ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ರಾಮನಗರ
Road Accident: ಕುಣಿಗಲ್‌ನಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು

ಕುಣಿಗಲ್‌ನಲ್ಲಿ ಭೀಕರ ರಸ್ತೆ ಅಪಘಾತ; ನಾಲ್ವರ ಸಾವು

Tumkur News: ತುಮಕೂರು ಜಿಲ್ಲೆಯ ಕುಣಿಗಲ್ ಬೈಪಾಸ್​ನಲ್ಲಿರುವ ಉಗಿಬಂಡಿ ರೆಸ್ಟೋರೆಂಟ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಮಾಗಡಿ ಪಟ್ಟಣದ ಸೀಬೇಗೌಡ (45), ಪತ್ನಿ ಶೋಭಾ (37) ಮಗಳು ದುಂಬಿಶ್ರಿ (21), ಮಗ ಭಾನುಕಿರಣ್ ಗೌಡ (15)ಎಂದು ಗುರುತಿಸಲಾಗಿದೆ.

Iqbal Hussain: ಮೂರು ತಿಂಗಳ ಬಳಿಕ DK ಶಿವಕುಮಾರ್‌ ಸಿಎಂ ಆಗ್ತಾರೆ; ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ

ಮೂರು ತಿಂಗಳ ಬಳಿಕ DK ಶಿವಕುಮಾರ್‌ ಸಿಎಂ ಆಗ್ತಾರೆ; ಇಕ್ಬಾಲ್ ಹುಸೇನ್

ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. ಅತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದ್ದರೆ, ಇತ್ತ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆಗೆ ಕೆಲ ಶಾಸಕರು ಪಟ್ಟು ಹಿಡಿದಿದ್ದಾರೆ. ಇದೀಗ ರಾಮನಗರ ಶಾಸಕ ಇಕ್ಬಾಲ್ ಹುಸೈನ್ ಮುಂದಿನ ಮೂರು ತಿಂಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೊಸ ಬಾಂಬ್‌ ಒಂದನ್ನು ಸಿಡಿಸಿದ್ದಾರೆ.

2025ರ ಪರಿಸರ ಮಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

‘ಸುಸ್ಥಿರ ಸಂಪನ್ಮೂಲ ನಿರ್ವಹಣಾ ಅಭಿಯಾನ’

ಹಸಿರು ಸಾರಿಗೆ ವ್ಯವಸ್ಥೆಗೆ ಪರಿವರ್ತನೆ ಹೊಂದುವುದು, ಸಂಪನ್ಮೂಲ ಪ್ರಧಾನ ವಿಧಾನವನ್ನು ಅಳವಡಿಸಿಕೊಳ್ಳುವುದು, ಪಾಲುದಾರರಲ್ಲಿ ಪರಿಸರ ಜಾಗೃತಿಯನ್ನು ಉಂಟು ಮಾಡುವುದು, ಈ ಮೂಲಕ ಸುಸ್ಥಿರ ಜೀವನ ಪಾಲಿಸುವಂತೆ ಮಾಡುವುದು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಉಂಟು ಮಾಡಲು ನಿರ್ಧಾರ

Nikhil Kumaraswamy: ರಾಮನಗರದಿಂದಲೇ ಸ್ಪರ್ಧಿಸುತ್ತೇನೆ: ನಿಖಿಲ್ ಕುಮಾರಸ್ವಾಮಿ ಘೋಷಣೆ

ರಾಮನಗರದಿಂದಲೇ ಸ್ಪರ್ಧಿಸುತ್ತೇನೆ: ನಿಖಿಲ್ ಕುಮಾರಸ್ವಾಮಿ

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಆರನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಚುನಾವಣೆಗೆ ನಿಲ್ಲುವ ಸಂದರ್ಭ ಬಂದರೆ ರಾಮನಗರದಲ್ಲಿಯೇ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ನಾನು ಜಿಲ್ಲೆಯಿಂದ ಪಲಾಯನ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Agriculture college: ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಜನಸಾಮಾನ್ಯರ ಮಕ್ಕಳಿಗಾಗಿ ಕೃಷಿ ಕಾಲೇಜು ಸ್ಥಾಪನೆ: ಡಿಸಿಎಂ ಡಿ.ಕೆ.ಶಿವಕುಮಾರ್

