ರಾಮನಗರ, ಏ.1: ತನಗೆ ಪ್ರತಿದಿನ ತಿಂಡಿ, ಹಣ್ಣುಹಂಪಲು ನೀಡುತ್ತಿದ್ದ ವೃದ್ಧೆಯೊಬ್ಬರ ಸಾವಿಗೆ ಕೋತಿಯೊಂದು (monkey) ಮರುಗಿ, ಮೃತದೇಹದ ಮೇಲೆ ಮಲಗಿ ಶೋಕ ವ್ಯಕ್ತಪಡಿಸಿರುವ ವಿಚಿತ್ರ ಘಟನೆ ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣ (Channapatna news) ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ 80 ವರ್ಷದ ಪಾರ್ವತಮ್ಮ ಎಂಬವರ ಸಾವಿಗೆ ಕಪಿರಾಯ ಕಣ್ಣೀರು ಹಾಕಿದ್ದಾನೆ.
ನಿತ್ಯ ಮನೆ ಬಳಿ ಬರುತ್ತಿದ್ದ ಕೋತಿಯನ್ನು ಪಾರ್ವತಮ್ಮ ಅವರು ತಿಂಡಿ ಕೊಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕೋತಿ ಜೊತೆ ನಿತ್ಯ ಒಡನಾಟ ಹೊಂದಿದ್ದ ವೃದ್ಧೆ ಇಂದು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ವೃದ್ಧೆ ಸಾವಿಗೆ ಕೋತಿ ಮೂಕರೋದನ ವ್ಯಕ್ತಪಡಿಸಿದೆ.
ವೃದ್ಧೆಯ ಮೃತದೇಹದ ಮೇಲೆ ಮಲಗಿ ಕೋತಿ ಕಣ್ಣೀರು ಹಾಕಿದೆ. ಕೋತಿ ಹಾಗೂ ವೃದ್ಧೆಯ ಬಾಂಧವ್ಯ ನೋಡಿ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಜ್ಜಿ ಬದುಕಿದ್ದಾಗ ಕೋತಿ ಜೊತೆ ಆಟವಾಡ್ತಿರೋ ವಿಡಿಯೋ ಹಾಗೂ ಅಜ್ಜಿಯ ಶವದ ಮುಂದೆ ರೋದನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಗತ್ತನ್ನೇ ಅಳಿಸಿದ್ದ ಪಂಚ್ ಬಾಳಲ್ಲಿ ತಂಗಾಳಿ: ಜಪಾನ್‌ನ ವೈರಲ್ ಮರಿ ಕೋತಿಗೆ ಸಿಕ್ಕೇ ಬಿಟ್ಳು ಗರ್ಲ್‌ಫ್ರೆಂಡ್