ಕನ್ನಡಿಗ ಶತಾವಧಾನಿ ಡಾ. ಆರ್. ಗಣೇಶ್‌ಗೆ ಪದ್ಮ ಭೂಷಣ; ಧರ್ಮೇಂದ್ರಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ
ಶತಾವಧಾನಿ ಆರ್. ಗಣೇಶ್ ಅವರಿಗೆ ಕಲೆ ವಿಭಾಗದಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಇನ್ನು ಇತ್ತೀಚೆಗೆ ನಿಧನರಾದ ಬಾಲಿವುಡ್‌ನ ನಟ ಧರ್ಮೇಂದ್ರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕಲೆ ಕ್ಷೇತ್ರದಲ್ಲಿ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಲಭಿಸಿದೆ. ಈ ಬಾರಿ ಒಟ್ಟು 5 ಪದ್ಮ ವಿಭೂಷಣ, 13 ಪದ್ಮ ಭೂಷಣ ಮತ್ತು 113 ಪದ್ಮ ಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಶತಾವಧಾನಿ ಆರ್. ಗಣೇಶ್ (ಸಂಗ್ರಹ ಚಿತ್ರ) -
ದೆಹಲಿ, ಜ. 25: ಗಣರಾಜ್ಯೋತ್ಸವ ಮುನ್ನಾ ದಿನವಾದ ಜನವರಿ 25ರಂದು ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ. ಈ ಪೈಕಿ ನಾಲ್ವರು ಕನ್ನಡಿಗರು ಈ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಶತಾವಧಾನಿ ಆರ್. ಗಣೇಶ್ ಅವರಿಗೆ ಕಲೆ ವಿಭಾಗದಲ್ಲಿ ಪದ್ಮ ಭೂಷಣ (Padma Bhushan) ಲಭಿಸಿದೆ. ಡಾ.ಆರ್. ಗಣೇಶ್ ನಾಡಿನ ಏಕೈಕ ಶತಾವಧಾನಿಗಳು ಹಾಗೂ ಬಹುಶ್ರುತ ಕವಿ-ವಿದ್ವಾಂಸರು. ಇದುವರೆಗೆ ಸಾವಿರದ ಮುನ್ನೂರಕ್ಕೂ ಹೆಚ್ಚು ಅಷ್ಟಾವಧಾನಗಳನ್ನೂ ಐದು ಶತಾವಧಾನಗಳನ್ನೂ ದೇಶ-ವಿದೇಶಗಳಲ್ಲಿ ನಿರ್ವಹಿಸಿದ ಖ್ಯಾತಿ ಇವರದ್ದು. ವಿವಿಧ ವಿಷಯಗಳನ್ನು ಆಧರಿಸಿ ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಇವರು ಬುದ್ಧಿ-ಭಾವಗಳ ಬಿರುಕಿಲ್ಲದ ಬೆಸುಗೆ ಎನ್ನಿಸಿದ್ದಾರೆ. ಕಾವ್ಯ, ಸಣ್ಣಕತೆ, ಕಾದಂಬರಿ, ಸಂಶೋಧನೆ, ವ್ಯಕ್ತಿಚಿತ್ರ, ಜೀವನಚರಿತ್ರೆ, ಅನುವಾದ, ವಿಮರ್ಶೆ, ಗ್ರಂಥಸಂಪಾದನೆ ಮೊದಲಾದ ಸಾಹಿತ್ಯಪ್ರಕಾರಗಳು ಇವರ ಬರಹಗಳಿಂದ ಮೆರಗನ್ನು ಕಂಡಿದೆ. ಅಲಂಕಾರ ಶಾಸ್ತ್ರ, ಛಂದಃಶಾಸ್ತ್ರ, ಅಧ್ಯಾತ್ಮ, ಸಂಸ್ಕೃತಿ ಹೀಗೆ ಹಲವಾರ ವಿಷಯಗಳ ಕುರಿತು ಇವರ ಕೃತಿಗಳು ಪಥದರ್ಶಕಗಳಾಗಿದೆ.