Agriculture college: ಬೆಂಗಳೂರು ‌ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ‌ಕಾರಣಕ್ಕೆ ಏನೆಲ್ಲಾ ಬದಲಾವಣೆಯಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಕೆಲವೊಬ್ಬರು ಇದನ್ನು ಟೀಕೆ ಮಾಡುತ್ತಿದ್ದಾರೆ. ಅವರುಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Fake Doctor: ರಾಮನಗರದಲ್ಲಿ ನಕಲಿ ವೈದ್ಯನ ಚಿಕಿತ್ಸೆಯಿಂದ ಮಗು ಬಲಿ

ರಾಮನಗರದಲ್ಲಿ ನಕಲಿ ವೈದ್ಯನ ಚಿಕಿತ್ಸೆಯಿಂದ ಮಗು ಬಲಿ

ರಾಮನಗರದಲ್ಲಿ ಸಾಕಷ್ಟು ನಕಲಿ ಕ್ಲಿನಿಕ್​ಗಳು ತಲೆ ಎತ್ತಿದ್ದು ಅವುಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಅಂಥ ಒಬ್ಬ ನಕಲಿ ಡಾಕ್ಟರ್‌ (Fake Doctor) ನೀಡಿದ ಚಿಕಿತ್ಸೆಯ ಪರಿಣಾಮ ಆರು ತಿಂಗಳ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

Moral Policing: ಬೈಕ್‌ನಲ್ಲಿ ಹೋಗುತ್ತಿದ್ದ ಹಿಂದೂ ಯುವಕ, ಮುಸ್ಲಿಂ ಯುವತಿ ಮೇಲೆ ನೈತಿಕ ಪೊಲೀಸ್‌ ಗಿರಿ

ಹಿಂದೂ ಯುವಕ, ಮುಸ್ಲಿಂ ಯುವತಿ ಮೇಲೆ ನೈತಿಕ ಪೊಲೀಸ್‌ ಗಿರಿ

Moral Policing: ರಾಮನಗರ ಹೊರವಲಯದ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ನೈತಿಕ ಪೊಲೀಸ್‌ ಗಿರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ರಾಮನಗರ ಗ್ರಾಮಾಂತರ ಪೊಲೀಸರು, ಒಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

DK Shivakumar: ಬೇರೆಯವರ ಮುಂದೆ ಮಂಡಿಯೂರುವುದು ಕನಕಪುರದವರ ರಕ್ತದಲ್ಲಿ ಇಲ್ಲ ಎಂದ ಡಿಕೆಶಿ

ಬೇರೆಯವರ ಮುಂದೆ ಮಂಡಿಯೂರುವುದು ಕನಕಪುರದವರ ರಕ್ತದಲ್ಲಿ ಇಲ್ಲ: ಡಿಕೆಶಿ

ನಾನು ಇಡಿ, ಸಿಬಿಐ ಪ್ರಕರಣವನ್ನು ಹಿಂಪಡೆಯಲು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿರುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ ಕಾರಣ ನಾನು 100 ಕೋಟಿ ರೂ. ಮಾನಹಾನಿ ಪ್ರಕರಣ ದಾಖಲಿಸಿದ್ದೆ. ಇದಕ್ಕಾಗಿ 1 ಕೋಟಿ ರೂ. ಶುಲ್ಕ ಠೇವಣಿಯನ್ನು ನ್ಯಾಯಾಲಯಕ್ಕೆ ಕಟ್ಟಿದ್ದೇನೆ. ಈ ಪ್ರಕರಣವನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಅದು ವಜಾ ಆಗಿದೆ. ಹೀಗಾಗಿ ಇಂದು ನಾನು ಸಲ್ಲಿಸಿರುವ ದಾಖಲೆಗಳ ದೃಢಪಡಿಸಬೇಕಿತ್ತು. ಹೀಗಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗಿಯಾಗಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Hemavathy Water: ಉಲ್ಬಣಗೊಂಡ ಹೇಮಾವತಿ ಕಿಚ್ಚು; ಜಿಲ್ಲೆಗಳ ನಡುವೆ ನೀರಿಗಾಗಿ ಜಗಳ, ರೈತರು- ಸ್ವಾಮೀಜಿಗಳ ಮೇಲೆ ಕೇಸ್

