ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sarvajna Jayanti: ತಮಿಳುನಾಡಿನಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಆಚರಿಸಿದ ದಿನೇಶ್ ಗುಂಡೂರಾವ್ ಅಭಿಮಾನಿಗಳು

Sarvajna Jayanti: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಮಾನಿಗಳು, ಸಮೃದ್ಧ ಕರ್ನಾಟಕ ವೇದಿಕೆ ಹಾಗೂ ಸರ್ವಜ್ಞ ತಿರುವಳ್ಳವರ್ ಸೌಹಾರ್ದ ವೇದಿಕೆ ಹೆಸರಲ್ಲಿ ಇಂದು ತಮಿಳುನಾಡಿಗೆ ತೆರಳಿ ಸರ್ವಜ್ಞ ಅವರ ಜನ್ಮದಿನಾಚರಣೆಯನ್ನು ಆಚರಿಸಿದರು. ಈ ಕುರಿತ ವಿವರ ಇಲ್ಲಿದೆ.

ತಮಿಳುನಾಡಿನಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ

-

Profile
Siddalinga Swamy Feb 20, 2025 4:17 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆದ ಕವಿ ತಿರುವಳ್ಳವರ್ ಅವರ ಜನ್ಮ ದಿನಾಚರಣೆ ಮಾದರಿಯಲ್ಲಿಯೇ ತಮಿಳುನಾಡಿನಲ್ಲೂ ಕನ್ನಡದ ಸಂತ ಕವಿ ಸರ್ವಜ್ಞ ಅವರ ಜನ್ಮದಿನಾಚರಣೆ (Sarvajna Jayanti) ಆಚರಿಸಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಮಾನಿಗಳು ಸಮೃದ್ಧ ಕರ್ನಾಟಕ ವೇದಿಕೆ ಹಾಗೂ ಸರ್ವಜ್ಞ ತಿರುವಳ್ಳವರ್ ಸೌಹಾರ್ದ ವೇದಿಕೆ ಹೆಸರಲ್ಲಿ ಇಂದು ತಮಿಳುನಾಡಿಗೆ ತೆರಳಿ ಸರ್ವಜ್ಞ ಅವರ ಜನ್ಮದಿನಾಚರಣೆಯನ್ನು ಆಚರಿಸಿದರು. ತಮಿಳುನಾಡಿನ ಚೆನ್ನೈ ನಗರದ ಜೀವ ಪಾರ್ಕ್‌ನಲ್ಲಿರುವ ಸರ್ವಜ್ಞ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ಅರ್ಪಿಸುವ ಮೂಲಕ ಕನ್ನಡದ ಸಂತ ಕವಿ ಸರ್ವಜ್ಞ ಅವರಿಗೆ ನಮನ ಸಲ್ಲಿಸಿದರು. ತಮಿಳು ನೆಲದಲ್ಲಿ ಇಂದು ಕನ್ನಡದ ಕಂಪು ಪಸರಿಸಿತ್ತು.

1

ಸಮೃದ್ದ ಕರ್ನಾಟಕ ಹಾಗೂ ಸರ್ವಜ್ಞ ತಿರುವಳ್ಳವರ್ ಸೌಹಾರ್ದ ವೇದಿಕೆ ಇಬ್ಬರು ಶ್ರೇಷ್ಠಕವಿಗಳ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು‌ ಬರುತ್ತಿದೆ.

ಈ ಸುದ್ದಿಯನ್ನೂ ಓದಿ | 2nd PUC Exam: ಮಾರ್ಚ್‌ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ, ವಿವರ ಇಲ್ಲಿದೆ

ನಾಡಿನ ಸಮಸ್ತ ಜನತೆಗೆ, ತ್ರಿಪದಿ ಬ್ರಹ್ಮ ಎಂದು ಪ್ರಸಿದ್ಧಿ ಪಡೆದ ಸಮಾಜ ಸುಧಾರಕರಾದ ಕವಿ ಸರ್ವಜ್ಞ ಅವರ ಜನ್ಮದಿನದ ಶುಭಾಶಯಗಳನ್ನು ಕೋರಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ತ್ರಿಪದಿಗಳ ಮೂಲಕ ಸಮಾಜದ ಕೊಳಕನ್ನು ಹೊರಹಾಕಿದ, ಜಾತಿ ವ್ಯವಸ್ಥೆಯನ್ನು ವಿಡಂಬನೆ ಮಾಡಿ ಮಾನವೀಯ ಮೌಲ್ಯ ಬಿತ್ತಿದ್ದ ಮಹಾನ್ ಸಂತರನ್ನು ಗೌರವದಿಂದ ಸ್ಮರಿಸೋಣ ಎಂದು ಕರೆ ನೀಡಿದ್ದಾರೆ.‌