ಶಿವಮೊಗ್ಗ, ಫೆ.16 : ಶಿವಮೊಗ್ಗದಲ್ಲಿ (Shivamogga news) ಘೋರ ದುರಂತವೊಂದು ಸಂಭವಿಸಿದ್ದು, ಜಾನುವಾರುಗಳಿಗೆ ಮೇವು ತರಲು ಕಾಡಿಗೆ ಹೋಗಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ (tree cutting) ಕಡಿದ ರಂಬೆ ಮರ್ಮಾಂಗಕ್ಕೆ ತಗುಲಿ ವ್ಯಕ್ತಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಆನಂದಪುರ ಸಮೀಪದ ಉಳ್ಳೂರು ಬ್ರಾಹ್ಮಣ ಮಂಚಾಲೆ ಗ್ರಾಮದ ನಿವಾಸಿ ಹೇಮಂತ್ (27) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ಹೇಮಂತ್ ಅವರು ಫೆ.14ರಂದು ಬಾಳೆಗುಂಡಿಯ ಕಾಡಿನಲ್ಲಿ ಮರ ಹತ್ತಿ ಸೊಪ್ಪು ಕಡಿಯುತ್ತಿರುವಾಗ, ಆಕಸ್ಮಿಕವಾಗಿ ಮರದ ರೆಂಬೆ ಮರ್ಮಾಂಗಕ್ಕೆ ಹೊಡೆದು ಆಯತಪ್ಪಿ ಮರದಿಂದ ಕೆಳಗೆ ಬಿದ್ದಿದ್ದು, ಈ ವೇಳೆ ದಾರಿಹೋಕರಿಂದ ವಿಷಯ ತಿಳಿದು ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸುವ ವೇಳೆ ಹೇಮಂತ್ ಮೃತಪಟ್ಟಿದ್ದಾರೆ.
ಹೋಟೆಲ್ ಉದ್ಘಾಟನೆ ವೇಳೆ ಹೃದಯಾಘಾತದಿಂದ ಸಾವು
ದಾವಣಗೆರೆ: ಖಾಸಗಿ ಹೋಟೆಲ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಹೃದಯಾಘಾತಕ್ಕೊಳಗಾಗಿ (Heart Attack) ಯುವಕ ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere) ಜಿಲ್ಲೆ ಜಗಳೂರು ಪಟ್ಟಣದಲ್ಲಿ ನಡೆದಿದೆ. ಸುಭಾನ್ (25) ಮೃತ ಯುವಕ.
ಕೊನೆಗೂ ಫಲಿಸಲಿಲ್ಲ ಪ್ರಾರ್ಥನೆ; ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ಅಕ್ಷಯ್ ಸಾವು
ಖಾಸಗಿ ಹೋಟೆಲ್ ಕಾರ್ಯಕ್ರಮಕ್ಕೆ ನೆನಪಿರಲಿ ಪ್ರೇಮ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಊಟಕ್ಕೆ ಕೂತಿದ್ದಾಗ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯುವಕ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.