ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Samsung: ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಿಗಾಗಿ, ಎಂಬೈಬ್ ನ ಎಐ-ಚಾಲಿತ ಕಲಿಕಾ ವೇದಿಕೆ

ಸ್ಯಾಮ್‌ಸಂಗ್: ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಿಗಾಗಿ, ಎಂಬೈಬ್(EMBIBE)ನ ಎಐ-ಚಾಲಿತ ಕಲಿಕಾ ವೇದಿಕೆಯನ್ನು ಸ್ಯಾಮ್‌ಸಂಗ್ ಎಜುಕೇಷನ್ ಹಬ್ ಅಪ್ಲಿಕೇಶನ್‌ ಜೊತೆ ಸಹಯೋಗ ವನ್ನು ಹೊಂದಿದೆ.

Samsung: ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಿಗಾಗಿ, ಎಂಬೈಬ್ ನ ಎಐ-ಚಾಲಿತ ಕಲಿಕಾ ವೇದಿಕೆ

ಸ್ಯಾಮ್‌ಸಂಗ್ ಎಐ-ಚಾಲಿತ ವೈಯಕ್ತಿಕಗೊಳಿಸಿದ ಕಲಿಕಾ ಫಲಿತಾಂಶಗಳ ವೇದಿಕೆ

Profile Ashok Nayak Jan 29, 2025 2:16 PM

* ಈ ಸಹಯೋಗದ ಉದ್ಡೇಶ: ಟಿವಿಗಳನ್ನು: ಸಿಬಿಎಸ್ಇ, ಐಸಿಎಸ್ಇ, ಐಬಿ, ಕೇಂಬ್ರಿಡ್ಜ್, ಎಲ್ಲ ರಾಜ್ಯ ಮಂಡಳಿಗಳು, ಜೆಇಇ ಮತ್ತು ಎನ್ಇಇಟಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಗೊಳಿಸಿದ ಕಲಿಕಾ ಅನುಭವಗಳನ್ನು ನೀಡುವ ಶೈಕ್ಷಣಿಕ ಸಾಧನಗಳಾಗಿ ಪರಿವರ್ತಿಸುವುದು.

* ಎಂಬೈಬ್ ಜೊತೆಗಿನ ಸಂಯೋಗದಿಂದಾಗಿ ವಿದ್ಯಾರ್ಥಿಗಳಿಗೆ, ಪ್ರಶಸ್ತಿ ವಿಜೇತ 3D ವಿವರಣೆ ಗಳು, ಮತ್ತು ಸುಳಿವುಗಳು ಮತ್ತು ಪರಿಹಾರಗಳೊಂದಿಗೆ ವೈಯಕ್ತಿಕಗೊಳಿಸಿದ ಅಭ್ಯಾಸಕ್ಕೆ ಅಗತ್ಯವಾದ ಸಮಗ್ರ ಸಂಗ್ರಹ, ಸುಲಭವಾಗಿ ದೊರೆಯುತ್ತದೆ.

* ಸ್ಯಾಮ್‌ಸಂಗ್ ಜುಕೇಷನ್ ಹಬ್ ಅಪ್ಲಿಕೇಶನ್, ಎಲ್ಲ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಲ್ಲಿ ಲಭ್ಯವಿದ್ದು ಎಲ್ಲ ವಾರ್ಷಿಕ ಚಂದಾದಾರಿಕೆಗಳ - ಪ್ರತಿ ಎಂಬೈಬ್ ಪ್ರೊಫೈಲ್‌ಗೆ ಒಂದು ಚಂದಾದಾರಿಕೆಯ - ಮೇಲೆ ವಿಶೇಷ 50% ರಿಯಾಯಿತಿ ದೊರೆಯುತ್ತದೆ.

