸಿಯಂನಲ್ಲಿ ದೇವೇಗೌಡರ ಜೀವನ ಚರಿತ್ರೆಯನ್ನ ಬಿಂಬಿಸುವ ಸಂಪೂರ್ಣ ಮಾಹಿತಿ ಇರಲಿದೆ. ಬರೋಬ್ಬರಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗಲಿದೆ. ದೇವೇಗೌಡರ ಪುತ್ರ, ಮಾಜಿ ಸಚಿವ ಹೆಚ್.ಡಿ. ರೇವಣ್ಣ (HD Revanna) ಮ್ಯೂಸಿಯಂಗೆ ಅಗತ್ಯವಾದ ಭೂಮಿಯನ್ನ ಕೊಡುಗೆಯಾಗಿ ನೀಡಿದ್ದಾರೆ.

ಹುಟ್ಟೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೊಂದು ಮ್ಯೂಸಿಯಂ

ದೇವೇಗೌಡರ ಮ್ಯೂಸಿಯಂಗೆ ಶಂಕುಸ್ಥಾಪನೆ -

ಹರೀಶ್‌ ಕೇರ
ಹರೀಶ್‌ ಕೇರ Mar 31, 2026 12:27 PM

ಹಾಸನ, ಮಾ.31: ರಾಜ್ಯದ ಮುತ್ಸದ್ಧಿ ರಾಜಕಾರಣಿ, ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ (HD Devegowda) ಅವರ ಹೆಸರಿನಲ್ಲಿ ಒಂದು ಮ್ಯೂಸಿಯಂ (Museum) ಅವರ ಹುಟ್ಟೂರಿನಲ್ಲಿ ನಿರ್ಮಾಣವಾಗಲಿದೆ. ರೈತನ ಮಗನಾಗಿ ಹುಟ್ಟಿ, ರಾಜಕೀಯವಾಗಿ ಹಂತ ಹಂತವಾಗಿ ಮೇಲೇರಿ ದೇಶದ ಪ್ರಧಾನಿ ಪಟ್ಟಕ್ಕೇರಿದ ಗೌಡರ ಹುಟ್ಟೂರು ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ (Haradanahalli) ಹೆಚ್.ಡಿ. ದೇವೇಗೌಡರ ಜೀವನ ಹಾಗೂ ಸಾಧನೆಯನ್ನು ವಿವರವಾಗಿ ತಿಳಿಸುವ ಮ್ಯೂಸಿಯಂ ಬರಲಿದೆ.

ಇದು ಆಗಬೇಕು ಎಂಬುದು ಗೌಡರ ಅಭಿಮಾನಿಗಳ ಹಲವು ದಿನಗಳ ಕೋರಿಕೆಯಾಗಿತ್ತು. "ಇದು ಗೌಡರ ಸಮಗ್ರ ಸಾಧನೆಯನ್ನು ತಿಳಿಸುವ ಕೇಂದ್ರವಾಗಲಿದೆ" ಎಂದು ಮ್ಯೂಸಿಯಂ ನಿರ್ಮಾಣದ ಹೊಣೆ ಹೊತ್ತಿರುವ ಎಚ್‌.ಎನ್‌ ಕೃಷ್ಣ ತಿಳಿಸಿದ್ದಾರೆ. 2022ರ ಏಪ್ರಿಲ್‌ನಲ್ಲಿಯೇ ದೇವೇಗೌಡರ ಹುಟ್ಟೂರಿನಲ್ಲಿ ಮಾಜಿ ಪ್ರಧಾನಿಯ ಮ್ಯೂಸಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆ. ಶೃಂಗೇರಿಯ ಶ್ರೀಗಳಾದ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿಗಳು ಶಿಲಾನ್ಯಾಸ ನೆರವೇರಿಸಿದ್ದರು.

ಮ್ಯೂಸಿಯಂನಲ್ಲಿ ಏನಿರುತ್ತದೆ?

ದೇವೇಗೌಡರ ಮ್ಯೂಸಿಯಂನಲ್ಲಿ ದೇವೇಗೌಡರ ಜೀವನ ಚರಿತ್ರೆಯನ್ನ ಬಿಂಬಿಸುವ ಸಂಪೂರ್ಣ ಮಾಹಿತಿ ಇರಲಿದೆ. ಪ್ರಧಾನಿ ಆಗಿದ್ದಾಗ ಗೌಡರಿಗೆ ದೇಶ ವಿದೇಶಗಳಿಂದ ಬಂದ ಉಡುಗೊರೆಗಳ ಸಂಗ್ರಹ. ದೇವೇಗೌಡರು ತಮ್ಮ ರಾಜಕೀಯ ಜೀವನಕ್ಕೆ ಎಂಟ್ರಿಯಾದ ಮೊದಲ ಚುನಾವಣೆಯಿಂದ ಈವರೆಗಿನ ಘಟನಾವಳಿಗಳನ್ನ ವಿವರಿಸುವ ಕಲರ್ ಫುಲ್ ಭಾವ ಚಿತ್ರಗಳ ಪ್ರದರ್ಶನ, ಗೌಡರ ಬದುಕಿನ ಮಹತ್ತರ ಘಟನೆಗಳನ್ನ ಬಿಂಬಿಸೋ ಮಾಹಿತಿ, ದೇವೇಗೌಡರ ಒಡನಾಡಿಗಳ ಭಾವಚಿತ್ರಗಳು, ದೇವಗೌಡರ ಬಗ್ಗೆ ಪ್ರಕಟವಾಗಿರೋ ಪುಸ್ತಕಗಳ ಪ್ರದರ್ಶನ, ದೇವೇಗೌಡರ ಬದುಕಿನ ಶೈಲಿ ಬಿಂಬಿಸೋ ಚಿತ್ರಾವಳಿ ಹೀಗೆ ಹಳ್ಳಿಯ ಸಾಮಾನ್ಯ ರೈತನೊಬ್ಬನ ಮಗನಾಗಿ ಹುಟ್ಟಿ ಪ್ರಧಾನಿ ಹುದ್ದೆಗೇರಿದ ವ್ಯಕ್ತಿಯೊಬ್ಬರ ಬದುಕು ಹೇಗಿತ್ತು ಅನ್ನೋದನ್ನ ಎಳೆ ಎಳೆಯಾಗಿ ಬಿಡಿಸಿಡುವ ಸಂಪೂರ್ಣ ಚಿತ್ರಣ ಈ ಮ್ಯೂಸಿಯಂನಲ್ಲಿ ಸಿಗಲಿದೆ.

ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲು ದೇವೇಗೌಡರು, ಕುಮಾರಸ್ವಾಮಿ ಬದ್ಧ: ನಿಖಿಲ್ ಕುಮಾರಸ್ವಾಮಿ

5 ಕೋಟಿ ಅನುದಾನದಲ್ಲಿ ಕಾಮಗಾರಿ

ಬರೋಬ್ಬರಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗಲಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಐದು ಕೋಟಿ ರೂ ಅನುದಾನವನ್ನು ಮಂಜೂರು ಮಾಡಿದೆ. ಸುಂದರ ವಿನ್ಯಾಸದ ಬೃಹತ್ ಕಟ್ಟಡ, ಉದ್ಯಾನ ಹೀಗೆ ಆಕರ್ಷಕವಾಗಿ ಈ ಮ್ಯೂಸಿಯಂ ಹಳ್ಳಿಯಲ್ಲಿ ನಿರ್ಮಾಣವಾಗಲು ಸರ್ಕಾರ ನೆರವು ನೀಡುತ್ತಿದೆ. ಸಾಮಾನ್ಯ ವ್ಯಕ್ತಿಯೊಬ್ಬರು ಅವಿರತ ಶ್ರಮದಿಂದ ಹಂತ ಹಂತವಾಗಿ ಸಾಧನೆ ಮೆಟ್ಟಿಲೇರಿದ ಹಳ್ಳಿಯ ರೈತನ ಮಗನ ಬದುಕಿನ ಚಿತ್ರಣ ಇತರರಿಗೆ ಸ್ಪೂರ್ತಿಯಾಗಲಿ ಎನ್ನೋ ಕಾರಣಕ್ಕೆ ಸರ್ಕಾರ ಅನುದಾನ ನೀಡಿ ಈ ಮಹತ್ತರ ಯೋಜನೆ ಸಾಕಾರಕ್ಕೆ ನೆರವಾಗಿದೆ.

ಮ್ಯೂಸಿಯಂಗೆ ರೇವಣ್ಣ ಭೂಮಿ ದಾನ

ದೇವೇಗೌಡರ ಪುತ್ರ, ಮಾಜಿ ಸಚಿವ ಹೆಚ್.ಡಿ. ರೇವಣ್ಣ (HD Revanna) ಮ್ಯೂಸಿಯಂಗೆ ಅಗತ್ಯವಾದ ಭೂಮಿಯನ್ನ ಕೊಡುಗೆಯಾಗಿ ನೀಡಿದ್ದಾರೆ. ಒಟ್ಟು ಮೂರು ಅಂತಸ್ತಿನ ಕಟ್ಟಡ ಇಲ್ಲಿ ನಿರ್ಮಾಣವಾಗಲಿದ್ದು, ಸಂಪೂರ್ಣ ದೇವೇಗೌಡರ ಬದುಕು, ಜೀವನ, ಸಾಧನೆ ಎಲ್ಲವನ್ನ ಬಿಂಬಿಸೋ ವಿವರ ಈ ಮ್ಯೂಸಿಯಂನಲ್ಲಿ ಇರಲಿದೆ.

ದೇವೇಗೌಡರ ಹಳೆಯ ಚಿತ್ರಗಳನ್ನು ಹೊಂದಿರುವವರು ಅದನ್ನು ತಮಗೆ ತಲುಪಿಸಿದರೆ ಅದನ್ನು ಜತನದಿಂದ ಸ್ಕ್ಯಾನ್‌ ಒರಿಜಿನಲ್‌ ಅನ್ನು ಅವರಿಗೇ ಮರಳಿಸಲಾಗುವುದು ಎಂದು ಎಚ್‌ಎನ್‌ ಕೃಷ್ಣ ತಿಳಿಸಿದ್ದಾರೆ. ಮಾಹಿತಿಗೆ ಇಮೇಲ್:‌ [email protected]. ಫೋನ್‌ ನಂ: 9844088832

"ಕರ್ನಾಟಕವನ್ನು ದೇವರು ಮಾತ್ರ ಉಳಿಸಬೇಕು:"; ರಾಜ್ಯ ಸರ್ಕಾರದ ವಿರುದ್ಧ ರಾಜ್ಯಸಭೆಯಲ್ಲಿ ಹೆಚ್.ಡಿ. ದೇವೇಗೌಡ ವಾಗ್ದಾಳಿ