ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Road Accident: ರಾಯಚೂರಿನಲ್ಲಿ ಕಾರು- ಬೈಕು ಡಿಕ್ಕಿ, ಅಕ್ಕ- ತಮ್ಮ ದುರ್ಮರಣ

Raichur News: ಶೇಖರಪ್ಪ ತಮ್ಮ ಅಕ್ಕ ಹಾಗೂ ಅವರ ಎರಡು ವರ್ಷದ ಮಗಳನ್ನು ಬೈಕ್​ನಲ್ಲಿ ಕೂರಿಸಿಕೊಂಡು ಕರೆಗುಡ್ಡ ಗ್ರಾಮಕ್ಕೆ ಬರುತ್ತಿರುವಾಗ ಕೊಪ್ಪಳದ ದೇಸಾಯಿ ಕ್ಯಾಂಪ್​ಗೆ ತೆರಳುತ್ತಿದ್ದ ಕಾರೊಂದು ಇವರ ಬೈಕ್​ಗೆ ಡಿಕ್ಕಿ ಹೊಡೆದಿದೆ. ಮಗಳು ಗೌತಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ

ರಾಯಚೂರು : ರಾಯಚೂರಲ್ಲಿ (Raichur News) ಭೀಕರವಾದ ಅಪಘಾತ (Road Accident) ಸಂಭವಿಸಿದೆ. ಎರಡು ಕಾರುಗಳು ಹಾಗು ಬೈಕ್ ಮಧ್ಯ ಅಪಘಾತ ಸಂಭವಿಸಿ ಅಕ್ಕ ಹಾಗು ತಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಪೊತ್ನಾಳ ಗ್ರಾಮದ ಬಳಿ ನಿನ್ನೆ ನಡೆದಿದೆ. ಮೃತರನ್ನು ಮರಿಯಮ್ಮ(28) ಶೇಖರಪ್ಪ (25) ಎಂದು ಗುರುತಿಸಲಾಗಿದೆ.

ಎರಡು ವರ್ಷದ ಮಗಳು ಗೌತಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಶೇಖರಪ್ಪ ತಮ್ಮ ಅಕ್ಕನನ್ನು ಮರಿಯಮ್ಮನ ಜಾತ್ರೆಗೆ ಕರೆದುಕೊಂಡು ಬರಲು ವಲ್ಕಂದಿನ್ನಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ​ಅಕ್ಕ ಹಾಗೂ ಅವರ ಎರಡು ವರ್ಷದ ಮಗಳನ್ನು ಬೈಕ್​ನಲ್ಲಿ ಕೂರಿಸಿಕೊಂಡು ಕರೆಗುಡ್ಡ ಗ್ರಾಮಕ್ಕೆ ಬರುತ್ತಿರುವಾಗ ಕೊಪ್ಪಳದ ದೇಸಾಯಿ ಕ್ಯಾಂಪ್​ಗೆ ತೆರಳುತ್ತಿದ್ದ ಕಾರೊಂದು ಇವರ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: KJ George: ಇಂಧನ ಸಚಿವ ಕೆಜೆ ಜಾರ್ಜ್ ವಿಶೇಷಾಧಿಕಾರಿ ಲಂಚ ಪಡೆಯುತ್ತಿದ್ದಾಗ ಬಂಧನ

ಬಳಿಕ ಇನ್ನೊಂದು ಕಾರ್ ಡಿಕ್ಕಿ ಹೊಡೆದಿದ್ದು, ಆ ಕಾರು ಪಲ್ಟಿಯಾಗಿದೆ. ಬೈಕ್ ಮೇಲಿಂದ ಸವಾರರು ಕೆಳಗೆ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾನವಿ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಅರ್ಧ ಕಟ್ಟಿದ ಕಟ್ಟಡದಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ

ಬೆಂಗಳೂರು: ಬೆಂಗಳೂರಿನ (Bengaluru) ಕೊತ್ತನೂರು ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಥಿಪಂಜರ (Skeleton found) ಪತ್ತೆಯಾಗಿದೆ. ಕೊತ್ತನೂರು ಬಳಿಯ ಸಮೃದ್ಧಿ ಅಪಾರ್ಟ್ ಮೆಂಟ್‌ನಲ್ಲಿ ಅಸ್ಥಿಪಂಜರ ಕಂಡುಬಂದಿದೆ. ಸುಮಾರು 6ರಿಂದ 8 ತಿಂಗಳ ಹಿಂದೆ ಮೃತಪಟ್ಟಿರಬಹುದಾದ ವ್ಯಕ್ತಿಯ ಅಸ್ಥಿಪಂಜರವಿದು ಎನ್ನಲಾಗಿದೆ. ನಿನ್ನೆ ಸಂಜೆ ಕಟ್ಟಡ ಕಾರ್ಮಿಕರ ಕಣ್ಣಿಗೆ ಅಸ್ಥಿಪಂಜರ ಬಿದ್ದಿದೆ.

ನಿನ್ನೆ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊತ್ತನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರವನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಿದ್ದಾರೆ. ಮೇಲ್ನೋಟಕ್ಕೆ 35ರಿಂದ 40 ವರ್ಷದ ಪುರುಷನ ಅಸ್ಥಿಪಂಜರ ಎಂದು ಶಂಕಿಸಲಾಗಿದೆ. ದೊಡ್ಡಗುಬ್ಬಿಯ ಶ್ರೀಧರ್ ಎಂಬವರಿಗೆ ಸೇರಿದ ಅಪಾರ್ಟ್‌ಮೆಂಟ್‌ನಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ವ್ಯಕ್ತಿಯ ಸಾವಿನ ಕಾರಣ ಎಫ್‌ಎಸ್‌ಎಲ್‌ ವರದಿಯ ಬಳಿಕ ಗೊತ್ತಾಗಲಿದೆ.

ಹರೀಶ್‌ ಕೇರ

View all posts by this author