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್ ಎಐ-ಚಾಲಿತ ವೈಯಕ್ತಿಕಗೊಳಿಸಿದ ಕಲಿಕಾ ಫಲಿತಾಂಶಗಳ ವೇದಿಕೆಯಾದ ಎಂಬೈಬ್ ನೊಂದಿಗೆ ಪಾಲು ದಾರಿಕೆ ಹೊಂದಿದ್ದು, ಇದನ್ನು ಟಿವಿಗಾಗಿ ವಿನ್ಯಾಸಗೊಳಿಸಲಾದ ಶಿಕ್ಷಣ ಅಪ್ಲಿಕೇಶನ್, ಸ್ಯಾಮ್‌ಸಂಗ್ ಜುಕೇಷನ್ ಹಬ್ ಅಪ್ಲಿಕೇಶನ್‌, ಜೊತೆ ಸಂಯೋಜಿಸುತ್ತದೆ. ಈ ಸಹಯೋಗದಿಂದಾಗಿ ಟಿವಿ ಗಳು ವಿದ್ಯಾರ್ಥಿಗಳಿಗೆ ವೈಯಕ್ತಿಕಗೊಳಿಸಿದ ಕಲಿಕಾ ಅನುಭವಗಳನ್ನು ಒದಗಿಸುವ ಪರಿಣಾಮಕಾರಿ ಶೈಕ್ಷಣಿಕ ಸಾಧನಗಳಾಗಿ ಕೆಲಸ ಮಾಡುತ್ತವೆ.

ಈ ಪಾಲುದಾರಿಕೆಯ ಮೂಲಕ ಎಂಬೈಬ್, ಸ್ಯಾಮ್‌ಸಂಗ್ ಎಜುಕೇಶನ್ ಹಬ್ ಅಪ್ಲಿಕೇಶನ್‌ನ ಭಾಗವಾಗಿ ಸಿಬಿಎಸ್ಇ, ಐಸಿಎಸ್ಇ, ಐಬಿ, ಕೇಂಬ್ರಿಡ್ಜ್, ಎಲ್ಲ ರಾಜ್ಯ ಮಂಡಳಿಗಳು ಮತ್ತು ಐಐಟಿ, ಜೆಇಇ, ಮತ್ತು ಎನ್ಇಇಟಿ ನಂತಹ ಪ್ರಮುಖ ಪ್ರವೇಶ ಪರೀಕ್ಷೆಗಳು ಸೇರಿದಂತೆ ಎಲ್ಲ ಪ್ರಮುಖ ಪಠ್ಯಕ್ರಮಗಳನ್ನು ಬೆಂಬಲಿಸುವ ವ್ಯಾಪಕ ಶೈಕ್ಷಣಿಕ ಕಲಿಕೆಗೆ ನೆರವಾಗುತ್ತದೆ. ವಿದ್ಯಾರ್ಥಿಗಳು ಅತ್ಯಂತ ಸಂಕೀರ್ಣವಾದ ವಿಷಯಗಳನ್ನು ಸಹ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮತ್ತು ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾದ ಪ್ರಶಸ್ತಿ ವಿಜೇತ, ಮನಸ್ಸಿಗೆ ನಾಟುವಂತಹ 3D ವಿವರಣಾತ್ಮಕ ವೀಡಿಯೊಗಳ ದೊಡ್ಡ ಸಂಗ್ರಹದ ಪ್ರಯೋಜನ ಪಡೆಯುತ್ತಾರೆ.

“ಸ್ಯಾಮ್‌ಸಂಗ್ ಎಜುಕೇಶನ್ ಹಬ್ ಅಪ್ಲಿಕೇಶನ್, ಮನೆಗಳಲ್ಲಿನ ಟಿವಿಗಳ ಪಾತ್ರವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ; ಟಿವು ಗಳು ಈಗ ಕೇವಲ ಮನರಂಜನಾ ಸಾಧನಗಳಲ್ಲ, ಸಮಸ್ಯಾತೀತ ವಾದ ಆನ್‌ಲೈನ್ ಕಲಿಕಾ ವೇದಿಕೆಗಳಾಗಿವೆ. ಈ ನವೀನ 'ಟಿವಿ ಗಾಗಿ ವಿನ್ಯಾಸಗೊಳಿಸಲಾದ' ಶಿಕ್ಷಣ ಅಪ್ಲಿಕೇಶನ್, ಆನ್‌ಲೈನ್ ಕಲಿಕೆಯಲ್ಲಿ ಕ್ರಾಂತಿ ಉಂಟುಮಾಡಲು ಸಜ್ಜಾಗಿದೆ. ಇದು, ಎಲ್ಲರನ್ನೂ ಆಕರ್ಷಿಸುವಂತಿದೆ ಮತ್ತು ಸುಲಭಲಭ್ಯವಾಗಿದೆ. ಶಿಕ್ಷಣಕ್ಕೆ ಯಾವುದೇ ಗಡಿಗಳಿಲ್ಲ. ಮತ್ತು ಈಗ ಜ್ಞಾನ ಎನ್ನುವುದು ಕೇವಲ ಒಂದು ಗುಂಡಿಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಇಂತಹ ಭವಿಷ್ಯವನ್ನು ಸೃಷ್ಟಿಸುವುದು ನಮ್ಮ ದೃಷ್ಟಿಯಾಗಿದೆ” ಎನ್ನುತ್ತಾರೆ, ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ವ್ಯವಹಾರದ ಹಿರಿಯ ನಿರ್ದೇಶಕ ವಿಪ್ಲೇಶ್ ಡ್ಯಾಂಗ್ ಹೇಳಿದರು .