ಇನ್ನು ಇತ್ತೀಚೆಗೆ ನಿಧನರಾದ ಬಾಲಿವುಡ್‌ನ ನಟ ಧರ್ಮೇಂದ್ರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕಲೆ ಕ್ಷೇತ್ರದಲ್ಲಿ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಲಭಿಸಿದೆ. ಈ ಬಾರಿ ಒಟ್ಟು 5 ಪದ್ಮ ವಿಭೂಷಣ, 13 ಪದ್ಮ ಭೂಷಣ ಮತ್ತು 113 ಪದ್ಮ ಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ಈ ಮೂಲಕ 131 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಪದ್ಮ ಪ್ರಶಸ್ತಿ ಪುರಸ್ಕೃತರ ವಿವರ:
#PadmaAwards 2026 announced: 131 awardees honoured, including 5 Padma Vibhushan, 13 Padma Bhushan, and 113 Padma Shri, recognising excellence and service across diverse fields.#PadmaAwards2026 #PeoplesPadma pic.twitter.com/iuhyldgeSE
— DD News (@DDNewslive) January 25, 2026
ಈ ಪೈಕಿ ಕರ್ನಾಟಕದ ಮೂವರಿಗೆ ಪದ್ಮ ಶ್ರೀ ಲಭಿಸಿದೆ. ʼಪುಸ್ತಕ ಮನೆʼ ಗ್ರಂಥಾಲಯ ಖ್ಯಾತಿಯ ಅಂಕೇ ಗೌಡ, ದಾವಣಗೆರೆಯ ವೈದ್ಯ ಡಾ. ಸುರೇಶ್ ಹನಗವಾಡಿ ಮತ್ತು ಬೆಂಗಳೂರಿನ ಸಮಾಜ ಸೇವಕಿ ಎಸ್.ಜಿ. ಸುಶೀಲಮ್ಮ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರು.
ಮೂವರು ಕನ್ನಡಿಗರು ಸೇರಿ 46 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ
ಪದ್ಮ ಭೂಷಣ ಮತ್ತು ವಿಭೂಷಣ ಪ್ರಶಸ್ತಿ ಪುರಸ್ಕೃತರು
ಪದ್ಮ ವಿಭೂಷಣ ಪುರಸ್ಕೃತರು
| ಸಾಧಕರು | ಕ್ಷೇತ್ರ | ರಾಜ್ಯ |
|---|---|---|
| ಧರ್ಮೇಂದ್ರ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
| ಕೆ.ಟಿ. ಥಾಮಸ್ | ಸಾರ್ವಜನಿಕ ಸೇವೆ | ಕೇರಳ |
| ಎನ್. ರಾಜಮ್ | ಕಲೆ | ಉತ್ತರ ಪ್ರದೇಶ |
| ಪಿ. ನಾರಾಯಣನ್ | ಸಾಹಿತ್ಯ ಮತ್ತು ಶಿಕ್ಷಣ | ಕೇರಳ |
| ವಿ.ಎಸ್. ಅಚ್ಯುತಾನಂದನ್ (ಮರಣೋತ್ತರ) | ಸಾರ್ವಜನಿಕ ಸೇವೆ | ಕೇರಳ |
ಪದ್ಮ ಭೂಷಣ ಪುರಸ್ಕೃತರು
| ಸಾಧಕರು | ಕ್ಷೇತ್ರ | ರಾಜ್ಯ |
|---|---|---|
| ಅಲ್ಕಾ ಯಾಗ್ನಿಕ್ | ಕಲೆ | ಮಹಾರಾಷ್ಟ್ರ |
| ಭಗತ್ ಸಿಂಗ್ ಕೋಶ್ಯಾರಿ | ಸಾರ್ವಜನಿಕೆ ಸೇವೆ | ಉತ್ತರಾಖಂಡ |
| ಕಲ್ಲಿಪಟ್ಟಿ ರಾಮಸ್ವಾಮಿ ಪಳನಿಸ್ವಾಮಿ | ವೈದ್ಯಕೀಯ | ತಮಿಳುನಾಡು |
| ಮಮ್ಮುಟ್ಟಿ | ಕಲೆ | ಕೇರಳ |
| ಡಾ. ನೋರಿ ದತ್ತಾತ್ರಯುಡು | ವೈದ್ಯಕೀಯ | ಅಮೆರಿಕ |
| ಪಿಯೂಷ್ ಪಾಂಡೆ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
| ಎಸ್.ಕೆ.ಎಂ. ಮೈಲಾನಂದನ್ | ಸಮಾಜ ಸೇವೆ | ತಮಿಳುನಾಡು |
| ಶತಾವಧಾನಿ ಆರ್. ಗಣೇಶ್ | ಕಲೆ | ಕರ್ನಾಟಕ |
| ಶಿಬು ಸೊರೆನ್ (ಮರಣೋತ್ತರ) | ಸಮಾಜ ಸೇವೆ | ಜಾರ್ಖಂಡ |
| ಉದಯ್ ಕೋಟಕ್ | ವ್ಯಾಪಾರ | ಮಹಾರಾಷ್ಟ್ರ |
| ವಿ.ಕೆ. ಮಲ್ಹೋತ್ರ (ಮರಣೋತ್ತರ) | ಸಾರ್ವಜನಿಕ ಸೇವೆ | ದೆಹಲಿ |
| ವೆಲ್ಲಪ್ಪಲ್ಲಿ ನಟೇಶನ್ | ಸಾರ್ವಜನಿಕ ಸೇವೆ | ಕೇರಳ |
| ವಿಜಯ್ ಅಮೃತರಾಜ್ | ಕ್ರೀಡೆ | ಅಮೆರಿಕ |