ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

17 ನಿಮಿಷದಲ್ಲೇ ಡ್ರೋನ್ ಜೋಡಿಸಿ ʼಇಂಟರ್‌ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್ಸ್ʼ ಸೇರಿದ ಸೊರಬದ ಬಾಲಕ ವಿರಾಟ್!

International Book of Records: ಅತ್ಯಂತ ಕಡಿಮೆ ಅವಧಿಯಲ್ಲಿ 'ಫ್ರೀಸ್ಟೈಲ್ ಎಫ್‌.ಪಿ.ವಿ (FPV) ಡ್ರೋನ್' ಅನ್ನು ಜೋಡಿಸುವ ಮೂಲಕ 'ಇಂಟರ್‌ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ವಿಶ್ವ ದಾಖಲೆ ಬರೆದ ವಿದ್ಯಾರ್ಥಿ ವಿರಾಟ್ ಎಸ್. ಅವರನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗೌರವಿಸಿ, ಸನ್ಮಾನಿಸಿದ್ದಾರೆ.

ಶಿವಮೊಗ್ಗ, ಸೆ.22: ಜಿಲ್ಲೆಯ ಸೊರಬ ತಾಲೂಕಿನ ಜಡೆ ಗ್ರಾಮದ ಶಿವಕುಮಾರ್ ಸ್ವಾಮಿ ಹಾಗೂ ಅರುಣಾ ಆರ್.ಕೆ. ದಂಪತಿಯ ಪುತ್ರ ವಿರಾಟ್ ಎಸ್. ಅತ್ಯಂತ ಕಡಿಮೆ ಅವಧಿಯಲ್ಲಿ 'ಫ್ರೀಸ್ಟೈಲ್ ಎಫ್‌.ಪಿ.ವಿ (FPV) ಡ್ರೋನ್' ಅನ್ನು ಜೋಡಿಸುವ ಮೂಲಕ 'ಇಂಟರ್‌ನ್ಯಾಷನಲ್‌ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ (International Book of Records) ತಮ್ಮ ಹೆಸರು ನೋಂದಾಯಿಸಿಕೊಂಡು ವಿಶ್ವ ದಾಖಲೆ ಬರೆದಿದ್ದಾರೆ.

International Book of Records

ಪ್ರಸ್ತುತ ಬೆಂಗಳೂರಿನ ಚಂದಾಪುರದಲ್ಲಿರುವ ʻಮೆಗಾ ಇಂಟರ್ನ್ಯಾಷನಲ್ ಸ್ಕೂಲ್‌ʼನಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿರಾಟ್ ಎಸ್. ಈ ಸಾಧನೆಯ ಮೂಲಕ ಗಮನ ಸೆಳೆದಿದ್ದಾರೆ.

ಪುರುಷರ ಬ್ಯಾಡ್ಮಿಂಟನ್‌, ವುಶು ಸ್ಫರ್ಧೆಯಲ್ಲಿ ಪದಕ ಖಚಿತಪಡಿಸಿದ ಭಾರತ

ಸಾಧಕ ವಿರಾಟ್ ಎಸ್. ಅವರು ಮಂಗಳವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವನನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಬಾಲಕನ ಸಾಧನೆ ಬಗ್ಗೆ ಮಾಹಿತಿ ಪಡೆದ ಸಚಿವರು, ವಿರಾಟ್‌ ಹಾಗೂ ಅವರ ಪೋಷಕರನ್ನು ಗೌರವಿಸಿ, ಸನ್ಮಾನಿಸಿದ್ದಾರೆ.