“ಸ್ಯಾಮ್‌ಸಂಗ್ ಟಿವಿ ಜೊತೆಗಿನ ನಮ್ಮ ಪಾಲುದಾರಿಕೆ: ಅತ್ಯಂತ ವಿಶ್ವಾಸಾರ್ಹ, ಮತ್ತು ಜನಪ್ರಿಯ ಮಾಧ್ಯಮಗಳಲ್ಲಿ ಒಂದಾದ ಟಿವಿ ಮೂಲಕ ಆಗುತ್ತಿದೆ. ಇದು ಅಪ್ಪಟ, ವೈಯಕ್ತಿಕ, ಆಕರ್ಷಕ ಕಲಿಕೆಯ ಅನುಭವವನ್ನು ನೀಡುವಲ್ಲಿ ನಾವು ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಸೂಚಿಸು ತ್ತದೆ. "ನಾವು ಎರಡು ನಿರ್ಣಾಯಕ ಸವಾಲುಗಳನ್ನು ಪರಿಹರಿಸಿರುವುದರಿಂದ ಸ್ಯಾಮ್‌ಸಂಗ್, ಎಂಬೈಬ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ: ಅದ್ಭುತವಾದ ಸಂವಾದಾತ್ಮಕ, ಬಹು-ಮಾದರಿ ಪಠ್ಯಕ್ರಮವನ್ನು ರಚಿಸುವುದು ಮತ್ತು ಎಐ ಚಾಲಿತ, ಗಹನವಾದ, ವೈಯಕ್ತಿಕೀರಸಿದ ಅನುಭವದ ಮೂಲಕ ಅದನ್ನು ವಿದ್ಯಾರ್ಥಿಗಳಿಗೆ ತಲುಪಿಸುವುದು. ಸ್ಯಾಮ್‌ಸಂಗ್‌ನ ನಾವೀನ್ಯತೆ ಮತ್ತು ಎಂಬೈಬ್ ನ ಎಡ್-ಟೆಕ್ ನ ಪರಿಣತಿಯ ನಡುವಿನ ತಾದಾತ್ಮ್ಯ, ಶೈಕ್ಷಣಿಕ ಶ್ರೇಷ್ಠತೆಗೆ ಹೊಸ ಮಾನದಂಡವನ್ನು ರೂಪಿಸುವ ಒಂದು ಪ್ರಬಲ ಸಂಯೋಜನೆಯಾಗಿದ್ದು, ಎಲ್ಲರಿಗೂ ಹೊಸ ಪರಿವರ್ತನಶೀಲ ಕಲಿಕೆಯ ಅನುಭವವನ್ನು ಒದಗಿಸುತ್ತದೆ," ಎಂದು ಎಂಬೈಬ್ ನ ಸಂಸ್ಥಾಪಕಿ ಮತ್ತು ಸಿಇಒ ಅದಿತಿ ಅವಸ್ಥಿ ಹೇಳಿದರು.

