ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಸರಾ ಅಂಬಾರಿ ತಾಲೀಮಿನಲ್ಲಿ ವಿಫಲ: ಕ್ಯಾಪ್ಟನ್ ರೇಸ್‌ನಿಂದ ಮಹೇಂದ್ರ ಆನೆ ಬಹುತೇಕ ಔಟ್!

ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದೆ. ಇದೀಗ ಚಿನ್ನದ ಅಂಬಾರಿ ಹೊರುವ ಪ್ರಮುಖ ಆನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಬಾರಿ ಅಂಬಾರಿ ಹೊರುವ ರೇಸ್‌ನಲ್ಲಿದ್ದ ಮಹೇಂದ್ರ ಆನೆ, ತಾಲೀಮಿನ ವೇಳೆ ಅರ್ಧ ದಾರಿಯಲ್ಲೇ ಸುಸ್ತಾಗಿ ನಿಂತಿದ್ದಾನೆ ಎಂದು ತಿಳಿದು ಬಂದಿದೆ.

ಸಂಗ್ರಹ ಚಿತ್ರ

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದೆ. ಇದೀಗ ಚಿನ್ನದ ಅಂಬಾರಿ ಹೊರುವ ಪ್ರಮುಖ ಆನೆಯ (Mysuru Dasara) ಆಯ್ಕೆ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಬಾರಿ ಅಂಬಾರಿ ಹೊರುವ ರೇಸ್‌ನಲ್ಲಿದ್ದ ಮಹೇಂದ್ರ ಆನೆ, ತಾಲೀಮಿನ ವೇಳೆ ಅರ್ಧ ದಾರಿಯಲ್ಲೇ ಸುಸ್ತಾಗಿ ನಿಂತಿದ್ದಾನೆ ಎಂದು ತಿಳಿದು ಬಂದಿದೆ. ಮೈಸೂರು ಅರಮನೆಯಿಂದ ಹೊರಟು ಜಂಬೂಸವಾರಿ ಮಾರ್ಗದಲ್ಲಿ ಸಾಗುತ್ತಿದ್ದಾಗ, ಮಹೇಂದ್ರ ಆನೆಯು ಆಯುರ್ವೇದ ಆಸ್ಪತ್ರೆ ವೃತ್ತದ ಬಳಿ ಭಾರವನ್ನು ತಡೆಯಲಾಗದೇ ನಿಂತಿದೆ.

ಒಂದು ವಾರದ ಹಿಂದೆ ಮೊದಲ ಬಾರಿಗೆ ಮಹೇಂದ್ರನಿಗೆ ಮರದ ಅಂಬಾರಿ ಹೊರಿಸಿ ತಾಲೀಮು ಮಾಡಿಸಲಾಗಿತ್ತು. ಆದರೆ ವಿಪರೀತ ಮಳೆಯ ಕಾರಣ ತಾಲೀಮನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಇದೀಗ ಎರಡನೇ ಬಾರಿಯೂ ತಾಲೀಮಯ ಮೊಟಕುಗೊಂಡಿದ್ದು, ದಸರಾ ಅಂಬಾರಿ ಹೊರುವ ಕ್ಯಾಪ್ಟನ್​ ರೇಸ್​ನಿಂದ ಮಹೇಂದ್ರ ಬಹುತೇಕ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

280 ಕೆಜಿ ತೂಕದ ಮರದ ಅಂಬಾರಿ, ಗಾದಿ, ಮರಳು ಮೋಟೆ ಸೇರಿದಂತೆ ಸುಮಾರು ಸಾವಿರ ಕೆಜಿ ಭಾರ ಇರಿಸಿ ಮಹೇಂದ್ರನಿಗೆ ಮೂರನೇ ಹಂತದ ತಾಲೀಮು ನಡೆಸಲಾಗುತ್ತಿತ್ತು. ಆದರೆ, ಅರಮನೆಯಿಂದ ಹೊರಟ ಗಜಪಡೆ ನಗರದ ಆಯುರ್ವೇದಿಕ್ ವೃತ್ತದ ಬಳಿ ತಲುಪುತ್ತಿದ್ದಂತೆ ಮಹೇಂದ್ರ ಇದ್ದಕ್ಕಿದ್ದಂತೆ ನಿಂತು ಮುಂದೆ ಸಾಗಲು ನಿರಾಕರಿಸಿದ. ತಕ್ಷಣವೇ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು, ಹಗ್ಗದ ನೆರವಿನಿಂದ ಮರದ ಅಂಬಾರಿಯನ್ನು ಕೆಳಗಿಳಿಸಿ ಆಟೋ ಮೂಲಕ ಸ್ಥಳಾಂತರಿಸಿದ್ದಾರೆ.

