ರಾಮನಗರ: ಚನ್ನಪಟ್ಟಣದಲ್ಲಿ ತಾವು ಹುಟ್ಟಿ ಬೆಳೆದ ಮನೆ ಪ್ರವೇಶಕ್ಕೆ ನಿರಾಕರಿಸಲಾಗುತ್ತಿದೆ ಎಂಬ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಆರೋಪಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ (CP Yogeshwar) ಪ್ರತಿಕ್ರಿಯೆ ನೀಡಿದ್ದಾರೆ. ನಿಶಾಳ ತಾಯಿ ನನ್ನಿಂದ ವಿಚ್ಚೇದನ ಪಡೆದು 25 ವರ್ಷಗಳಾಗಿವೆ. ಆಕೆ ಮತ್ತು ನನ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ನನ್ನ ಮಗಳು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾಳೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಚನ್ನಪಟ್ಟಣ ಶಾಸಕ ವಿಡಿಯೊ ಹಂಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನನ್ನ ಮಗಳು ನಿಶಾ ಮತ್ತು ಆಕೆಯ ತಾಯಿ, ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಕೆಲ ಹೇಳಿಕೆಗಳನ್ನ ನೀಡಿದ್ದಾರೆ. ನನ್ನ ಹೂಟ್ಟೂರು ಚಕ್ಕರೆಯಲ್ಲಿ ಊರ ಹಬ್ಬದ ದಿನ ನಮ್ಮ ಮನೆಯಲ್ಲಿ ಯಾರೂ ಇಲ್ಲದಾಗ ಮನೆ ಬಳಿ ಬಂದು, ಮನೆಯೊಳಗೆ ನಮ್ಮನ್ನ ಬಿಡ್ತಿಲ್ಲ ಅಂತ ವಿಡಿಯೋ ಮಾಡಿದ್ದಾರೆ.
Nisha Yogeshwar: ನಾವು ಹುಟ್ಟಿ ಬೆಳೆದ ಮನೆಗೆ ನಮಗೆ ಪ್ರವೇಶವಿಲ್ಲ: ನಿಶಾ ಯೋಗೇಶ್ವರ್ ಕಣ್ಣೀರು, Video
ವೈಯಕ್ತಿಕ ಕಾರಣದಿಂದ ಈ ಬಾರಿ ಹಬ್ಬ ಮಾಡಿರಲಿಲ್ಲ. ಈ ವಿಚಾರ ನಿಶಾಳಿಗೆ ಗೊತ್ತಿದ್ದೂ ಈ ರೀತಿ ಮಾಡಿದಳೋ ಅಥವಾ ಗೊತ್ತಿಲ್ಲದೆ ಮಾಡಿದಳೋ ಗೊತ್ತಿಲ್ಲ. ಈ ವಿಚಾರ ಸಾರ್ವಜನಿಕ ವಲಯದಲ್ಲಿ ನಾನು, ಮಕ್ಕಳನ್ನು ನೋಡಿಕೊಂಡಿಲ್ಲ ಎನ್ನುವಂತೆ ಬಿಂಬಿತವಾಗಿದೆ. ಹೀಗಾಗಿ ಈ ಮೂಲಕ ಸಾರ್ವಜನಿರಲ್ಲಿ ತಿಳಿಯ ಪಡಿಸುವುದೆನೆಂದರೆ ನಿಶಾಳ ತಾಯಿ ನನ್ನಿಂದ ಕಾನೂನು ಬದ್ದವಾಗಿ ವಿಚ್ಚೇದನ ಪಡೆದು 25 ವರ್ಷಗಳಾಗಿವೆ. ಆಕೆಗೂ, ನನಗೂ ಯಾವುದೇ ಸಂಬಂಧವಿಲ್ಲ. ಇನ್ನೂ ನನ್ನ ಮಗಳಿಗೆ ನಾನಿನ್ನೂ ತಂದೆಯಾಗಿದ್ದೇನೆ. ಆದರೆ ನನ್ನ ಮಗಳು ನನ್ನ ವಿರುದ್ಧವೇ ಇಲ್ಲ ಸಲ್ಲದ ಆರೋಪಗಳನ್ನು ಮಾಡಿರೋದು ನನ್ನ ಮನಸ್ಸಿದೆ ಘಾಸಿಯುಂಟು ಮಾಡಿದೆ ಎಂದು ತಿಳಿಸಿದ್ದಾರೆ.