ಉಲ್ಬಣಗೊಂಡ ಹೇಮಾವತಿ ಕಿಚ್ಚು; ಜಿಲ್ಲೆಗಳ ನಡುವೆ ನೀರಿಗಾಗಿ ಜಗಳ

Hemavathi water dispute:‌ ತುಮಕೂರಿನ ಗುಬ್ಬಿಯ ಸಂಕಾಪುರದ ಕಾಮಗಾರಿ ಸ್ಥಳದಲ್ಲಿ ಜಿಲ್ಲಾಡಳಿತ ಹೇರಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಕಾಮಗಾರಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಮುಖಂಡ ದಿಲೀಪ್, ನಾಲ್ವರು ಸ್ವಾಮೀಜಿಗಳು ಸೇರಿದಂತೆ ಹಲವರ ಮೇಲೆ ಕೇಸ್ ಬಿದ್ದಿದೆ.

Rename Ramanagara District: ರಾಮನಗರ ಇನ್ನುಮುಂದೆ 'ಬೆಂಗಳೂರು ದಕ್ಷಿಣ ಜಿಲ್ಲೆ'; ಮರುನಾಮಕರಣಕ್ಕೆ ಸಚಿವ ಸಂಪುಟ ಒಪ್ಪಿಗೆ

ರಾಮನಗರ ಇನ್ನುಮುಂದೆ 'ಬೆಂಗಳೂರು ದಕ್ಷಿಣ ಜಿಲ್ಲೆ; ಸಂಪುಟ ಒಪ್ಪಿಗೆ

Rename Ramanagara District: ವಿಶ್ವದಲ್ಲೇ ಬೆಂಗಳೂರು ದಕ್ಷಿಣ ದೊಡ್ಡದಾಗಿ ಬೆಳೆಯುತ್ತಿದೆ. ಕಾನೂನು ಚೌಕಟ್ಟನ್ನು ಗಮನದಲ್ಲಿಟ್ಟುಕೊಂಡು ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಿದ್ದೇವೆ. ಉಳಿದಂತೆ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Magadi News: ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರ ಸಾವು, ನಾಲ್ವರ ರಕ್ಷಣೆ

ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರ ಸಾವು

Magadi News: ಮಾಗಡಿಯ ವೈಜಿ ಗುಡ್ಡ ಜಲಾಶಯ ವೀಕ್ಷಣೆಗೆಂದು 7 ಯುವತಿಯರು ತೆರಳಿದ್ದರು. ಈ ವೇಳೆ ಒಬ್ಬ ಯುವತಿ ನೀರಿಗೆ ಬಿದ್ದಿದ್ದು, ಆಕೆಯ ರಕ್ಷಣೆಗೆ ಉಳಿದ ಸ್ನೇಹಿತೆಯರು ತೆರಳಿದ್ದಾರೆ. ಕೂಡಲೇ ಸ್ಥಳೀಯ ಯುವಕ ನಾಲ್ವರು ಯುವತಿಯರನ್ನು ರಕ್ಷಿಸಿದ್ದು, ಇನ್ನುಳಿದ ಮೂವರು ನೀರುಪಾಲಾಗಿದ್ದಾರೆ.

Bidadi Girl death case: ಬಿಡದಿ ಬಾಲಕಿ ಸಾವು ಪ್ರಕರಣ; ಅತ್ಯಾಚಾರ ನಡೆದಿಲ್ಲ ಎಂದ ಎಫ್‌ಎಸ್ಎಲ್ ವರದಿ

ಬಿಡದಿ ಬಾಲಕಿ ಸಾವು ಪ್ರಕರಣ; ಅತ್ಯಾಚಾರ ನಡೆದಿಲ್ಲ ಎಂದ ಎಫ್‌ಎಸ್ಎಲ್ ವರದಿ

Bidadi Girl death case: ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ತಾಯಿ ಸೇರಿ ಕುಟುಂಬದವರು ಆರೋಪಿಸಿದ್ದರು. ಹಾಗಾಗಿ, ಬಾಲಕಿ ದೇಹದ 32 ಮಾದರಿಗಳನ್ನು ಸಂಗ್ರಹಿಸಿ ಎಫ್‌ಎಸ್ಎಲ್‌ಗೆ ಕಳುಹಿಲಾಗಿತ್ತು. ಆದರೆ, ಎಫ್‌ಎಸ್ಎಲ್‌ ವರದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ಗೊತ್ತಾಗಿದೆ ಎಂದು ರಾಮನಗರ ಎಸ್‌ಪಿ ತಿಳಿಸಿದ್ದಾರೆ.

