ಮೈಸೂರು: ಗೋದ್ರೇಜ್ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್'ನ (ಜಿಸಿಪಿಎಲ್) ಅಂಗಸಂಸ್ಥೆ ಗೋದ್ರೇಜ್ ಪೆಟ್ ಕೇರ್ (ಜಿಪಿಸಿ), ಶ್ವಾನಗಳ ಕರುಳಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿರುವ ಸಾಕುಪ್ರಾಣಿ ಆಹಾರದ ಸಾಕು ಪ್ರಾಣಿಗಳ ಆರೈಕೆ ಬ್ರ್ಯಾಂಡ್ ʼಗೋದ್ರೇಜ್ ನಿಂಜಾʼ (Godrej Ninja) ಪ್ರಾರಂಭಿಸುವ ಮೂಲಕ ದಕ್ಷಿಣದ ನಾಲ್ಕು ರಾಜ್ಯಗಳಿಗೆ ತನ್ನ ವಹಿವಾಟು ವಿಸ್ತರಿಸಿದೆ.
ತಮಿಳುನಾಡಿನಲ್ಲಿ ಕಂಡು ಬಂದ ಮಾರುಕಟ್ಟೆಯ ಉತ್ತೇಜಕರ ಪ್ರತಿಕ್ರಿಯೆ ಆಧರಿಸಿ, ಬ್ರ್ಯಾಂಡ್ ಈಗ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲಿ ತನ್ನ ವಹಿವಾಟು ವಿಸ್ತರಿಸಿದೆ.
ಶ್ವಾನಗಳ ಕರುಳಿನ ಆರೋಗ್ಯಕ್ಕೆ ಪೂರಕವಾದ, ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ವನ್ನು ಈ ನಾಲ್ಕೂ ರಾಜ್ಯಗಳಲ್ಲಿನ ಸಾಕುಪ್ರಾಣಿಗಳ ಮಾಲೀಕರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ಕಂಪನಿಯು ತನ್ನ ವಹಿವಾಟಿನ ವ್ಯಾಪ್ತಿಯನ್ನು ವಿಸ್ತರಿಸಿದೆ. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಾಕುಪ್ರಾಣಿ ಆರೈಕೆ ಕ್ಷೇತ್ರದಲ್ಲಿ ಅಖಿಲ ಭಾರತ ಮಟ್ಟದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸುವ ಕಂಪನಿಯ ಗುರಿ ಸಾಧಿಸುವ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಇದನ್ನೂ ಓದಿ: Mysuru Dasara 2026: ಈ ಬಾರಿ 11 ದಿನಗಳ ವಿಜೃಂಭಣೆಯ ಮೈಸೂರು ದಸರಾ; ಅ.11ಕ್ಕೆ ಉದ್ಘಾಟನೆ, ಅ.21ಕ್ಕೆ ಜಂಬೂ ಸವಾರಿ
ಗೋದ್ರೆಜ್ ಕನ್ಸುಮರ್ ಪ್ರಾಡಕ್ಟ್ಸ್‌ನಲ್ಲಿ ಸಾಕುಪ್ರಾಣಿ ಆರೈಕೆ ವಿಭಾಗವು ತ್ವರಿತವಾಗಿ ಬೆಳೆಯುತ್ತಿದೆ. ಸದ್ಯಕ್ಕೆ ಈ ಮಾರುಕಟ್ಟೆಯ ಮೌಲ್ಯವು ₹ 6,000 ಕೋಟಿಗಳಷ್ಟಿದ್ದು, ಅದರಲ್ಲಿ ₹ 5,000 ಕೋಟಿಗಳಷ್ಟು ಮೊತ್ತವು ಸಾಕುಪ್ರಾಣಿಗಳ ಆಹಾರ ಮಾರುಕಟ್ಟೆ ಯದ್ದಾಗಿದೆ. ಮುಂದಿನ ಕೆಲವು ದಶಕಗಳಲ್ಲಿ ಈ ಕ್ಷೇತ್ರವು ಎರಡಂಕಿಯ ಬೆಳವಣಿಗೆ ದಾಖಲಿಸುವ ಸಾಮರ್ಥ್ಯ ಹೊಂದಿದೆ.
