ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮೂವರು ಕನ್ನಡಿಗರು ಸೇರಿ 46 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ

Padma Awards 2026: ಜನವರಿ 25ರಂದು ಕೇಂದ್ರ ಸರ್ಕಾರ 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಘೋಷಿಸಿದೆ. ತೆರೆಮರೆಯ ಸಾಧಕರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ. ಈ ಪೈಕಿ ಕರ್ನಾಟಕದ ʼಪುಸ್ತಕ ಮನೆʼ ಗ್ರಂಥಾಲಯ ಖ್ಯಾತಿಯ ಅಂಕೇ ಗೌಡ, ದಾವಣಗೆರೆಯ ವೈದ್ಯ ಡಾ. ಸುರೇಶ್‌ ಹನಗವಾಡಿ ಮತ್ತು ಬೆಂಗಳೂರಿನ ಸಮಾಜ ಸೇವಕಿ ಎಸ್‌.ಜಿ. ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ತೆರೆ ಮರೆಯ 46 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ

ಅಂಕೇ ಗೌಡ ಮತ್ತು ಪದ್ಮ ಪ್ರಶಸ್ತಿ -

Ramesh B
Ramesh B Jan 25, 2026 4:21 PM

ದೆಹಲಿ, ಜನವರಿ 25: ಗಣರಾಜ್ಯೋತ್ಸವದ ಮುನ್ನ ದಿನವಾದ ಜನವರಿ 25ರಂದು ಕೇಂದ್ರ ಸರ್ಕಾರ 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಘೋಷಿಸಿದೆ (Padma Awards 2026). ತೆರೆಮರೆಯ ಸಾಧಕರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ. ಈ ಪೈಕಿ ಕರ್ನಾಟಕದ ʼಪುಸ್ತಕ ಮನೆʼ ಗ್ರಂಥಾಲಯ ಖ್ಯಾತಿಯ ಅಂಕೇ ಗೌಡ, ದಾವಣಗೆರೆಯ ವೈದ್ಯ ಡಾ. ಸುರೇಶ್‌ ಹನಗವಾಡಿ ಮತ್ತು ಬೆಂಗಳೂರಿನ ಸಮಾಜ ಸೇವಕಿ ಎಸ್‌.ಜಿ. ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ಪದ್ಮ ಪ್ರಶಸ್ತಿ ಪುರಸ್ಕೃತರು

  • ಅಂಕೇ ಗೌಡ
  • ಡಾ. ಸುರೇಶ್‌ ಹನಗವಾಡಿ
  • ಎಸ್‌.ಜಿ. ಸುಶೀಲಮ್ಮ
  • ಆರ್ಮಿಡಾ ಫೆರ್ನಾಂಡಿಸ್
  • ಭಗವಾನದಾಸ್ ರೈಕ್ವಾರ್
  • ಭಿಕ್ಲ್ಯಾ ಲಡಾಕ್ಯ ಧಿಂಡಾ
  • ಬ್ರಿಜ್ ಲಾಲ್ ಭಟ್
  • ಬುಧ್ರಿ ತತಿ
  • ಚರಣ್ ಹೆಂಬ್ರಾಮ್
  • ಚಿರಂಜಿ ಲಾಲ್ ಯಾದವ್
  • ಧಾರ್ಮಿಕ್ಲಾಲ್ ಚುನಿಲಾಲ್ ಪಾಂಡ್ಯ
  • ಗಫ್ರುದ್ದೀನ್ ಮೇವಾಟಿ ಜೋಗಿ
  • ಹಾಲಿ ವಾರ್
  • ಇಂದರ್‌ಜಿತ್ ಸಿಂಗ್ ಸಿಧು
  • ಕೆ. ಪಜನಿವೇಲ್
  • ಕೈಲಾಶ್ ಚಂದ್ರ ಪಂತ್
  • ಖೇಮ್ ರಾಜ್ ಸುಂಡ್ರಿಯಾಲ್
  • ಕೊಲ್ಲಕ್ಕಾಯಿಲ್ ದೇವಕಿ ಅಮ್ಮ ಜಿ
  • ಕುಮಾರಸ್ವಾಮಿ ತಂಗರಾಜ್
  • ಮಹೇಂದ್ರ ಕುಮಾರ್ ಮಿಶ್ರಾ
  • ಮೀರ್ ಹಾಜಿಭಾಯಿ ಕಸಂಭಾಯ್
  • ಮೋಹನ್ ನಗರ
  • ನರೇಶ್ ಚಂದ್ರ ದೇವ್ ವರ್ಮಾ
  • ನೀಲೇಶ್ ವಿನೋದಚಂದ್ರ ಮಂಡ್ಲೇವಾಲ
  • ನೂರುದ್ದೀನ್ ಅಹಮದ್
  • ಒತ್ತುವರ್ ತಿರುತ್ತಣಿ ಸ್ವಾಮಿನಾಥನ್
  • ಪದ್ಮಾ ಗುರ್ಮೆಟ್
  • ಪೋಖಿಲ ಲೆಕ್ತೇಪಿ
  • ಪುನ್ನಿಮೂರ್ತಿ ನಟೇಶನ್
  • ಆರ್. ಕೃಷ್ಣನ್
  • ರಘುಪತ್ ಸಿಂಗ್
  • ರಘುವೀರ್ ತುಕಾರಾಂ ಖೇಡ್ಕರ್
  • ರಾಜಸ್ತಪತಿ ಕಾಳಿಯಪ್ಪ ಗೌಂಡರ್
  • ರಾಮ ರೆಡ್ಡಿ ಮಾಮಿಡಿ
  • ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ
  • ಸಂಗ್ಯುಸಾಂಗ್ ಎಸ್ ಪೊಂಗೆನರ್
  • ಶಾಫಿ ಶೌಕ್
  • ಶ್ರೀರಂಗ್ ದೇವಬ ಲಾಡ್
  • ಶ್ಯಾಮ್ ಸುಂದರ್
  • ಸಿಮಾಂಚಲ್ ಪತ್ರೋ
  • ಸುರೇಶ ಹನಗವಾಡಿ
  • ತಗಾ ರಾಮ್ ಭಿಲ್
  • ಟೆಕಿ ಗುಬಿನ್
  • ತಿರುವಾರೂರ್ ಭಕ್ತವತ್ಸಲಂ
  • ವಿಶ್ವ ಬಂಧು
  • ಯುಮ್ನಮ್ ಜತ್ರಾ ಸಿಂಗ್