DK Shivakumar: ನಾಳೆ ನನ್ನ ಜನ್ಮದಿನಾಚರಣೆ ಬೇಡ: ಡಿಸಿಎಂ ಡಿಕೆ ಶಿವಕುಮಾರ್‌

ನಾಳೆ ನನ್ನ ಜನ್ಮದಿನಾಚರಣೆ ಬೇಡ: ಡಿಸಿಎಂ ಡಿಕೆ ಶಿವಕುಮಾರ್‌

"ಭಯೋತ್ಪಾದನೆ ವಿರುದ್ಧ ನಮ್ಮ ದೇಶದ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಸಂದರ್ಭವಿದು. ಹೀಗಾಗಿ ಮೇ 15ರಂದು ಯಾರೂ ನನ್ನ ಜನ್ಮದಿನ ಆಚರಣೆ ಮಾಡುವುದು ಬೇಡ ಎಂದು ವಿನಂತಿ ಮಾಡುತ್ತಿದ್ದೇನೆ" ಎಂದಿದ್ದಾರೆ ಡಿಕೆ‌ ಶಿವಕುಮಾರ್ (DK Shivakumar).

Car Accident: ಚನ್ನಪಟ್ಟಣದಲ್ಲಿ ಮರಕ್ಕೆ ಕಾರು ಡಿಕ್ಕಿ; ಒಬ್ಬ ಸಾವು, ನಾಲ್ವರು ಯುವಕರ ಸ್ಥಿತಿ ಗಂಭೀರ

ಚನ್ನಪಟ್ಟಣದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಒಬ್ಬ ಯುವಕ ಸಾವು

Car Accident: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಪಾಂಡುಪುರ ಗ್ರಾಮದ ಸಮೀಪ ಅಪಘಾತ ನಡೆದಿದೆ. ಬೆಂಗಳೂರಿನಿಂದ ಕಬ್ಬಾಳು ದೇವಸ್ಥಾನಕ್ಕೆ ಐವರು ಸ್ನೇಹಿತರು ಬರುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

Road Accident: ರಾಮನಗರದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಮೂವರು ದುರ್ಮರಣ

ರಾಮನಗರದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಮೂವರು ದುರ್ಮರಣ

ಕಬ್ಬಾಳು ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿ ವಾಪಸ್ ಆಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಕಾರು ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದ ಮಧು, ದೀಪು ಮತ್ತು ಅಭಿ ಎಂಬವರು ಸ್ಥಳದಲ್ಲಿ ಸಾವನಪ್ಪಿದ್ದಾರೆ. ಚಿರು ಎಂಬಾತನ ಸ್ಥಿತಿ ಗಂಭೀರವಾಗಿದೆ.

DK Suresh Wife: ಸಂಸದ ಡಿಕೆ ಸುರೇಶ್‌ ಪತ್ನಿ ತಾನು ಎಂದು ಹೇಳಿಕೊಂಡ ಮಹಿಳೆ; ಕೇಸು

ಸಂಸದ ಡಿಕೆ ಸುರೇಶ್‌ ಪತ್ನಿ ತಾನು ಎಂದು ಹೇಳಿಕೊಂಡ ಮಹಿಳೆ; ಕೇಸು

ಶಾಲೆಯೊಂದರಲ್ಲಿ ಕೆಲಸ ಮಾಡುವ ಮಹಿಳೆ ಮೈಸೂರು ಮೂಲದವರಾಗಿದ್ದಾರೆ. ಪತಿ ಹೆಸರಿನ ಮುಂದೆ ಡಿ.ಕೆ. ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಎರಡೂ ಖಾತೆಗಳಲ್ಲಿ ಸುರೇಶ್ ಅವರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Grater Bangalore: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್‌ ಸಿಗ್ನಲ್‌

ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್‌ ಸಿಗ್ನಲ್‌

ಈ ಹಿಂದೆ ವಿಧೇಯಕವನ್ನು ರಾಜ್ಯಪಾಲರು ಅಂಕಿತ ಹಾಕದೆ ಮರಳಿ ಕಳಿಸಿ, ಕೆಲವು ಸ್ಪಷ್ಟನೆಗಳನ್ನು ಕೇಳಿದ್ದರು. ರಾಜ್ಯ ಸರ್ಕಾರ ಸ್ಪಷ್ಟನೆಗಳೊಂದಿಗೆ ಮರಳಿ ಕಳಿಸಿತ್ತು. ನಿನ್ನೆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಗೆಜೆಟ್ ಮೂಲಕ ಪ್ರಕಟಿಸಲಿದೆ.

Muthappa Rai: ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ತನಿಖೆಗೆ 5 ತಂಡ, ಬಲಗೈ ಬಂಟನ ಮೇಲೂ ಅನುಮಾನ

ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ತನಿಖೆಗೆ 5 ತಂಡ, ಬಲಗೈ ಬಂಟನ ಮೇಲೂ ಅನುಮಾನ

ಮುತ್ತಪ್ಪ ರೈ ಅವರ ₹2000 ಕೋಟಿ ಆಸ್ತಿಗೆ ಸಂಬಂಧಿಸಿದ ವಿವಾದದಿಂದ ರಿಕ್ಕಿ ರೈ ಕೊಲೆಗೆ ಯತ್ನ ನಡೆದಿರಬಹುದು ಎಂಬ ಅನುಮಾನವೂ ಇದೆ. ಮುತ್ತಪ್ಪ ರೈ ಬೆಂಗಳೂರು, ಗೋವಾ, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಕ ಬ್ಯುಸಿನೆಸ್ ಹೊಂದಿದ್ದರು. ಈಗ ಈ ಬ್ಯುಸಿನೆಸ್‌ ಅನ್ನು ರಿಕ್ಕಿ ರೈ ನಿರ್ವಹಿಸುತ್ತಿದ್ದಾರೆ.

HD Kumaraswamy: ಎಚ್‌ಡಿ ಕುಮಾರಸ್ವಾಮಿಗೆ ಮತ್ತೆ ಸಂಕಷ್ಟ, ಬಲವಂತದ ಕ್ರಮವಿಲ್ಲ ಎಂಬ ಮುಚ್ಚಳಿಕೆ ವಾಪಸ್‌ ಪಡೆದ ರಾಜ್ಯ ಸರ್ಕಾರ

ಎಚ್‌ಡಿಕೆ ವಿರುದ್ಧ ಬಲವಂತದ ಕ್ರಮ: ಮುಚ್ಚಳಿಕೆ ವಾಪಸ್‌ ಪಡೆದ ರಾಜ್ಯ ಸರ್ಕಾರ

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ 6 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದನ್ನು ಕಂದಾಯ ಇಲಾಖೆಯಿಂದ ಸರ್ವೆ ಮಾಡಿ ತೆರವುಗೊಳಿಸಿ, ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಪ್ರಶ್ನಿಸಿ ಎಚ್‌ಡಿಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಸರ್ಕಾರ, ಅವರ ವಿರುದ್ಧ ಯಾವುದೇ ಬಲವಂತದ ಕ್ರಮವಿಲ್ಲ ಎಂಬುದಾಗಿ ನ್ಯಾಯಾಲಯಕ್ಕೆ ಮುಚ್ಚಳಿಕೆ ಸಲ್ಲಿಸಿತ್ತು.

