ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರಜೆ ಸಿಗಲಿಲ್ಲವೆಂದು ಸಹೋದ್ಯೋಗಿಗಳಿಗೆ ಚೂರಿ ಇರಿತ- ಚಾಕು ಹಿಡಿದು ರಸ್ತೆಯಲ್ಲಿ ಆರೋಪಿಯ ಅಟ್ಟಹಾಸ!

ತನಗೆ ರಜೆ ಸ್ಯಾಂಕ್ಷನ್ ಆಗಲಿಲ್ಲವೆಂಬ ಕಾರಣಕ್ಕೆ ರಾಜ್ಯ ಸರಕಾರಿ ನೌಕರನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಯದ್ವಾತದ್ವಾ ಚೂರಿ ಇರಿತ ನಡೆಸಿದ ಘಟನೆಯೊಂದು ವರದಿಯಾಗಿದ್ದು, ಇದರ ಕಂಪ್ಲೀಟ್ ಡಿಟೇಲ್ಸ್ ಮತ್ತು ಒಂದು ವೈರಲ್ ವಿಡಿಯೋ ಇಲ್ಲಿದೆ...!

ರಜೆ ಸಿಗದ ಸಿಟ್ಟಿಗೆ ಸಹೋದ್ಯೋಗಿಗಳಿಗೆ ಚಾಕು ಇರಿತ! ವಿಡಿಯೊ ವೈರಲ್‌

ರಕ್ತಸಿಕ್ತ ಚೂರಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಆರೋಪಿ.

Profile Sushmitha Jain Feb 7, 2025 4:24 PM

ಕೊಲ್ಕೊತ್ತಾ: ತಾನು ಹಾಕಿದ್ದ ರಜಾ ಅರ್ಜಿ ತಿರಸ್ಕೃತಗೊಂಡು ತನಗೆ ರಜೆ ಸಿಗಲಿಲ್ಲ ಎಂಬ ಸಿಟ್ಟಿನಲ್ಲಿ ಸರಕಾರಿ ಉದ್ಯೋಗಿಯೊಬ್ಬ (Government Employee) ತನ್ನ ಸಹೋದ್ಯೋಗಿಗಳ ಮೇಲೆ ಚೂರಿಯಿಂದ ಇರಿದು ಗಾಯಗೊಳಿಸಿರುವ ವಿಲಕ್ಷಣ ಮತ್ತು ಶಾಕಿಂಗ್ ಘಟನೆಯೊಂದು ವರದಿಯಾಗಿದೆ. ಪಶ್ಚಿಮ ಬಂಗಾಳ (West Bengal) ರಾಜ್ಯ ಸರಕಾರಿ ನೌಕರನಾಗಿರುವ ಅಮಿತ್ ಕುಮಾರ್ ಸರ್ಕಾರ್ ಎಂಬಾತನೇ ಈ ರೀತಿಯಾಗಿ ವರ್ತಿಸಿದ ಉದ್ಯೊಗಿಯಾಗಿದ್ದು. ಈ ಘಟನೆಯ ಬಳಿಕ ಈತನನ್ನು ಇದೀಗ ಬಿಧಾನ್ ನಗರ ಪೊಲೀಸರು (Bidhan Nagar Police) ಬಂಧಿಸಿದ್ದಾರೆ. ತನ್ನ ಸಹೋದ್ಯೋಗಳಿಗೆ ಚೂರಿಯಿಂದ ಇರಿದ ಬಳಿಕ ಅಮಿತ್ ಸರ್ಕಾರ್, ರಕ್ತಸಿಕ್ತ ಚೂರಿಯನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಟ್ರೆಂಡಿಂಗ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ರಕ್ತಸಿಕ್ತ ಚೂರಿಯನ್ನು ಹಿಡಿದುಕೊಂಡು ರಸ್ತೆ ಮಧ್ಯದಲ್ಲಿ ರಾಜಾರೋಷವಾಗಿ ನಡೆದುಕೊಂಡು ಹೋಗುತ್ತಿರುವ ಆರೊಪಿಯನ್ನು ಕೈಯಲ್ಲಿರುವ ಚೂರಿಯನ್ನು ಕೆಳಗೆ ಹಾಕುವಂತೆ ಅಲ್ಲಿದ್ದವರೆಲ್ಲಾ ವಿನಂತಿ ಮಾಡಿಕೊಳ್ಳುತ್ತಿರುವುದು ಈ ವಿಡಿಯೊದಲ್ಲಿ ದಾಖಲಾಗಿದೆ.

