ಮಂತ್ರಾಲಯದಲ್ಲಿ ಸುಬುಧೇಂದ್ರ ತೀರ್ಥರಿಂದ ರಥೋತ್ಸವಕ್ಕೆ ಚಾಲನೆ
ರಾಯಚೂರು: ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಹಿನ್ನೆಲೆ ಮಂತ್ರಾಲಯ ಮಠದ ರಾಜ ಬೀದಿಯಲ್ಲಿ ಸೋಮವಾರ ಅದ್ದೂರಿಯಾಗಿ ಮಹಾ ರಥೋತ್ಸವ ಜರುಗಿತು. ರಥೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ಪ್ರಲ್ಹಾದ ರಾಜರ ಉತ್ಸವ ಮೂರ್ತಿಗೆ ಸುಬುಧೇಂದ್ರ ತೀರ್ಥರು ಪೂಜೆ ಸಲ್ಲಿಸಿದ ಬಳಿಕ ಅರ್ಚಕರು, ವಿಧ್ವಾಂಸರು ಮತ್ತು ಮಠದ ಸಿಬ್ಬಂದಿ ಸೇರಿದಂತೆ ಸುತ್ತಲಿನ ಭಕ್ತ ಸಮೂಹ ಬಣ್ಣ ಎರಚಿ ವಸಂತೋತ್ಸವ ಆಚರಿಸಿದರು. ಬಳಿಕ ರಾಯರ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು.
ರಥೋತ್ಸವದ ವೇಳೆ ವಿವಿಧ ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಿತು. ರಥೋತ್ಸವಕ್ಕೂ ಮುನ್ನ ಭಕ್ತರಿಗೆ ಆಶೀರ್ವಚನ ನೀಡಿದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು, ರಾಯರ ಆರಾಧನೆ ಉತ್ಸವದಲ್ಲಿ ಪಾಲ್ಗೊಳ್ಳುವವರ ಕಷ್ಟಗಳನ್ನು ರಾಯರು ಕಳೆಯುತ್ತಾರೆ. ಭಾಷೆ ಪ್ರಾಂತ್ಯದ ಎಲ್ಲಾ ಮೀರಿದ ಜಾತ್ಯತೀತದ ಏಕೈಕ ಗುರುಗಳು ರಾಯರು. ನೇಪಾಳದ ಪ್ರವಾಹ ವಿಕೋಪದಲ್ಲಿ ಪ್ರಾಣ ಕಳೆದುಕೊಂಡವರಿಗೆ ದೇವರು ಸದ್ಗತಿ ಕರುಣಿಸಲಿ. ರಾಘವೇಂದ್ರ ಸ್ವಾಮಿಗಳ ಮಠವು ಪ್ರಕೃತಿ ವಿಪತ್ತು ಸಂದರ್ಭದಲ್ಲಿ ನೊಂದವರಿಗೆ ನೆರವು ನೀಡಲು ಸದಾ ಸನ್ನದ್ಧವಾಗಿದೆ.
ಇದನ್ನೂ ಓದಿ: K V Chandramouli Column: ಕಾವೇರಿ: ಕರ್ನಾಟಕದ ಹಕ್ಕು ಏನು ? ಕೇಳಿದ್ದೇನು ? ಪಡೆದಿದ್ದೇನು ?
ನೇಪಾಳ ಸಂತ್ರಸ್ತರಿಗೆ ಮಠವು ಆರ್ಥಿಕ ನೆರವು ನೀಡಲಿದೆ. ವಿಶ್ವದಲ್ಲಿ ಹಿಂದು ಧರ್ಮಕ್ಕೆ ಸಮನಾದ ಧರ್ಮವಿಲ್ಲ. ರಾಜಕೀಯ, ಸಾಮಾಜಿಕ ಶೈಕ್ಷಣಿಕವಾಗಿ ಹಿಂದು ದೇಶವಾಗಿದೆ. ಹಿಂದು ಧರ್ಮ ನಾಶಕ್ಕೆ ದುಷ್ಟ ಶಕ್ತಿಗಳ ಪ್ರಯತ್ನಿಸುತ್ತಿವೆ. ಹಾಗಾಗಿ ಹಿಂದುಗಳೆ ಒಂದಾಗಿ ದುಷ್ಟ ಶಕ್ತಿಗಳನ್ನಎದುರಿಸಬೇಕು. ಜನ ಪ್ರೀಯ ಪ್ರದಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಹೊದ್ಯೋಗಿಗಳಿಗೆ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಕರ್ನಾಟಕ ಸಿಎಂ ಡಿ.ಕೆ.ಶಿವಕುಮಾರ ಅವರನ್ನು ಅಭಿನಂದಿಸುತ್ತೇವೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಹಿಂದು ಧರ್ಮದ ಬೆನ್ನೆಲು ಬಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಠಿ
ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಹಿನ್ನೆಲೆ ಮಂತ್ರಾ ಲಯ ಮಠದಲ್ಲಿ ಜರುಗಿದ ರಥೋತ್ಸವದ ವೇಳೆ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಠಿ ಮಾಡಲಾಯಿತು. ರಥೋತ್ಸವದ ವೇಳೆ ಅತ್ಯಂತ ವಿಜೃಂಭಣೆಯಿಂದ ನಡೆದ ಚಂಡಿ ಮೇಳ, ಡೊಳ್ಳು ಕುಣಿತ, ಬ್ಯಾಂಡ್ ವಾದನ , ಭಜನಾ ಮಂಡಳಿಗಳು ಸೇರಿದಂತೆ ಇತರೆ ಕಲಾ ವಾದ್ಯಗಳು, ಕಲಾ ತಂಡಗಳ ನೃತ್ಯ ಪ್ರದರ್ಶನ ನಡುವೆ ಸಹಸ್ರಾರು ಭಕ್ತರು ರಥೋತ್ಸವ ಕಣ್ತುಂಬಿಕೊಂಡು ಪಾವನರಾದರು.
![]()
ಬರಗಾಲ ಆವರಿಸಿದ್ದು, ದೇವರ ದಯೆಯಿಂದ ಎಡೆ ಮಳೆ ಸುರಿದು ರೈತಾಪಿ ವರ್ಗದವರಿಗೆ ಸಮೃದ್ಧಿ ದೊರೆಯಲಿ. ಅವರ ಜೀವನ ಸದಾ ಸುಖ ಸಮೃದ್ಧಿಯಿಂದ ಕೂಡಿರಲೆಂದು ರಾಯರಲ್ಲಿ ಪ್ರಾರ್ಥನೆ ಸಲ್ಲಿಸುವೆ. ಮಠಕ್ಕೆ ಭಕ್ತರು ನೀಡುವ ದೇಣಿಗೆ ಹಣವನ್ನು ಮಠದ ಜೀರ್ಣೋದ್ಧಾರ, ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸಲು ಪಾರದರ್ಶಕವಾಗಿ ಬಳಕೆ ಮಾಡುತ್ತೇವೆ.
-ಸುಬುಧೇಂದ್ರ ತೀರ್ಥರು, ಮಠದ ಪೀಠಾಧಿಪತಿ