ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳೆಯರಿಂದ ಶೋಷಣೆಗೆ ಒಳಗಾಗುವ ಪುರುಷರ ರಕ್ಷಣೆಗೆ ಪುರುಷ ಆಯೋಗ ರಚಿಸಿ; H ವಿಶ್ವನಾಥ್‌ ಆಗ್ರಹ

ಪುರುಷರ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮಹಿಳಾ ಆಯೋಗ ಇರುವ ಮಾದರಿಯಲ್ಲೇ ಪುರುಷರ ರಕ್ಷಣೆಗಾಗಿ ತಕ್ಷಣವೇ 'ಪುರುಷ ಆಯೋಗ'ವನ್ನು ರಚಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ತೊಂದರೆ ಆದರೆ ಪೊಲೀಸರು ಬರ್ತಾರೆ. ಹೆಣ್ಮಕ್ಕಳ ರಕ್ಷಣೆಗೆ ಕಾನೂನು ಇದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು: ಪುರುಷರ ಮೇಲೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮಹಿಳಾ ಆಯೋಗ (H Vishwanath) ಇರುವ ಮಾದರಿಯಲ್ಲೇ ಪುರುಷರ ರಕ್ಷಣೆಗಾಗಿ ತಕ್ಷಣವೇ 'ಪುರುಷ ಆಯೋಗ'ವನ್ನು ರಚಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ತೊಂದರೆ ಆದರೆ ಪೊಲೀಸರು ಬರ್ತಾರೆ. ಹೆಣ್ಮಕ್ಕಳ ರಕ್ಷಣೆಗೆ ಕಾನೂನು ಇದೆ. ತ್ವರಿತವಾಗಿ ಬಂಧಿಸುವ ಕೆಲಸ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಪುರುಷರ ಮೇಲೂ ದೌರ್ಜನ್ಯ ಆಗುತ್ತಿದೆ ಎಂದರು.

ಪುರುಷರು ಕೂಡ ಮಹಿಳೆಯರಿಂದ ಸಾಕಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರ ರಕ್ಷಣೆಗಾಗಿ ಇರುವ ಕೆಲವು ಕಾನೂನುಗಳು ದುರ್ಬಳಕೆಯಾಗುತ್ತಿದ್ದು, ಇದರಿಂದ ಅಮಾಯಕ ಪುರುಷರು ಮತ್ತು ಅವರ ಕುಟುಂಬದವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ನೊಂದ ಪುರುಷರ ಧ್ವನಿಯಾಗಲು ಮತ್ತು ಅವರಿಗೆ ಕಾನೂನುಬದ್ಧ ನ್ಯಾಯ ಕೊಡಿಸಲು ಪ್ರತ್ಯೇಕ ಆಯೋಗದ ಅಗತ್ಯತೆ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಪುರುಷರ ದೂರುಗಳಿಗೆ ಬೆಲೆ ಕೊಡುತ್ತಿಲ್ಲ. ಪುರುಷರಿಗಾಗಿಯೇ ಪುರುಷ ರಕ್ಷಣಾ ವೇದಿಕೆ ಸ್ಥಾಪಿಸಿದ್ದೇವೆ. ಪುರುಷರಿಗೆ ಆಗುವ ದೌರ್ಜನ್ಯವನ್ನ ತಡೆಯುವುದು ಈ ಸಂಘಟನೆಯ ಉದ್ದೇಶವಾಗಿದೆ, ಇದರಲ್ಲಿ ಮಹಿಳೆಯರೂ ಇದ್ದಾರೆ. ಪುರುಷರ ಮೇಲಿನ ದೌರ್ಜನ್ಯ ತಡೆಯಲು ಈ ಸಮಿತಿ ಇರುತ್ತದೆ. ಇದನ್ನು ಕಾನೂನಾತ್ಮಕವಾಗಿಯೇ ನಾವು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

ಮಕ್ಕಳ ಮೇಲೆ ದೌರ್ಜನ್ಯ: ಬೆಂಗಳೂರು ಡೇ ಕೇರ್‌ನ ಇಬ್ಬರು ಆರೈಕೆದಾರರ ಬಂಧನ

'ಪುರುಷ ರಕ್ಷಣಾ ವೇದಿಕೆ' ಸ್ಥಾಪಿಸಬೇಕು

ಪೊಲೀಸ್ ಠಾಣೆಗಳಲ್ಲಿ ಪುರುಷರು ನೀಡುವ ದೂರುಗಳಿಗೆ ಯಾವುದೇ ಬೆಲೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪುರುಷರ ಮೇಲಿನ ದೌರ್ಜನ್ಯವನ್ನು ತಡೆಯಲು 'ಪುರುಷ ರಕ್ಷಣಾ ವೇದಿಕೆ'ಯನ್ನು ಸ್ಥಾಪಿಸಬೇಕು. ಮಹಿಳೆಯರಿಂದ ಅಥವಾ ಸಮಾಜದ ಯಾವುದೇ ವರ್ಗದಿಂದ ಪುರುಷರ ಮೇಲೆ ನಡೆಯುವ ದೌರ್ಜನ್ಯಗಳು, ಸುಳ್ಳು ಮೊಕದ್ದಮೆಗಳು ಮತ್ತು ಮಾನಸಿಕ ಕಿರುಕುಳವನ್ನು ತಡೆಯುವುದು ಈ ನೂತನ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

Vishakha Bhat Heggar

View all posts by this author