ದೇಶದಲ್ಲಿ ಸಾಕುಪ್ರಾಣಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಪ್ಯಾಕೇಜ್ ಮಾಡಿದ ಸಾಕುಪ್ರಾಣಿಗಳ ಆಹಾರದ ಬಳಕೆ ಇನ್ನೂ ಕಡಿಮೆ ಮಟ್ಟದಲ್ಲಿದೆ. ಸದ್ಯಕ್ಕೆ ದೇಶದಲ್ಲಿ ಶೇಕಡ 10ರಷ್ಟು ಜನರು ಸಾಕುಪ್ರಾಣಿಗಳನ್ನು ಸಾಕುತ್ತಿದ್ದು, ಅವರಲ್ಲಿ ಕೇವಲ ಶೇಕಡ 10ರಷ್ಟು ಜನರು ಮಾತ್ರ ಪ್ಯಾಕೇಜ್ ಮಾಡಿದ ಸಾಕುಪ್ರಾಣಿಗಳ ಆಹಾರವನ್ನು ಪ್ರಾಣಿಗಳಿಗೆ ನೀಡುತ್ತಾರೆ. ಅಲ್ಲದೆ, ಅವರೂ ಸಹ ತಮ್ಮ ಸಾಕುಪ್ರಾಣಿಗಳಿಗೆ ಒಟ್ಟು ಆಹಾರ ದಲ್ಲಿ ಕೇವಲ ಶೇಕಡಾ 40ರಷ್ಟು ಮಾತ್ರ ಪ್ಯಾಕೇಜ್ ಮಾಡಿದ ಆಹಾರವನ್ನು ನೀಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಕ್ಯಾಲೊರಿ ಪರಿವರ್ತನೆ ಪ್ರಮಾಣ ಕೇವಲ ಶೇಕಡ 5ರಷ್ಟಿದೆ. 15 ವರ್ಷಗಳ ಹಿಂದೆ ಭಾರತದಂತೆಯೇ ಇದ್ದ ಚೀನಾದಲ್ಲಿ ಈಗ ಸುಮಾರು ಶೇಕಡ 20ರಷ್ಟು ಜನರು ಸಾಕುಪ್ರಾಣಿಗಳನ್ನು ಸಾಕುತ್ತಿದ್ದು, ಅಲ್ಲಿ ಕ್ಯಾಲೊರಿ ಪರಿವರ್ತನೆ ಪ್ರಮಾಣವು ಶೇಕಡ 25ಕ್ಕೆ ತಲುಪಿದೆ.
ದೇಶದ ಸಾಕುಪ್ರಾಣಿ ಆಹಾರ ಮಾರುಕಟ್ಟೆಯಲ್ಲಿ ದಕ್ಷಿಣ ಭಾರತದ ಪಾಲು ₹ 1,800– 2,000 ಕೋಟಿಗಳಷ್ಟಿದೆ. ದಕ್ಷಿಣ ಭಾರತದಲ್ಲಿ, ಕರ್ನಾಟಕವು ಅತಿದೊಡ್ಡ ಸಾಕುಪ್ರಾಣಿ ಆಹಾರ ಮಾರುಕಟ್ಟೆಯಾಗಿದ್ದು, ಆಂಧ್ರಪ್ರದೇಶ , ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ರಾಷ್ಟ್ರೀಯ ಸಾಕುಪ್ರಾಣಿ ಆಹಾರ ಮಾರಾಟಕ್ಕೆ ಕೊಡುಗೆ ನೀಡುವ ವಿಷಯದಲ್ಲಿ, ಕರ್ನಾಟಕವು ಅತ್ಯಧಿಕ ಪಾಲು (ಶೇಕಡ 15ರಷ್ಟು) ಹೊಂದಿದೆ. ನಂತರ ಆಂಧ್ರಪ್ರದೇಶ ಮತ್ತು ತೆಲಂಗಾಣ (ಶೇಕಡ 8), ತಮಿಳುನಾಡು (ಶೇಕಡ 8) ಮತ್ತು ಕೇರಳ ಶೇಕಡ 5ರಷ್ಟು ಪಾಲು ಹೊಂದಿವೆ.
