ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಂದಿನಿ ಮೊಸರಿನ ಬೆಲೆ 2 ರೂ. ಇಳಿಕೆ; ಇಂದಿನಿಂದಲೇ ನೂತನ ದರ ಜಾರಿ

KMF Nandini Curd: ರಾಜ್ಯದ ಹಾಲು ಮತ್ತು ಹಾಲಿನ ಉತ್ಪನ್ನಗಳ ಗ್ರಾಹಕರಿಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ತುಸು ನೆಮ್ಮದಿಯ ಸುದ್ದಿ ನೀಡಿದೆ. ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹಾಗೂ ಅರ್ಧ ಲೀಟರ್‌ಗೆ 1 ರೂ. ಕಡಿತಗೊಳಿಸಿ ಕೆಎಂಎಫ್ ಆದೇಶ ಹೊರಡಿಸಿದ್ದು, ಇಂದಿನಿಂದ ದರ ಜಾರಿಯಾಗಲಿದೆ.

ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಹಾಲು ಮತ್ತು ಹಾಲಿನ ಉತ್ಪನ್ನಗಳ ಗ್ರಾಹಕರಿಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (KMF Nandini Curd) ತುಸು ನೆಮ್ಮದಿಯ ಸುದ್ದಿ ನೀಡಿದೆ. ನಂದಿನಿ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹಾಗೂ ಅರ್ಧ ಲೀಟರ್‌ಗೆ 1 ರೂ. ಕಡಿತಗೊಳಿಸಿ ಕೆಎಂಎಫ್ ಆದೇಶ ಹೊರಡಿಸಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ (ನವೆಂಬರ್ 29) ರಾಜ್ಯಾದ್ಯಂತ ಜಾರಿಗೆ ಬಂದಿವೆ.

ಇತ್ತೀಚೆಗಷ್ಟೇ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಏರಿಕೆ ಮಾಡಿತ್ತು. ಪ್ರತಿ ಲೀಟರ್‌ಗೆ 54 ರೂ. ನಿಂದ ಒಮ್ಮೆಲೇ 68 ರೂ ಕ್ಕೆ ಹೆಚ್ಚಿಸಲಾಗಿತ್ತು. ಈ ಭಾರಿ ಬೆಲೆ ಏರಿಕೆಗೆ ರಾಜ್ಯದಾದ್ಯಂತ ಗ್ರಾಹಕರು ಮತ್ತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಹೋಟೆಲ್ ಉದ್ಯಮಿಗಳು ಮತ್ತು ಸಾಮಾನ್ಯ ಜನರು ದರ ಇಳಿಕೆಗೆ ಒತ್ತಾಯಿಸಿದ್ದರು. ಜನಾಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು, ಮೊಸರಿನ ದರವನ್ನು ಪರಿಶೀಲಿಸಿ ಇಳಿಕೆ ಮಾಡುವಂತೆ ಕೆಎಂಎಫ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ ಕೆಎಂಎಫ್ ಆಡಳಿತ ಮಂಡಳಿ, ಮೊಸರಿನ ದರದಲ್ಲಿ ಅಲ್ಪ ಇಳಿಕೆ ಮಾಡುವ ನಿರ್ಧಾರ ಕೈಗೊಂಡಿದೆ.

ಪರಿಷ್ಕೃತ ದರದ ವಿವರ ಹೀಗಿದೆ

  • 1 ಲೀಟರ್ ಮೊಸರು: 2 ಇಳಿಕೆ, ಹಿಂದಿನ ದರ 68 ರೂ. ಇಳಿಕೆಯಾಗಿ 66 ರೂ. ಇದೆ
  • ಅರ್ಧ ಲೀಟರ್‌ ಮೊಸರು: 1 ರೂ. ಇಳಿಕೆ ಹಿಂದಿನ ದರ 34ರೂ. ಇಳಿಕೆಯಾಗಿ 33 ರೂ. ಇದೆ
  • ಸಣ್ಣ ಪ್ಯಾಕೆಟ್‌ಗಳು (200 ಗ್ರಾಂ / 100 ಗ್ರಾಂ): ಕೆಎಂಎಫ್ ಮಾರ್ಗಸೂಚಿಯಂತೆ ಇವುಗಳ ದರದಲ್ಲೂ ತಕ್ಕಮಟ್ಟಿನ ಹೊಂದಾಣಿಕೆ ಮಾಡಲಾಗಿದೆ.

Nandini curd price: ನಂದಿನಿ ಮೊಸರಿನ ದರ 2 ರೂ.ಇಳಿಕೆ; ನ.29ರಿಂದ ಪರಿಷ್ಕೃತ ದರ ಜಾರಿ

ಹಾಲಿನ ದರ ಯಥಾಸ್ಥಿತಿ

ಈ ದರ ಕಡಿತವು ಕೇವಲ ನಂದಿನಿ ಮೊಸರಿಗೆ ಮಾತ್ರ ಸೀಮಿತವಾಗಿದೆ. ನಂದಿನಿ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಅಥವಾ ಇಳಿಕೆ ಮಾಡಲಾಗಿಲ್ಲ. ಹಾಲಿನ ದರಗಳು ಈ ಹಿಂದೆ ಪರಿಷ್ಕರಿಸಿದಂತೆಯೇ ಮುಂದುವರಿಯಲಿವೆ ಎಂದು ಕೆಎಂಎಫ್ ಮೂಲಗಳು ಸ್ಪಷ್ಟಪಡಿಸಿವೆ.

Vishakha Bhat Heggar

View all posts by this author