Dharwad News: ಆತ್ಮಹತ್ಯೆ ಬೆದರಿಕೆ; ಉಪನ್ಯಾಸಕನನ್ನು ಜಡ್ಜ್ ಎಂದು ತೋರಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು
Dharwad News: ಜೈಲಿಗೆ ಕರೆದೊಯ್ಯುತ್ತಿದ್ದಾಗ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡವೇರಿದ ಆರೋಪಿ, ನ್ಯಾಯಾಧೀಶರನ್ನು ಸ್ಥಳಕ್ಕೇ ಕರೆಸಬೇಕು, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಹೀಗಾಗಿ ಸ್ಥಳದಲ್ಲಿದ್ದ ಉಪನ್ಯಾಸಕನನ್ನೇ ಜಡ್ಜ್ ಎಂದು ಬಿಂಬಿಸಿ, ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
![ಉಪನ್ಯಾಸಕನನ್ನು ಜಡ್ಜ್ ಎಂದು ತೋರಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರು](https://cdn-vishwavani-prod.hindverse.com/media/original_images/Dharwad_news.jpg)
![Profile](https://vishwavani.news/static/img/user.png)
ಧಾರವಾಡ: ಜೈಲಿಗೆ ಕರೆದೊಯ್ಯವಾಗ ಪೋಕ್ಸೊ ಪ್ರಕರಣದ ಆರೋಪಿಯೊಬ್ಬ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ. ಆದರೆ, ಪೊಲೀಸರು ಚಾಕಚಕ್ಯತೆಯಿಂದ ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧನ ವಾರಂಟ್ ಜಾರಿಯಾಗಿದ್ದರಿಂದ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದೊಯ್ಯುತ್ತಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡವೇರಿದ ಆರೋಪಿ, ನ್ಯಾಯಾಧೀಶರನ್ನು ಸ್ಥಳಕ್ಕೇ ಕರೆಸಬೇಕು, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಆದ್ದರಿಂದ ಸ್ಥಳದಲ್ಲೇ ಇದ್ದ ಉಪನ್ಯಾಸಕನನ್ನೇ ಜಡ್ಜ್ ಎಂದು ಬಿಂಬಿಸಿದ್ದು, ಜಡ್ಜ್ ಮಾತನಾಡುತ್ತಿದ್ದಾಗ ಉಪಾಯದಿಂದ ಆರೋಪಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಧಾರವಾಡ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅಣ್ಣಿಗೇರಿ ನಿವಾಸಿಯಾಗಿರುವ ವಿಜಯ ಉಣಕಲ್ ವಿರುದ್ಧ 2021ರಲ್ಲಿ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್‌ನಿಂದ ಬಂಧನ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಪೊಲೀಸರು ಆರೋಪಿ ವಿಜಯ ಉಣಕಲ್ನನ್ನು ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೀಗಾಗಿ ಆರೋಪಿ ವಿಜಯ್ ಉಣಕಲ್ನನ್ನು ಪೊಲೀಸರು ಜೈಲಿಗೆ ಕರೆದೊಯ್ಯೊತ್ತಿದ್ದರು. ಈ ವೇಳೆ ವಿಜಯ್ ಉಣಕಲ್ ಪೊಲೀಸರಿಂದ ತಪ್ಪಿಸಿಕೊಂಡು ಕಟ್ಟಡದ ಮೇಲೇರಿದ್ದನು. ಬಳಿಕ, ಸ್ಥಳಕ್ಕೆ ನ್ಯಾಯಾಧೀಶರು ಬರಬೇಕು, ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ದೌಡಾಯಿಸಿ, ಆರೋಪಿಯನ್ನು ಯಾಮಾರಿಸಿ ಬಂಧನ ಮಾಡಿದ್ದಾರೆ.
ಆರೋಪಿಯ ಹೈಡ್ರಾಮಾ ನೋಡಲು ಸ್ಥಳಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ವಿಶ್ವನಾಥ್ ಚಿಂತಾಮಣಿ ಆಗಮಿಸಿದ್ದರು. ಈ ವೇಳೆ ಪೊಲೀಸರು, ಪ್ಲ್ಯಾನ್ಮಾಡಿ ಇವರೇ ಜಡ್ಜ್ ಎಂದು ಉಪನ್ಯಾಸಕರನ್ನು ತೋರಿಸಿ ನಂಬಿಸಿದ್ದಾರೆ. ಪೊಲೀಸರ ಪ್ಲ್ಯಾನ್ನಂತೆ ಉಪನ್ಯಾಸಕ ವಿಶ್ವನಾಥ್ ಚಿಂತಾಮಣಿ ಅವರು ಕೂಡ ನಟಿಸಿದ್ದಾರೆ. ಅದನ್ನು ನಂಬಿ, ಆರೋಪಿಯು ಉಪನ್ಯಾಸಕನ ಜತೆ ಮಾತನಾಡುತ್ತಿದ್ದಾಗ ಆತನನ್ನು ಕಟ್ಟಡದಿಂದ ಕೆಳಗೆ ಇಳಿಸಿ, ಬಂಧಿಸಲಾಗಿದೆ. ನಂತರ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಗಿದೆ.