Organ Donation: ಪತಿಯ ಸಾವಿನಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪತ್ನಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಜೀವ; ಪತಿಯ ಅಂಗಾಂಗ ದಾನ ಮಾಡಿದ ಪತ್ನಿ

ಮೆದುಳಿನ ಹಿಂಭಾಗದಲ್ಲಿ ಪಾರ್ಶ್ವವಾಯು ಸಮಸ್ಯೆ ಉಂಟಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಅವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗಗಳನ್ನು ದಾನ ಮಾಡಲು ಅವರ ಪತ್ನಿ ನಿರ್ಧರಿಸಿದ್ದಾರೆ. ಈ ಮೂಲಕ ಪತಿಯ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Road Accident: ಎರಡು ಅಪಘಾತ, ಯುಗಾದಿ ಹಬ್ಬಕ್ಕೆ ತೆರಳುತ್ತಿದ್ದ ಯುವಕರು ಸೇರಿ ನಾಲ್ವರ ದುರ್ಮರಣ

ಎರಡು ಅಪಘಾತ, ಯುಗಾದಿಗೆ ತೆರಳುತ್ತಿದ್ದ ಯುವಕರು ಸೇರಿ ನಾಲ್ವರ ದುರ್ಮರಣ

ಉಡುಪಿ ಹಾಗೂ ದಾವಣಗೆರೆಯಲ್ಲಿ ಎರಡು ಪ್ರತ್ಯೇಕ ಅಪಘಾತಗಳು ನಡೆದಿವೆ. ಯುಗಾದಿ ಹಬ್ಬಕ್ಕೆ ಊರಿಗೆ ತೆರಳುತ್ತಿದ್ದ ಇಬ್ಬರು ಯುವಕರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಚನ್ನಗಿರಿ ಬಳಿ ಹಿಟ್‌ ಆಂಡ್‌ ರನ್‌ ಮಾಡಿರುವ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.

HD Kumaraswamy: ಒತ್ತುವರಿ ತೆರವಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ, ಎಚ್‌ಡಿ ಕುಮಾರಸ್ವಾಮಿಗೆ ಹಿನ್ನಡೆ

ಒತ್ತುವರಿ ತೆರವಿಗೆ ತಡೆ ನೀಡದ ಸುಪ್ರೀಂ ಕೋರ್ಟ್‌, ಎಚ್‌ಡಿಕೆಗೆ ಹಿನ್ನಡೆ

ಹೈಕೋರ್ಟ್ ಒತ್ತುವರಿ ತೆರವು ಮಾಡಲು ಸೂಚನೆ ನೀಡಿತ್ತು. ಆದರೆ ಹೆಚ್.ಡಿ. ಕುಮಾರಸ್ವಾಮಿ ಅವರು ತೆರವು ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್‌ ಕೂಡ ತೆರವಿಗೆ ತಡೆ ನೀಡಲು ನಿರಾಕರಿಸುವ ಮೂಲಕ, ಎಚ್‌ಡಿಕೆ ಅವರಿಗೆ ಹಿನ್ನಡೆಯಾಗಿದೆ.

Road Accident: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಬಳಿ ಅಪಘಾತ, ಮೂವರು ಸಾವು, ಮೂವರು ಗಂಭೀರ

ಬೆಂಗಳೂರು- ಮೈಸೂರು ಹೈವೇ ಬಳಿ ಅಪಘಾತ, ಮೂವರು ಸಾವು, ಮೂವರು ಗಂಭೀರ

ಮೃತರನ್ನು ಬೆಂಗಳೂರಿನ ಶಿವಪ್ರಕಾಶ್ (37) ಪುಟ್ಟಗೌರಮ್ಮ (72) ಮತ್ತು ಚನ್ನಪಟ್ಟಣದ ಮಂಗದಹಳ್ಳಿಯ ಶಿವರತ್ನ (50) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನಿಬ್ಬರು ನಟರಾಜು (42) ಮತ್ತು ಸುಮಾ (36) ಗಾಯಗೊಂಡಿದ್ದಾರೆ. ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

Bomb Hoax: ಬಿಡದಿ ರೈಲ್ವೆ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ

ಬಿಡದಿ ರೈಲ್ವೆ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ

ಬಾಂಬ್ ಬೆದರಿಕೆ ಕರೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಅಧಿಕಾರಿಗಳು ಹಾಗೂ ರಾಮನಗರ ಪೊಲೀಸರು ಮೆಟಲ್‌ ಡಿಟೆಕ್ಟರ್ ಮೂಲಕ ಬಿಡದಿ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಬೆಂಗಳೂರು ನಡುವಿನ ಎಲ್ಲ ರೈಲು ನಿಲ್ದಾಣಗಳಲ್ಲೂ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.