ಬೆಂಗಳೂರು: ರಾಜ್ಯ ಸರ್ಕಾರವು ಈದ್ ಮಿಲಾದ್ (Eid Milad) ಸಾರ್ವತ್ರಿಕ ರಜೆ ದಿನಾಂಕದಲ್ಲಿ ಬದಲಾವಣೆ ಮಾಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಮಂಗಳವಾರ (ಆಗಸ್ಟ್ 25 ಕ್ಕೆ) ರಜೆ ಘೋಷಣೆ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ಬುಧವಾರ ರಜೆ ಇರಲಿದೆ. ಈ ಮೊದಲು ಸರ್ಕಾರಿ ರಜೆಯು ಆಗಸ್ಟ್ 26ಕ್ಕೆ ನಿಗದಿಯಾಗಿತ್ತು. ಆದರೆ, ಇಸ್ಲಾಮಿಕ್ ತಿಂಗಳ ಆರಂಭದ ಚಂದ್ರ ದರ್ಶನದಲ್ಲಿ ವ್ಯತ್ಯಾಸದ ಕಾರಣ ಆಗಸ್ಟ್ 25ರಂದು ದಕ್ಷಿಣ ಕನ್ನಡ, ಉಡುಪಿಯ ಎಲ್ಲ ಮಸೀದಿಗಳ ಖಾಝಿಗಳು ನಿರ್ಧರಿಸಿದ್ದರು.
ಆ ದಿನದಂದು ಜಿಲ್ಲೆಯ ಎಲ್ಲ ಮಸೀದಿ ವ್ಯಾಪ್ತಿಯಲ್ಲಿ ಮೆರವಣಿಗೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಹೀಗಾಗಿ, ರಜೆಗೆಯ ಬದಲಾವಣೆ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಸಾರ್ವತ್ರಿಕ ರಜೆಯನ್ನು ಆ.25ರಂದು ನೀಡಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಜ್ ಮತ್ತು ವಕ್ಸ್ ಹಾಗೂ ದ.ಕ. ಉಸ್ತುವಾರಿ ಸಚಿವ ಯು.ಟಿ.ಖಾದರ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.
ಸ್ಥಳೀಯ ಬೇಡಿಕೆಯ ಮೇರೆಗೆ ಇಂದೇ ಕರಾವಳಿ ಜಿಲ್ಲೆಗಳಿಗೆ ರಜೆ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಆಗಸ್ಟ್ 25 ರಂದೇ ಈದ್ ಮಿಲಾದ್ ಆಚರಿಸುವ ಕಾರಣ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಈ ಮನವಿಯನ್ನು ಪರಿಗಣಿಸಿ ಸರ್ಕಾರ ಇಂದೇ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
ಪಾಕ್ ಪರ ಹಾಡು ಬಳಸಿ ವಿಡಿಯೊ ಪೋಸ್ಟ್
ಈದ್ ಮಿಲಾದ್ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ನಿರ್ಮಿಸಿರುವ ಟಿಪ್ಪು ಸುಲ್ತಾನ್ ಕಟೌಟ್ ಸಹಿತ ಮಾಡಿರುವ ರೀಲ್ಸ್ ಗೆ ಆಕ್ಷೇಪಾರ್ಹ ಹಾಡು ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿಹಂಚಿಕೊಂಡಿದ್ದ ಆರೋಪದಲ್ಲಿನಗರಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಬುಧವಾರ ಈದ್ ಮಿಲಾದ್ ಮೆರವಣಿಗೆ ನಡೆಯಲಿದ್ದು, ಈ ಸಂಬಂಧ ಟಿಪ್ಪು ನಗರ ಬಡಾವಣೆಯಲ್ಲಿ40 ಅಡಿ ಕಟೌಟ್ ಹಾಕಲಾಗಿತ್ತು. ಆ ಕಟೌಟ್ ವಿಡಿಯೊ ಜತೆಗೆ ಮುಜಾಹಿದ್‌ಗೆ ಸಂಬಂಧಿಸಿದ ಹಾಡು ಜೋಡಣೆ ಮಾಡಲಾಗಿದೆ. ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಹೆಸರಿನ ಇನ್ ಸ್ಟಾ ಗ್ರಾಮ್ ಪೇಜ್‌ನಲ್ಲಿ ಈ ವಿಡಿಯೊ ವೈರಲ್ ಆಗಿತ್ತು.