ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mysuru News: ಅಕ್ರಮ ಸಂಬಂಧಕ್ಕೆ ಅಡ್ಡಿ; ಮಲಗಿದ್ದ ಗಂಡನ ಮರ್ಮಾಂಗಕ್ಕೆ ಹೊಡೆದು ಕೊಂದ ಪತ್ನಿ!

Woman kills husband in Mysuru: ಪರಪುರುಷನ ಜತೆ ಸಂಬಂಧ ಬೆಳೆಸಿದ್ದ ಪತ್ನಿಗೆ ಪತಿ ಎಚ್ಚರಿಕೆ ನೀಡಿದ್ದ. ಯಾವಾಗ ತನ್ನ ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿಯಾದನೋ ಆಗ ಆತನ ಕಥೆ ಮುಗಿಸಲು ಪತ್ನಿ ಪ್ಲ್ಯಾನ್‌ ಮಾಡಿದ್ದಳು. ಮನೆಯಲ್ಲಿ ಗಂಡ ಮಲಗಿದ್ದಾಗ ಹೊಡೆದು ಕೊಂದಿದ್ದಾಳೆ.

ಅಕ್ರಮ ಸಂಬಂಧಕ್ಕೆ ಅಡ್ಡಿ; ಗಂಡನ ಮರ್ಮಾಂಗಕ್ಕೆ ಹೊಡೆದು ಕೊಂದ ಪತ್ನಿ!

ನಂಜನಗೂಡು ತಾಲೂಕಿನ ಇಂದಿರಾನಗರದಲ್ಲಿ ಗಂಡನನ್ನು ಪತ್ನಿಯೇ ಕೊಲೆ ಮಾಡಿದ್ದಾಳೆ. (ಸಾಂದರ್ಭಿಕ ಚಿತ್ರ) -

Prabhakara R
Prabhakara R Nov 11, 2025 5:43 PM

ಮೈಸೂರು, ನ.11: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ತಾಳಿಕಟ್ಟಿದ ಗಂಡನ ಕಥೆಯನ್ನೇ ಪತ್ನಿ ಮುಗಿಸಿರುವ ಘಟನೆ (Mysuru News) ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಂದಿರಾನಗರ ಗ್ರಾಮದಲ್ಲಿ ನಡೆದಿದೆ. ಗಂಡ ನಿದ್ದೆಗೆ ಜಾರುತ್ತಿದ್ದಂತೆ ಮರ್ಮಾಂಗಕ್ಕೆ ಹೊಡೆದು ಕೊಂದಿದ್ದಾಳೆ. ವೀರಣ್ಣ(41) ಕೊಲೆಯಾದ ವ್ಯಕ್ತಿ. ಶಿವಮ್ಮ ಕೊಲೆ ಆರೋಪಿ.

ಇವರಿಬ್ಬರಿಗೂ ಮದುವೆಯಾಗಿ 13 ವರ್ಷ ಆಗಿದ್ದು, ಮಕ್ಕಳು ಇದ್ದಾರೆ. ಆದರೆ, ಈ ಮಹಿಳೆಗೆ ಎಚ್‌‌.ಡಿ ಕೋಟೆಯ ಬಲರಾಮ ಎಂಬಾತನ ಜತೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ಬಗ್ಗೆ ಗಂಡ ವೀರಣ್ಣನಿಗೆ ಗೊತ್ತಾಗಿದೆ. ಈ ವಿಚಾರಕ್ಕೆ ಗಂಡ ಮತ್ತು ಹೆಂಡತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು. ಸಂಬಂಧಿಕರು ನ್ಯಾಯಪಂಚಾಯ್ತಿ ಮಾಡಿದ್ದರಂತೆ. ಇದಾದ ಬಳಿಕವೂ ಪರಪುರುಷನ ಜತೆ ಮಹಿಳೆ ಸಂಬಂಧ ಮುಂದುವರಿಸಿದ್ದರಿಂದ ವೀರಣ್ಣ ಗಂಡ ಎಚ್ಚರಿಕೆ ನೀಡಿದ್ದಾನೆ.