ಅಮಿತ್ ಸರ್ಕಾರ್ ರಜೆಗಾಗಿ ಅರ್ಜಿ ಹಾಕಿದ್ದರು, ಆದರೆ ಅವರ ಈ ಅರ್ಜಿ ತಿರಸ್ಕೃತಗೊಂಡಿತ್ತು. ಇದರಿಂದ ಸಿಟ್ಟುಗೊಂಡ ಸರ್ಕಾರ್ ತನ್ನ ಸಹೋದ್ಯೋಗಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ವಾಗ್ಚಾದದ ಭರದಲ್ಲಿ ಆತ ತನ್ನ ಆಫೀಸಿನೊಳಗೇ ತನ್ನ ಸಹೋದ್ಯೋಗಿಗೆ ಚೂರಿಯಿಂದ ಇರಿದಿದ್ದಾನೆ. ಕೊಲ್ಕೊತ್ತಾದ (Kolkata) ನ್ಯೂ ಟೌನ್ ಪ್ರದೇಶದಲ್ಲಿರುವ (Newtown) ಕರಿಗರಿ ಭವನ್ ನಲ್ಲಿರುವ (Karigari Bhawan) ಸರಕಾರಿ ಕಚೇರಿಯಲ್ಲಿ ಈ ಘಟನೆ ಫೆ.06ರಂದು ನಡೆದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Viral News: ಬ್ಯಾಂಕ್ ಹೊಂದಿರುವ ಒಟ್ಟು ಮೊತ್ತ ಬೇಕು ಎಂದು ಚೆಕ್‌ನಲ್ಲಿ ಬರೆದ ಮಹಿಳೆ: ಮುಂದೇನಾಯ್ತು?



ಈ ದಾಳಿಯ ಸಂದರ್ಭದಲ್ಲಿ ಆಫೀಸಿನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಒಬ್ಬರನ್ನೂ ಸಹ ಸರ್ಕಾರ್ ಗಾಯಗೊಳಿಸಿದ್ದಾನೆಂದು ತಿಳಿದುಬಂದಿದೆ. ತನ್ನ ಆಫೀಸಿನೊಳಗೆ ಸಹೋದ್ಯೋಗಿ ಮತ್ತು ಸೆಕ್ಯುರಿಟಿ ಗಾರ್ಡ್ ಮೇಲೆ ದಾಳಿ ನಡೆಸಿದ ಬಳಿಕ ಅಮಿತ್ ಸರ್ಕಾರ್ ಆ ರಕ್ತ ಸಿಕ್ತ ಚೂರಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು, ಬೆನ್ನಲ್ಲಿ ಬ್ಯಾಗ್ ಹಾಕ್ಕೊಂಡು, ಇನ್ನೊಂದು ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ಜನನಿಬಿಡ ರಸ್ತೆಯಲ್ಲಿ ಸಾಗುತ್ತಿರುವುದನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದು ಇದೇ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಬಳಿಕ ಅಲ್ಲಿದ್ದ ಟ್ರಾಫಿಕ್ ಪೊಲೀಸ್ ಒಬ್ಬರು ಸರ್ಕಾರ್ ಗೆ ಚೂರಿಯನ್ನು ಕೆಳಗೆ ಹಾಕುವಂತೆ ಗದರಿಸಿ ಸೂಚನೆ ನೀಡಿದ ಬಳಿಕ ಆತ ತನ್ನ ಕೈಯಲ್ಲಿದ್ದ ಚೂರಿಯನ್ನು ಕೆಳಗೆ ಹಾಕಿದ್ದಾನೆ. ಈ ಸಂದರ್ಭದಲ್ಲಿ ಸರ್ಕಾರ್ ನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಸಹೋದ್ಯೋಗಿಗಳು ತನ್ನ ತಂದೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣ ಸಿಟ್ಟುಗೊಂಡ ನಾನು ಈ ಕೃತ್ಯವನ್ನು ಎಸಗಿದೆ ಎಂದು ಸರ್ಕಾರ್ ಪೊಲೀಸ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಆದರೆ ಘಟನೆಯ ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ. ಈತನಿಗೆ ಚೂರಿ ಎಲ್ಲಿಂದ ಸಿಕ್ಕಿತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸರ್ಕಾರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಈ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆಯೆ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.