-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಲು ಈ ಬಾರಿ ವಿನೂತನ ರೂಪ ಪಡೆದ ನಾನಾ ಸಿಕ್ವೀನ್ಸ್ ಡಿಸೈನರ್‌ವೇರ್‌ಗಳು ಫ್ಯಾಷನ್ ಲೋಕಕ್ಕೆ (Navaratri Fashion 2025) ಕಾಲಿಟ್ಟಿವೆ. ಎಥ್ನಿಕ್ ಲುಕ್‌ಗೆ ಸಾಥ್ ನೀಡುತ್ತಿವೆ. ಮೈಕ್ರೊ, ಮೆಗಾ, ಫ್ಲೋರಲ್, ಸ್ಟಾರ್ ಡಿಸೈನ್‌ನವು ಸೇರಿದಂತೆ ನಾನಾ ಬಗೆಯ ಹ್ಯಾಂಡ್‌ವರ್ಕ್ ಹಾಗೂ ಮೆಷಿನ್ ಸಿಕ್ವೀನ್ಸ್ ವಿನ್ಯಾಸಗಳು ಗಾಗ್ರಾ, ಕಮೀಝ್, ಅನಾರ್ಕಲಿ, ಕಟ್ಔಟ್ ಗೌನ್ಸ್, ತ್ರೀ ಪೀಸ್ ಲೆಹೆಂಗಾ ಸೇರಿದಂತೆ ನಾನಾ ಡಿಸೈನರ್‌ವೇರ್‌ಗಳಲ್ಲಿ ಸಮಾಗಮಗೊಂಡಿವೆ. ಫ್ಯಾಷನ್ ಪ್ರಿಯರನ್ನು ಮಿನುಗಿಸುತ್ತಿವೆ.

ಬಾಲಿವುಡ್ ಸಿನಿಮಾಗಳಲ್ಲಿ ಸಿಕ್ವೀನ್ಸ್ ಡಿಸೈನರ್‌ವೇರ್ಸ್
ಅಂದಹಾಗೆ, ನಾರ್ತ್ಇಂಡಿಯಾದಲ್ಲಿ ಮೊದಲಿನಿಂದಲೂ ನವರಾತ್ರಿ ಫೆಸ್ಟೀವ್ ಸೀಸನ್‌ನಲ್ಲಿ ಮಿನುಗುವ ಸಿಕ್ವೀನ್ಸ್ ವರ್ಕ್ ಇರುವಂತ ಡಿಸೈನರ್‌ವೇರ್‌ಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಬಾಲಿವುಡ್ ಸಿನಿಮಾಗಳಲ್ಲೂ ಕೂಡ ಅತಿ ಹೆಚ್ಚಾಗಿ ಈ ವಿನ್ಯಾಸದ ಉಡುಪುಗಳನ್ನು ಕಾಣಬಹುದಾಗಿತ್ತು. ಬರಬರುತ್ತಾ ಅಲ್ಲಿನ ಡಿಸೈನರ್‌ಗಳು ಫೋಲ್ಕ್ ಕಲ್ಚರ್‌ಗೆ ಹೊಂದುವಂತಹ ಈ ಡಿಸೈನ್‌ಗಳನ್ನು ಇನ್ನಿತರೆ ಉಡುಪುಗಳಲ್ಲೂ ಪ್ರಯೋಗ ಮಾಡತೊಡಗಿದರು. ಕೇವಲ ಲೆಹೆಂಗಾಗೆ ಸೀಮಿತವಾಗಿದ್ದ ಈ ಕಾನ್ಸೆಪ್ಟನ್ನು ಇಂಡೋ-ವೆಸ್ಟರ್ನ್ ಔಟ್‌ಫಿಟ್‌ನಲ್ಲೂ ಡಿಸೈನ್ ಮಾಡಿದರು. ಕಾಲಕಳೆದಂತೆ ಸಿಕ್ವೀನ್ಸ್ ಉಡುಪುಗಳು ಉತ್ತರ-ದಕ್ಷಿಣ ಎಂಬ ಭೇದ-ಭಾವವಿಲ್ಲದೇ ಎಲ್ಲಾ ಪ್ರಾಂತ್ಯದ ಫ್ಯಾಷನ್ ಪ್ರಿಯರಿಗೂ ಇಷ್ಟವಾಗ ತೊಡಗಿದವು ಎಂದು ವಿವರಿಸುತ್ತಾರೆ ಡಿಸೈನರ್ ದಿವ್ಯಾ.

ಸಿಕ್ವೀನ್ಸ್ ಡಿಸೈನ್‌ನ ಉಡುಪುಗಳ ಬದಲಾದ ಔಟ್‌ಲುಕ್
ಇಂದಿನ ಕಾನ್ಸೆಪ್ಟ್ ಅನ್ನು ಮಿಕ್ಸ್ ಮ್ಯಾಚ್ ಮಾಡಿಕೊಂಡು ಮತ್ತಷ್ಟು ಬದಲಾವಣೆಗಳೊಂದಿಗೆ ಹೊಸ ರೂಪದಲ್ಲಿ ಈ ಸಿಕ್ವೀನ್ಸ್ ಡಿಸೈನ್ ಕಾಣಿಸಿಕೊಂಡಿರುವುದು ಹೆಣ್ಣುಮಕ್ಕಳಿಗೆ ಪ್ರಿಯವಾಗತೊಡಗಿವೆ ಎನ್ನುತ್ತಾರೆ ಡಿಸೈನರ್ ರಾಶಿ.

ಸಿಕ್ವೀನ್ಸ್ ಡಿಸೈನರ್‌ವೇರ್ ಧರಿಸುವವರ ಗಮನಕ್ಕೆ
- ಮೆಷಿನ್ ವರ್ಕ್ ಸಿಕ್ವೀನ್ಸ್ ಡಿಸೈನರ್‌ವೇರ್‌ಗಳು ಕೈಗೆಟಕುವ ಬೆಲೆಗೆ ದೊರೆಯುತ್ತವೆ.
- ಆದಷ್ಟೂ ಲೈಟ್ವೇಟ್ ಸಿಕ್ವೀನ್ಸ್ ಡಿಸೈನರ್‌ವೇರ್ ಖರೀದಿಸಿ.
- ಇದೀಗ ವೆಲ್ವೆಟ್ ಮೇಲೂ ಸಿಕ್ವೀನ್ಸ್ ಡಿಸೈನರ್‌ವೇರ್‌ಗಳು ಬಂದಿವೆ.
- ಸ್ಕಿನ್‌ಟೋನ್‌ಗೆ ತಕ್ಕ ಬಣ್ಣ ಆಯ್ಕೆ ಮಾಡುವುದು ಉತ್ತಮ.
- ಗೋಲ್ಡನ್ ಸಿಲ್ವರ್ ಎರಡೂ ಬಗೆಯವು ಟ್ರೆಂಡಿಯಾಗಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Navaratri Nailart 2025: ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಯ್ತು ನವರಾತ್ರಿ ನೇಲ್ ಆರ್ಟ್