ಅರಣ್ಯಾಧಿಕಾರಿಗಳು, ಈ ಕುರಿತು ಮಾತನಾಡಿ, “ಮಹೇಂದ್ರ ಆನೆ ಸಂಪೂರ್ಣ ಆರೋಗ್ಯವಾಗಿದೆ. ಶ್ರೀರಂಗಪಟ್ಟಣ ದಸರಾದಲ್ಲಿ ನಾಲ್ಕು ಬಾರಿ ಅಂಬಾರಿ ಹೊತ್ತ ಅನುಭವವೂ ಇದಕ್ಕಿದೆ. ಆದರೆ ಆನೆಗಳಿಗೆ ಆಯಾಸವಾದಾಗ ಅಥವಾ ಮುಜುಗರವಾದಾಗ ತಾಲೀಮು ನಿಲ್ಲಿಸುವುದು ನಮ್ಮ ಕರ್ತವ್ಯ. ವಿಶ್ರಾಂತಿಯ ಅಗತ್ಯವಿರುವುದರಿಂದ ಸದ್ಯಕ್ಕೆ ತಾಲೀಮಿನಿಂದ ವಿರಾಮ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

Hebbal Dasara: ಶತಮಾನ ಇತಿಹಾಸದ ಹೆಬ್ಬಾಳ ದಸರಾಗೆ ಅ.11 ರಂದು ಚಾಲನೆ: ಅ.21 ರವರೆಗೆ ನಡೆಯಲಿರುವ ರಾಜ್ಯದ ಎರಡನೇ ಮೈಸೂರು ದಸರಾ

ಇನ್ನು ಗಜಪಡೆಗೆ ತಾಲೀಮು ಅಂತಿಮ ಹಂತ ತಲುಪಿದ್ದು ಕುಶಾಲತೋಪು ತಾಲೀಮಿನ ಪೂರ್ವಭಾವಿಯಾಗಿ ಬುಧವಾರ ಮೊದಲ ಹಂತದ ಸಿಡಿಮದ್ದು ತಾಲೀಮನ್ನು ಯಶಸ್ವಿಯಾಗಿ ನಡೆಸಲಾಗಿದೆ. ವಸ್ತು ಪ್ರದರ್ಶನ ಆವರಣದಲ್ಲಿ ದಸರಾ ಗಜಪಡೆಯ ಒಟ್ಟು 13 ಆನೆಗಳು ಸೇರಿದಂತೆ ಅಶ್ವದಳಕ್ಕೆ ಸಿಡಿಮದ್ದು ತಾಲೀಮು ನಡೆಸಲಾಯಿತು. ದಸರಾ ಗಜಪಡೆಯ ಅಭಿಮನ್ಯು, ಧನಂಜಯ, ಏಕಲವ್ಯ, ಪ್ರಶಾಂತ, ಸುಗ್ರೀವ, ಮಹೇಂದ್ರ, ಶ್ರೀಕಂಠ, ಗೋಪಿ, ಕಾವೇರಿ, ಲಕ್ಷ್ಮಿ, ಚೈತ್ರ ಹಾಗೂ ರೂಪ ಆನೆಗಳು ಸೇರಿದಂತೆ ಅಶ್ವದಳದ 40 ಕುದುರೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು. 7 ಫಿರಂಗಿ ಬಂಡಿಗಳಿಂದ ತಲಾ ಮೂರು ಸುತ್ತಿನಂತೆ ಒಟ್ಟು 21 ಬಾರಿ ಸಿಡಿಮದ್ದು ಸಿಡಿಸಲಾಯಿತು.

Vishakha Bhat Heggar

View all posts by this author