ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜಾಮೀನು ರದ್ದುಗೊಂಡ ಬಳಿಕ ನಟ ದರ್ಶನ್ (Darshan Case) ಮತ್ತೆ ಜೈಲು ಸೇರಿದ್ದು, ಅವರ ಸಿನಿಮಾ ಕೆರಿಯರ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಸದ್ಯಕ್ಕಂತೂ ಮತ್ತೆ ಜಾಮೀನು (Bail) ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದ. ದರ್ಶನ್ ಜಾಮೀನು ಭಾಗ್ಯ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಪ್ರಕರಣದ ವಿಚಾರಣೆ ಶುರುವಾಗದೇ ಇರುವುದರಿಂದ ಹೆಚ್ಚು ದಿನಗಳ ಕಾಲ ದರ್ಶನ್ ಜೈಲಿನಲ್ಲೇ ಉಳಿಯ ಬೇಕಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾಕೆಂದರೆ ಪ್ರಕರಣದ ವಿಚಾರಣೆ ಶುರುವಾದರೆ ತೀರ್ಪಿನ ಹಂತಕ್ಕೆ ಬರಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ನ ವಕೀಲೆ ಸಹನಾ ಗೋಪಾಲ್ (Advocate Sahana) ಹೇಳಿದ್ದಾರೆ.
262 ಸಾಕ್ಷಿಗಳ ವಿಚಾರಣೆ
ಕೊಲೆ ಪ್ರಕರಣದಲ್ಲಿ 262 ಸಾಕ್ಷಿಗಳಿದ್ದು, ಎಲ್ಲರ ವಿಚಾರಣೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಇಲ್ಲಿಯವರೆಗೂ ವಿಚಾರಣ ನ್ಯಾಯಾಲಯದಲ್ಲಿ ಆರೋಪಗಳನ್ನು ಚಾರ್ಜ್ ಮಾಡಬೇಕು. ನಂತರ ಎಲ್ಲ ಸಾಕ್ಷಿಗಳಿಗೆ ಸಮನ್ಸ್ ನೀಡಿ ಪ್ರತಿಯೊಬ್ಬರನ್ನು ಕೋರ್ಟ್‌ಗೆ ಕರೆಸಿ ವಿಚಾರಣೆ ನಡೆಸಬೇಕು. ವಕೀಲರು ಅವರನ್ನು ಪ್ರಶ್ನೆ ಮಾಡಿ ಉತ್ತರ ಪಡೆಯಬೇಕು. ಹೀಗೆ 262 ಸಾಕ್ಷಿಗಳ ವಿಚಾರಣೆಗೆ ಸಾಕಷ್ಟು ಸಮಯ ಬೇಕಾಗಬಹುದು. ದರ್ಶನ್ ಪ್ರಭಾವಿ ವ್ಯಕ್ತಿ ಎನ್ನುವ ಕಾರಣಕ್ಕೆ ಕೋರ್ಟ್‌ನಲ್ಲಿ ವಿಚಾರಣಾ ಪ್ರಕ್ರಿಯೆ ಬೇಕ ಮುಗಿಯುವುದಿಲ್ಲ. ಇತರ ಎಲ್ಲ ಪ್ರಕರಣಗಳಂತೆ ಇದರ ವಿಚಾರಣೆ ಕೂಡ ನಡೆಯಲಿದೆ ಎಂದು ಸಹನಾ ಗೋಪಾಲ್ ಹೇಳಿದ್ದಾರೆ.
ಪ್ರತಿ ವಿಚಾರಣೆಗೆ ಆರೋಪಿಗಳು ಹಾಜರಾಗಬೇಕು
ಇನ್ನು ಪ್ರಕರಣದ ವಿಚಾರಣೆ ವೇಳೆ ಎಲ್ಲ ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕಾಗುತ್ತದೆ. ಒಂದು ವೇಳೆ ಕೋರ್ಟ್‌ಗೆ ಭೌತಿಕವಾಗಿ ಕರೆದೊಯ್ಯಲು ಸಾಧ್ಯವಾಗದೇ ಇದ್ದರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಆಜರಾಗಲು ನ್ಯಾಯಾಲಯ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. ಇದರಿಂದ ಎಲ್ಲಾ ಆರೋಪಿಗಳು ಜೈಲಿನಿಂದಲೇ ಕೋರ್ಟ್ ಕಲಾಪಕ್ಕೆ ಹಾಜರಾಗಬಹುದು ಇದರಿಂದ ಪೊಲೀಸ್ ಭದ್ರತೆ ಸಮಸ್ಯೆ ತದ್ದುತ್ತದೆ ಮತ್ತು ವೆಚ್ಚ ಕೂಡ ಕಡಿಮೆ ಎಂದು ಸಹನಾ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಮಹಿಳೆಯ ಮೇಲೆ ದಾಳಿಯೆಸಗಿ, ಕಾಲಿಗೆ ಕಚ್ಚಿದ ಸಾಕು ನಾಯಿ; ಸಿಸಿಟಿವಿ ವಿಡಿಯೊ ವೈರಲ್
ಜಾಮೀನು ಪಡೆಯಲು ಇದೆ ಅವಕಾಶ
ವಿಚಾರಣೆ ಆರಂಭವಾಗಿ ಒಂದಿಬ್ಬರು ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಾಗ ಆರೋಪಿಗಳ ಮೇಲಿನ ಆರೋಪ ಸಾಭೀತಾಗದೇ ಇದ್ದರೆ. ಇದರ ಆಧಾರದ ಮೇಲೆ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳು ಹೊಸದಾಗಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಈ ಮೂಲಕ ಜಾಮೀನು ಪಡೆಯಲು ಸಾಧ್ಯವಾಗಬಹುದು ಅಥವಾ ಆಗದೇ ಇರಬಹುದು ಎಂದು ವಕೀಲೆ ಸಹನಾ ವಿವರಿಸಿದ್ದಾರೆ.
ಜಾಮೀನು ಪಡೆದು ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ದರ್ಶನ್ ಈಗ ಮತ್ತೆ ಜೈಲು ಸೇರಿದ್ದಾರೆ. ಸುಪ್ರೀಂಕೋರ್ಟ್ ನಿಂದಲೇ ಜಾಮೀನು ರದ್ದು ಆದೇಶ ಹೊರಬಿದ್ದಿದ್ದು, ಮಾತ್ರವಲ್ಲ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮತ್ತೊಮ್ಮ ಹಾಗಾಗದಂತೆ ಎಚ್ಚರಿಕೆ ವಹಿಸುವಂತೆ ಕಠಿಣ ಎಚ್ಚರಿಕೆ ನೀಡಿದೆ ಎಂದು ತಿಳಿಸಿದ್ದಾರೆ.