ಈ ಸುದ್ದಿಯನ್ನೂ ಓದಿ | Kolkata Horrror: 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿ ಅರೆಸ್ಟ್!
ಆಸ್ತಿಗಾಗಿ ಅಜ್ಜನಿಗೇ 70 ಬಾರಿ ಚಾಕು ಇರಿದ ಮೊಮ್ಮಗ !
![Hyderabad Horro](https://cdn-vishwavani-prod.hindverse.com/media/images/Hyderabad_Horro.width-800.jpg)
ಹೈದರಾಬಾದ್ : 86 ವರ್ಷದ ಹೈದರಾಬಾದ್‌ನ ಕೈಗಾರಿಕೋದ್ಯಮಿ ವೆಲಮತಿ ಚಂದ್ರಶೇಖರ ಜನಾರ್ದನ ರಾವ್ ಅವರನ್ನು ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಅವರ ಮೊಮ್ಮಗನೇ 70 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ (Hyderabad Horror) ಆಘಾತಕಾರಿ ಘಟನೆ ನಡೆದಿದೆ. ಜನಾರ್ದನ ರಾವ್ ಅವರ ನಿವಾಸದಲ್ಲಿಯೇ ಅವರನ್ನು ಹತ್ಯೆ ಮಾಡಲಾಗಿದೆ. ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 29 ವರ್ಷದ ಮೊಮ್ಮಗ ಕಿಲಾರು ಕೀರ್ತಿ ತೇಜ ಎಂದು ಗುರುತಿಸಲಾಗಿದ್ದು, ವೆಲ್ಜನ್ ಗ್ರೂಪ್‌ನ ಅಧ್ಯಕ್ಷ ವೆಲಮತಿ ಚಂದ್ರಶೇಖರ ಜನಾರ್ದನ ರಾವ್ ಅವರನ್ನು ಚಾಕುವಿನಿಂದ 70 ಬಾರಿ ಇರಿದು ಅವರನ್ನು ಕೊಲೆ ಮಾಡಿದ್ದಾನೆ.
ತೇಜ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇತ್ತೀಚೆಗೆ ಹೈದರಾಬಾದ್‌ಗೆ ಮರಳಿದ್ದ. ತಮ್ಮ ತಾಯಿಯೊಂದಿಗೆ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ಆಸ್ತಿ ವಿವಾದಕ್ಕೆ ಜಗಳ ನಡೆದಿದೆ. ಈಗಾಗಲೇ ರಾವ್ ಅವರ ಆಸ್ತಿಯಲ್ಲಿ ತೇಜ್‌ಗೆ 4 ಕೋಟಿ ರೂ.ಗಳನ್ನು ನೀಡಲಾಗಿತ್ತು. ಆದರೂ ಆತ ಆಸ್ತಿ ವಿವಾದಕ್ಕೆ ಜಗಳವಾಡಿದ್ದಾನೆ. ಚಾಕವಿನಿಂದ ಇರಿಯುವಾಗ ಜಳ ತಾಯಿ ಸರೋಜಿನಿ ದೇವಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದರು. ಆದರೆ ಆಕೆಗೂ ಇರಿಯಲು ಪ್ರಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ತೇಜನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಜನಾರ್ದನ ರಾವ್ ಅವರು ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿಯಾಗಿದ್ದು, ಹಡಗು ನಿರ್ಮಾಣ, ಇಂಧನ ಮತ್ತು ಕೈಗಾರಿಕಾ ಅನ್ವಯಿಕೆಗಳು ಸೇರಿದಂತೆ ಬಹು ವಲಯಗಳಿಗೆ ಕೊಡುಗೆಗಳನ್ನು ನೀಡಿದ್ದಾರೆ.
ಕಳೆದ ತಿಂಗಳು ಮಹಿಳೆಯನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಕೊಲೆಯ ಬಳಿಕ ಆತ ತಾನೇ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ರಜೆ ಸಿಗಲಿಲ್ಲವೆಂದು ಸಹೋದ್ಯೋಗಿಗಳಿಗೆ ಚೂರಿ ಇರಿತ- ಚಾಕು ಹಿಡಿದು ರಸ್ತೆಯಲ್ಲಿ ಆರೋಪಿಯ ಅಟ್ಟಹಾಸ!
ಹತ್ಯೆಗೀಡಾದ ಮಹಿಳೆಯನ್ನು ಮೌಸುಮಿ ಗೊಗೊಯ್ ಎಂದು ಗುರುತಿಸಲಾಗಿದೆ. ಚಾಕು ಇರಿದ ಆರೋಪಿಯನ್ನು ಭೂಪೇನ್ ದಾಸ್ ಎಂದು ಗುರುತಿಸಲಾಗಿದೆ. ಲೇಟ್ ಗೇಟ್ ಪ್ರದೇಶದ ಮಹಿಳೆಯ ನಿವಾಸದ ಹೊರಗೆ ಕೊಲೆ ನಡೆದಿದ್ದು, ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.