ಯಾವಾಗ ಶಿವಮ್ಮಳ ಅನೈತಿಕ ಸಂಬಂಧಕ್ಕೆ ಗಂಡನೇ ಅಡ್ಡಿಯಾದನೋ ಆಗ ಆತನ ಕಥೆ ಮುಗಿಸಲು ಪತ್ನಿ ಪ್ಲ್ಯಾನ್‌ ಮಾಡಿದ್ದಳು. ಮನೆಯಲ್ಲಿ ಗಂಡ ಮಲಗಿದ್ದಾಗ ಹೊಡೆದು ಕೊಂದಿದ್ದಾಳೆ. ಬಳಿಕ ನನ್ನ ಗಂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾಟಕವಾಡಿದ್ದಾಳೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರಿಗೆ ಅನುಮಾನ ಶುರುವಾಗಿದ್ದು, ವಿಚಾರಣೆ ಮಾಡಿದಾಗ ಮಹಿಳೆ ಅಸಲಿ ಸತ್ಯ ಬಾಯಿ ಬಿಟ್ಟಿದ್ದಾಳೆ. ಗಂಡ ಊಟ ಮಾಡಿ ಮಲಗಿದ ಬಳಿಕ ಮರ್ಮಾಂಗಕ್ಕೆ ಹೊಡೆದು ಕೊಂದಿದ್ದಾಗಿ ತಿಳಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ | Mysore Silk Sarees: ಮೈಸೂರು ಸಿಲ್ಕ್‌ ಸೀರೆಗಳಿಗೆ ಹೆಚ್ಚಿದ ಬೇಡಿಕೆ; ಉತ್ಪಾದನೆ ಹೆಚ್ಚಿಸಲು ಸಿಎಂ ಸೂಚನೆ

ಮೈಸೂರಿನ ಶಾಲೆಯಲ್ಲಿ ರ‍್ಯಾಗಿಂಗ್‌; ಬಾಲಕನ ಮರ್ಮಾಂಗಕ್ಕೆ ಒದ್ದು ಹಲ್ಲೆ

ಮೈಸೂರು: ಪ್ರಶ್ನೆ ಮಾಡಿದ 13 ವರ್ಷದ ಬಾಲಕನ ಮೇಲೆ ಮೂವರು ಬಾಲಕರು ದಾಳಿ ಮಾಡಿ ಬಾಲಕನ ಮರ್ಮಾಂಗಕ್ಕೆ ಒದ್ದು ಗಂಭೀರ ಗಾಯಗೊಳಿಸಿದ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ಜಯಲಕ್ಷ್ಮಿ ಪುರಂನಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಬಾಲಕನಿಗೆ ಪ್ರತಿನಿತ್ಯ ಹಣಕೊಡು, ಮೊಬೈಲ್ ತೆಗೆದುಕೊಂಡು ಬಾ, ನಾವು ಹೇಳಿದ ಹಾಗೇ ಮಾಡು ಎಂದು ಮೂವರು ಬಾಲಕರು ರ‍್ಯಾಗಿಂಗ್ ಮಾಡುತ್ತಿದ್ದರು. ಅಕ್ಟೋಬರ್ 25 ರಂದು ಬಾಲಕನನ್ನು ಮೂವರು ಬಾಲಕರು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಇದರಿಂದ ಬಾಲಕನ ವೃಷಣಕ್ಕೆ ಗಂಭೀರ ಗಾಯವಾಗಿದೆ. ಮೂವರ ಬಾಲಕರ ವಿರುದ್ಧ ದೂರು ತೆಗೆದುಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಬಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಾಲಕ ಹಾಗೂ ಆತನ ಸಂಬಂಧಿಕರು ಆಗ್ರಹಿಸಿದ್ದಾರೆ.