ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಕ್ಯಾಬ್‌ ಸೇವೆಗೆ ಮುನ್ನ ಟಿಪ್ಸ್‌ ಪಡೆದರೆ ಕಠಿಣ ಕ್ರಮ: ಪ್ರಲ್ಹಾದ್‌ ಜೋಶಿ ಎಚ್ಚರಿಕೆ

Pralhad Joshi: ಕ್ಯಾಬ್‌ನವರು ಗ್ರಾಹಕರಿಗೆ ಸೇವೆ ಕಲ್ಪಿಸುವ ಮೊದಲೇ ಟಿಪ್ಸ್‌ ಪಡೆಯುವುದು ದಬ್ಬಾಳಿಕೆಯಾಗುತ್ತದೆ. ಗ್ರಾಹಕರ ಶೋಷಣೆಯಾಗುತ್ತದೆ. ಹಾಗಾಗಿ ಈ ಮುಂಗಡ ಟಿಪ್ಸ್‌ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA)ಕ್ಕೆ ಸೂಚನೆ ನೀಡಿದ್ದೆ. CCPA ತಪಾಸಣೆ ವೇಳೆ Uber ಸೇವೆಗೆ ಮುಂಗಡ ಟಿಪ್ಸ್‌ ಪಡೆಯುತ್ತಿರುವುದು ಸಾಬೀತಾದ್ದರಿಂದ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಕ್ಯಾಬ್‌ ಸೇವೆಗೆ ಮುನ್ನ ಟಿಪ್ಸ್‌ ಪಡೆದರೆ ಕಠಿಣ: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy May 21, 2025 9:53 PM

ನವದೆಹಲಿ: ತ್ವರಿತ ಸೇವೆ ಒದಗಿಸಲು ಗ್ರಾಹಕರಿಂದ ಮುಂಗಡವಾಗಿ ಟಿಪ್ಸ್‌ ಪಡೆಯುತ್ತಿರುವ ಕ್ಯಾಬ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ಎಚ್ಚರಿಸಿದ್ದಾರೆ. ಟ್ಯಾಕ್ಸಿ ಸೇವೆಗೆ ಗ್ರಾಹಕರಿಂದ ಬುಕ್‌ ಮಾಡುವಾಗಲೇ ಟಿಪ್ಸ್‌ ರೂಪದಲ್ಲಿ ಹೆಚ್ಚುವರಿ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ಪ್ರಮುಖ ಕ್ಯಾಬ್‌ ಸರ್ವೀಸ್‌ Uber ಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಟ್ಯಾಕ್ಸಿ ಸೇವೆ ಒದಗಿಸಲು Uber ನಂತಹ ಸೇವಾ ಸಂಸ್ಥೆಗಳು ಗ್ರಾಹಕರಿಂದ ಮುಂಚಿತವಾಗಿಯೇ ಒತ್ತಾಯದಿಂದ ಟಿಪ್ಸ್‌ ಪಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಟಿಪ್ಸ್‌ ಎನ್ನುವುದು ಗ್ರಾಹಕರು ಉತ್ತಮ ಸೇವೆಗೆ ಮೆಚ್ಚಿ ಕೊಡುವಂಥದ್ದು. ಇದನ್ನು ಯಾರೂ ಒತ್ತಾಯದಿಂದ ಪಡೆಯಬಾರದು ಎಂದು ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್‌; ಎಸ್‌ಬಿಐಯಲ್ಲಿದೆ ಬರೋಬ್ಬರಿ 2,964 ಹುದ್ದೆ

ಕ್ಯಾಬ್‌ನವರು ಗ್ರಾಹಕರಿಗೆ ಸೇವೆ ಕಲ್ಪಿಸುವ ಮೊದಲೇ ಟಿಪ್ಸ್‌ ಪಡೆಯುವುದು ದಬ್ಬಾಳಿಕೆಯಾಗುತ್ತದೆ. ಗ್ರಾಹಕರ ಶೋಷಣೆಯಾಗುತ್ತದೆ. ಹಾಗಾಗಿ ಈ ಮುಂಗಡ ಟಿಪ್ಸ್‌ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA)ಕ್ಕೆ ಸೂಚನೆ ನೀಡಿದ್ದೆ. CCPA ತಪಾಸಣೆ ವೇಳೆ Uber ಸೇವೆಗೆ ಮುಂಗಡ ಟಿಪ್ಸ್‌ ಪಡೆಯುತ್ತಿರುವುದು ಸಾಬೀತಾದ್ದರಿಂದ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.