ʼಪುಸ್ತಕ ಮನೆʼ ಖ್ಯಾತಿಯ ಕನ್ನಡಿಗ ಅಂಕೇ ಗೌಡಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ

ಸಾಧಕ ಕನ್ನಡಿಗರ ವಿವರ

ಅಂಕೇ ಗೌಡ: ಮಂಡ್ಯ ಮೂಲದ ಇವರು 20 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಅಂಕೇ ಗೌಡ ಅವರ ಅಪರೂಪದ ಗ್ರಂಥಾಲಯ ʼಪುಸ್ತಕ ಮನೆʼ ಇದೆ. ಇಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ. ಇಲ್ಲಿ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ. ಯಾವ ಪುಸ್ತಕವನ್ನು ಯಾರು ಬೇಕಾದರೂ ಬಂದು ಓದಿಕೊಂಡು ಹೋಗಬಹುದು ಎನ್ನುವುದು ವಿಶೇಷ.

ಪದ್ಮ ಪ್ರಶಸ್ತಿ ಪ್ರಕಟ:



ಡಾ. ಸುರೇಶ್‌ ಹನಗವಾಡಿ: ದಾವಣಗೆರೆ ಜಿಲ್ಲೆಯ ಪ್ರಮುಖ ವೈದ್ಯ, ಪ್ರಾಧ್ಯಾಪಕ ಮತ್ತು ಸಮಾಜ ಸೇವಕ ಡಾ. ಸುರೇಶ್‌ ಹನಗವಾಡಿ. ಅವರು ತೀವ್ರ ಹಿಮೋಫಿಲಿಯಾ (ರಕ್ತಸ್ರಾವ ರೋಗ)ದಿಂದ ಬಳಲುತ್ತಿದ್ದರೂ ಇತರ ರೋಗಿಗಳಿಗೆ ಪ್ರೇರಣೆಯಾಗಿದ್ದಾರೆ. ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ ಪ್ಯಾಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದ ಮೊಟ್ಟಮೊದಲ ಹಿಮೋಫಿಲಿಯಾ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿರುವುದು ಇವರ ಹೆಗ್ಗಳಿಕೆ.

ಎಸ್‌.ಜಿ. ಸುಶೀಲಮ್ಮ: ಎಸ್.ಜಿ. ಸುಶೀಲಮ್ಮ ಕರ್ನಾಟಕದ ಪ್ರಮುಖ ಸಮಾಜ ಸೇವಕಿ ಮತ್ತು ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷೆ. ಅವರನ್ನು ʼಕರ್ನಾಟಕದ ಮದರ್ ತೆರೇಸಾʼ ಎಂದು ಕರೆಯಲಾಗುತ್ತದೆ. ಇವರು 1939 ಮೇ 24ರಂದು ಬೆಂಗಳೂರಿನಲ್ಲಿ ಜನಿಸಿದರು. ಉಚಿತ ಶಾಲೆಗಳು, ಪ್ರಾಥಮಿಕ, ಹೈಸ್ಕೂಲ್ ಸೇರಿದಂತೆ 174 ಅಂಗನವಾಡಿ ತೆರೆದಿದ್ದಾರೆ.