ಎಂಬೈಬ್ ನ ಅತಿ ಮುಖ್ಯ ಕೊಡುಗೆ ಎಂದರೆ ಅದರ ವೈಯಕ್ತಿಕೀರರಿಸಿದ, ಎಐ-ಚಾಲಿತ, ಆಯಾ ವಿದ್ಯಾರ್ಥಿಯ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಹೊಂದಿಕೊಳ್ಳುವ ಅಭ್ಯಾಸಕ್ರಮ. ಸ್ಯಾಮ್‌ಸಂಗ್ ಶಿಕ್ಷಣ ಕೇಂದ್ರದ ಮೂಲಕ, ವಿದ್ಯಾರ್ಥಿಗಳು ಎಂಬೈಬ್ ನ ವೀಡಿಯೊ ಆಧಾರಿತ ಕಲಿಕಾ ಸಂಪ ನ್ಮೂಲಗಳನ್ನು ಮತ್ತು ಇಂಗ್ಲಿಷ್, ಹಿಂದಿ ಮತ್ತು 10 ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಅದರ ಎಐ-ಚಾಲಿತ, ತಮಗೆ ತಕ್ಕಂತೆ ಹೊಂದಿಕೊಳ್ಳುವ ಅಭ್ಯಾಸಕ್ರಮವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ, ಇದು ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ, 10+ ವರ್ಷಗಳ ಶೈಕ್ಷಣಿಕ ಡೇಟಾದಿಂದ ಬೆಂಬಲಿತ ವಾಗಿದೆ. 54,000 ಅಭ್ಯಾಸ ಪರೀಕ್ಷೆಗಳಿಂದ ಆಯ್ಕೆ ಮಾಡಿಕೊಳ್ಳಬಹುದು, ಮತ್ತು ಸುಧಾರಣೆಗೆ ಉಪಯೋಗವಾಗುವ ಒಳನೋಟಗಳನ್ನು ಒದಗಿಸುವ ವೈಯಕ್ತೀಕರಿಸಿದ ಸ್ಕೋರ್-ಸುಧಾರಣಾ ವೈಶಿಷ್ಟ್ಯಗಳನ್ನು ಬಳಸಬಹುದು. ಇದರ ಜೊತೆಗೆ, ವಿದ್ಯಾರ್ಥಿಗಳು ಟಿವಿಯಲ್ಲಿ ಖರೀದಿಸಿದ ಎಂಬೈಬ್ ವಾರ್ಷಿಕ ಚಂದಾದಾರಿಕೆಯ ಮೇಲೆ ಸ್ಯಾಮ್‌ಸಂಗ್‌ ನಿಂದ ನೇರ 50% ವಿಶೇಷ ರಿಯಾ ಯಿತಿಯನ್ನು ಪಡೆಯಬಹುದು.

ಎಂಬೈಬ್ ಪಠ್ಯಕ್ರಮ ಎಲ್ಲ 2024 ಸ್ಯಾಮ್‌ಸಂಗ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಲ್ಲಿ ಲಭ್ಯವಿರುತ್ತದೆ ಮತ್ತು ಕ್ರಮೇಣ, ಹಿಂದಿನ ಮಾದರಿಗಳಲ್ಲಿಯೂ ಲಭ್ಯವಾಗಲಿದೆ. ಸ್ಯಾಮ್‌ಸಂಗ್ ಟಿವಿ ಗಳನ್ನು ಹೊಂದಿರುವ, ಎಂಬೈಬ್ ನ ಹಾಲಿ ಚಂದಾದಾರರು, ವೇದಿಕೆಗೆ ಚಂದಾದಾರರಾಗಲು ಬಯಸುವ ಸ್ಯಾಮ್‌ಸಂಗ್ ಟಿವಿ ಬಳಕೆದಾರರು ಈ ವಿಪುಲವಾದ ಶೈಕ್ಷಣಿಕ ಪಠ್ಯಕ್ರಮಕ್ಕೆ ಸುಲಭ ವಾಗಿ ಲಾಗಿನ್ ಆಗಬಹುದು. ಈ ವರ್ಷದ ಆರಂಭದಲ್ಲಿ, ಸ್ಯಾಮ್‌ಸಂಗ್, 2023 ಮತ್ತು 2024 ಸ್ಯಾಮ್‌ಸಂಗ್ ಟಿವಿ ಗಳಲ್ಲಿ ಸ್ಯಾಮ್‌ಸಂಗ್ ಎಜುಕೇಷನ್ ಹಬ್ ಗಾಗಿ ಪ್ರಮುಖ ಎಡ್-ಟೆಕ್ ಪ್ಲಾಟ್‌ ಫಾರ್ಮ್ ಫಿಸಿಕ್ಸ್ ವಾಲಾ ಜೊತೆ ಕೈಜೋಡಿಸಿತ್ತು.

ಸ್ಯಾಮ್‌ಸಂಗ್ ನ್ಯೂಸ್-ರೂಂ ಇಂಡಿಯಾ: ಸ್ಯಾಮ್‌ಸಂಗ್: ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಿಗಾಗಿ, ಎಂಬೈಬ್(EMBIBE)ನ ಎಐ-ಚಾಲಿತ ಕಲಿಕಾ ವೇದಿಕೆಯನ್ನು ಸ್ಯಾಮ್‌ಸಂಗ್ ಎಜುಕೇಷನ್ ಹಬ್ ಅಪ್ಲಿಕೇಶನ್‌ ಜೊತೆ ಸಹಯೋಗವನ್ನು ಹೊಂದಿದೆ.