Reliance: ರಿಲಯನ್ಸ್ ಫೌಂಡೇಷನ್ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಫಲಿತಾಂಶ ಪ್ರಕಟ
Reliance: ರಿಲಯನ್ಸ್ ಫೌಂಡೇಷನ್ ಸ್ನಾತಕೋತ್ತರ ವಿದ್ಯಾರ್ಥಿ ವೇತನ 2024-25ರ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ. ಈ ವಿದ್ಯಾರ್ಥಿ ವೇತನವು 6 ಲಕ್ಷ ರೂಪಾಯಿ ತನಕದ ಹಣಕಾಸು ನೆರವು ಹಾಗೂ ಅದರ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದುದ್ದಕ್ಕೂ ಸಮಗ್ರ ಸಾಮರ್ಥ್ಯ ನಿರ್ಮಾಣವನ್ನು ಸಹ ಒಳಗೊಂಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.


ಮುಂಬೈ: ರಿಲಯನ್ಸ್ ಫೌಂಡೇಷನ್ (Reliance Foundation) ಸ್ನಾತಕೋತ್ತರ ವಿದ್ಯಾರ್ಥಿ ವೇತನ 2024-25ರ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ. ಈ ವಿದ್ಯಾರ್ಥಿ ವೇತನವು 6 ಲಕ್ಷ ರೂಪಾಯಿ ತನಕದ ಹಣಕಾಸು ನೆರವು ಹಾಗೂ ಅದರ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದುದ್ದಕ್ಕೂ ಸಮಗ್ರ ಸಾಮರ್ಥ್ಯ ನಿರ್ಮಾಣವನ್ನು ಸಹ ಒಳಗೊಂಡಿದೆ. ಹತ್ತು ವರ್ಷಗಳ ಕಾಲ ಐವತ್ತು ಸಾವಿರದಷ್ಟು ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಣೆ ಮಾಡಿರುವ ರಿಲಯನ್ಸ್ ಫೌಂಡೇಷನ್‌ನ ಬದ್ಧತೆಯ ಭಾಗ ಇದಾಗಿದೆ. ವಿಜ್ಞಾನ ತಂತ್ರಜ್ಞಾನದಲ್ಲಿ ಪ್ರತಿಭಾವಂತವರನ್ನು ಉತ್ತೇಜಿಸುವುದರ ಸಂಕೇತವಾಗಿ ರಾಷ್ಟ್ರೀಯ ವಿಜ್ಞಾನ ದಿನದಂದೇ ಈ ಫಲಿತಾಂಶ ಘೋಷಿಸಲಾಗಿದೆ.
ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ನೂರು ಅಸಾಧಾರಣ ವಿದ್ಯಾರ್ಥಿಗಳಿಗೆ ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನ ನೀಡುತ್ತದೆ. ಭಾರತದಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಎಂಜಿನಿಯರಿಂಗ್, ತಂತ್ರಜ್ಞಾನ, ಇಂಧನ ಹಾಗೂ ಜೀವ ವಿಜ್ಞಾನದಲ್ಲಿ ಪದವಿ ಮಾಡುತ್ತಿರಬೇಕು. ಈ ಸ್ಕಾಲರ್‌ಷಿಪ್ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ಒದಗಿಸುತ್ತದೆ. ಜತೆಗೆ ಪರಿಣತರು- ವಿಷಯತಜ್ಞರು ಮಾರ್ಗದರ್ಶನ ನೀಡುತ್ತಾರೆ. ಇದರೊಂದಿಗೆ ನೆಟ್ ವರ್ಕಿಂಗ್ ಅವಕಾಶಗಳು, ಸಂಶೋಧನೆಗೆ ಅವಕಾಶ ಹಾಗೂ ಆಯಾ ಕ್ಷೇತ್ರದಲ್ಲಿನ ವಿಷಯ ಗ್ರಹಿಕೆಗೆ ನೆರವು ದೊರಕಿಸಲಾಗುತ್ತದೆ.
ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ ಸೈನ್ಸಸ್, ಗಣಿತ ಮತ್ತು ಕಂಪ್ಯೂಟಿಂಗ್, ವಿವಿಧ ಎಂಜಿನಿಂಯರಿಂಗ್ ವಿಷಯಗಳು, ನವೀಕೃತ ಹಾಗೂ ಹೊಸ ಇಂಧನ ಮತ್ತು ಜೀವ ವಿಜ್ಞಾನ ಇವು ಅರ್ಹ ಕ್ಷೇತ್ರಗಳಾಗಿ ಎಲ್ಲವೂ ಒಳಗೊಂಡಿವೆ. ಭಾರತದ ಭವಿಷ್ಯದ ಬೆಳವಣಿಗೆಗೆ ಕೊಡುಗೆ ನೀಡಬಲ್ಲಂಥ ನಾಯಕರಾಗುವ ಸಾಮರ್ಥ್ಯ ಇರುವವರನ್ನು ಗುರುತಿಸುವುದಕ್ಕೆ ಇದರಿಂದ ನೆರವಾಗುತ್ತದೆ.
ರಿಲಯನ್ಸ್ ಫೌಂಡೇಷನ್ ವಕ್ತಾರರು ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನದಂದು ನಾವು ಜ್ಞಾನ ಮತ್ತು ನಾವೀನ್ಯತೆಯ ಸಾಮರ್ಥ್ಯವನ್ನು ಸಂಭ್ರಮಿಸುತ್ತಿದ್ದೇವೆ. ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನ ಪಡೆದವರು ಜಾಗತಿಕ ಮಟ್ಟದಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.
ಈ ಸುದ್ದಿಯನ್ನೂ ಓದಿ | PNB Recruitment 2025: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿದೆ 350 ಹುದ್ದೆ; ಪದವಿ ಪಡೆದವರು ಅರ್ಜಿ ಸಲ್ಲಿಸಿ
2024-25ರ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿ ವೇತನದ ಫಲಿತಾಂಶ ನೋಡಲು ಲಿಂಕ್: https://scholarships.reliancefoundation.org/PGScholarship_ApplicationStatus.aspx ಕ್ಲಿಕ್ ಮಾಡಿ. ನಂತರ 17 ಅಂಕಿಯ ಅರ್ಜಿ ಸಂಖ್ಯೆ ಅಥವಾ ನೋಂದಾಯಿತ ಇ-ಮೇಲ್ ಐಡಿಯನ್ನು ನಮೂದಿಸಿ. ಅದಾದ ಮೇಲೆ ಸಲ್ಲಿಕೆ (ಸಬ್ ಮಿಟ್) ಬಟನ್ ಒತ್ತಿದರೆ ಫಲಿತಾಂಶ ನೋಡಬಹುದು ಎಂದು ರಿಲಯನ್ಸ್ ಫೌಂಡೇಷನ್ ತಿಳಿಸಿದೆ.