2024 ರಲ್ಲಿ ಅಸ್ತಿತ್ವಕ್ಕೆ ಬಂದ ಗೋದ್ರೇಜ್ ಪೆಟ್ ಕೇರ್, ಗೋದ್ರೇಜ್ ಅಗ್ರೋವೆಟ್‌ನ ಪ್ರಾಣಿ ಪೋಷಣೆಯ ಪರಿಣತಿಯನ್ನು ಗೋದ್ರೇಜ್ ಗ್ರಾಹಕ ಉತ್ಪನ್ನಗಳ ಬ್ರ್ಯಾಂಡ್-ನಿರ್ಮಾಣ ಮತ್ತು ವಿತರಣಾ ಸಾಮರ್ಥ್ಯಗಳೊಂದಿಗೆ ಸಂಯೋಜಿಸುತ್ತದೆ. ಪ್ರತ್ಯೇಕ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಮತ್ತು ಪ್ರಾಣಿಗಳ ಸಂಶೋಧನೆಹಾಗೂ ಅಭಿವೃದ್ಧಿ ನಾದಿರ್ ಗೋದ್ರೇಜ್ ಕೇಂದ್ರದ ನೆರವು ಪಡೆದುಕೊಂಡಿರುವ ಈ ಕಂಪನಿಯು ಗ್ರಾಹಕರಿಗೆ ವೈಜ್ಞಾನಿಕ ಹಾಗೂ ವಿಶ್ವಾಸಾರ್ಹವಾದ ಸಾಕುಪ್ರಾಣಿ ಆರೈಕೆ ವಿಭಾಗ ಅಭಿವೃದ್ಧಿ ಪಡಿಸುವುದರತ್ತ ಗಮನಹರಿಸಿದೆ.
ನಿಂಜಾ ಪೆಟ್ ಫುಡ್ ಬ್ರ್ಯಾಂಡ್ ಪರಿಚಯಿಸಿದ ಸಮಾರಂಭದಲ್ಲಿ ಮಾತನಾಡಿದ, ಗೋದ್ರೇಜ್ ಪೆಟ್ ಕೇರ್ ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ನಿತಿನ್ ಜೈನ್ ಅವರು, "ದೇಶಿ ಸಾಕುಪ್ರಾಣಿ ಆರೈಕೆ ಉದ್ಯಮಕ್ಕೆ ದಕ್ಷಿಣ ಭಾರತವು ಪ್ರಮುಖ ಬೆಳವಣಿಗೆಯ ಮಾರುಕಟ್ಟೆಯಾಗಿದ್ದು, ಈ ವಿಭಾಗದ ದೀರ್ಘಕಾಲೀನ ಅಭಿವೃದ್ಧಿಗೆ ಅಪಾರ ಅವಕಾಶ ಗಳನ್ನು ಹೊಂದಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳಿಗೆ ಹೋಲಿಸಿದರೆ, ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸಾಕುಪ್ರಾಣಿಗಳ ಆಹಾರ ಒದಗಿಸುವ ಮೂಲಕ ಈ ವಿಭಾಗವನ್ನು ಹೆಚ್ಚಿನ ಜನರಿಗೆ ತಲುಪಿಸುವ ಗುರಿಯೊಂದಿಗೆ ಗೋದ್ರೆಜ್ ಪೆಟ್ ಕೇರ್ ಕಾರ್ಯ ನಿರ್ವಹಿಸುತ್ತಿದೆ.
ತಮಿಳುನಾಡಿನಲ್ಲಿ ‘ಗೋದ್ರೆಜ್ ನಿಂಜಾ’ ಗೆ ದೊರೆತಿರುವ ಉತ್ತೇಜನಕಾರಿ ಪ್ರತಿಕ್ರಿಯೆಯು, ವೈಜ್ಞಾನಿಕ ಆಧಾರಿತ ಪೌಷ್ಟಿಕ ಆಹಾರದ ಬಗ್ಗೆ ಸಾಕುಪ್ರಾಣಿ ಮಾಲೀಕರಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ದೃಢಪಡಿಸಿದೆ.
ಮುಂದಿನ ಕೆಲವು ವರ್ಷಗಳಲ್ಲಿ ಸಾಕುಪ್ರಾಣಿ ಆರೈಕೆ ಕ್ಷೇತ್ರದಲ್ಲಿ ₹ 500 ಕೋಟಿ ಹೂಡಿಕೆ ಮಾಡುವ ಯೋಜನೆಯೊಂದಿಗೆ, ಸಾಕುಪ್ರಾಣಿಗಳ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರವನ್ನು ಹೆಚ್ಚಿನ ಸಂಖ್ಯೆಯ ಸಾಕುಪ್ರಾಣಿ ಮಾಲೀಕರಿಗೆ ಸುಲಭವಾಗಿ ತಲುಪಿಸುವ ಮೂಲಕ ದಕ್ಷಿಣ ಭಾರತದಲ್ಲಿ ತ್ವರಿತವಾಗಿ ವಹಿವಾಟು ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ಹೇಳಿದ್ದಾರೆ.