ಕಸ್ತೂರಿ ರಂಗನ್ ವರದಿ: ವಾಸ್ತವ ಪರಿಸ್ಥಿತಿ ಅರಿತು ಮುಂದಿನ ತೀರ್ಮಾನ ಕೈಗೊಳ್ಳಲು ಮಧು ಬಂಗಾರಪ್ಪ ಒತ್ತಾಯ

ಬೆಂಗಳೂರು: ಪಶ್ಚಿಮ ಘಟ್ಟವನ್ನು ಸಂರಕ್ಷಿಸಬೇಕು ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ತಲೆತಲಾಂತರಗಳಿಂದ ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ರೈತರು ಮತ್ತು ಜನರ ಬದುಕಿಗೆ ತೊಂದರೆಯಾಗಬಾರದು. ಪರಿಸರವನ್ನೂ ಉಳಿಸಬೇಕು, ಮಲೆನಾಡಿನ ರೈತರ ಬದುಕನ್ನೂ ಉಳಿಸಬೇಕು ಎಂದು ಶಿಕ್ಷಕ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ನಡೆದ ಚರ್ಚೆಯಲ್ಲಿ ಮಲೆನಾಡಿನ ರೈತರ ಪರವಾಗಿ ತಮ್ಮ ನಿಲುವನ್ನು ಮಂಡಿಸಿದರು.

ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಬರುವ ಪ್ರತಿಯೊಂದು ಹಳ್ಳಿಯಲ್ಲೂ ಸ್ಥಳೀಯ ರೈತರು, ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ತಜ್ಞರೊಂದಿಗೆ ಚರ್ಚಿಸಿ, ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅರಿತು ಮುಂದಿನ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನಮ್ಮ ಮಲೆನಾಡಿನ ರೈತರ ಬದುಕಿನ ಹಿಂದೆ ದೊಡ್ಡ ಹೋರಾಟ ಮತ್ತು ಪರಿಶ್ರಮವಿದೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಭೂಮಿ ನೀಡಿದರು. ನಮ್ಮ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಬಗರ್ ಹುಕುಂ ಹಕ್ಕುಪತ್ರ ಹಾಗೂ ಉಚಿತ ಪಂಪ್‌ಸೆಟ್‌ಗಳಂತಹ ಯೋಜನೆಗಳ ಮೂಲಕ ರೈತರ ಬದುಕಿಗೆ ಹೊಸ ಶಕ್ತಿ ನೀಡಿದರು. ಇಂದು ಶಿವಮೊಗ್ಗದಲ್ಲಿ ಅಡಕೆ ಕೃಷಿ ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದರ ಹಿಂದೆ ಸಾವಿರಾರು ರೈತರ ಪರಿಶ್ರಮವಿದೆ. ಅವರಿಗೆ ಬದುಕು ಕಟ್ಟಿಕೊಟ್ಟಿದ್ದು ನಾವೇ. ಈಗ ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಅವರ ಬದುಕನ್ನೇ ಕಿತ್ತುಕೊಳ್ಳುವ ಪರಿಸ್ಥಿತಿ ಬರಬಾರದು.

ನನ್ನ ಕ್ಷೇತ್ರ ಸೊರಬ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯಲ್ಲಿ ಇಲ್ಲ. ಆದರೂ ನಾನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ. ಶಿವಮೊಗ್ಗ ಜಿಲ್ಲೆಯ ಜನ ನನ್ನ ಜನ. ಅವರಿಗೆ ತೊಂದರೆಯಾದಾಗ ನಾನು ಅವರ ಜೊತೆ ನಿಲ್ಲುವುದು ನನ್ನ ಜವಾಬ್ದಾರಿ. ಅದಕ್ಕಾಗಿಯೇ ಮಲೆನಾಡಿನ ರೈತರ ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ.

ಮಲೆನಾಡಿನ ಜನರು ಪಶ್ಚಿಮ ಘಟ್ಟದ ಪರಿಸರದ ಜೊತೆ ಬೆಸೆದುಕೊಂಡು ಬದುಕಿದ್ದಾರೆ. ಅವರನ್ನು ಪರಿಸರದ ವಿರೋಧಿಗಳಂತೆ ನೋಡುವುದು ಸರಿಯಲ್ಲ. ರೈತರ ಬದುಕು ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮನ್ವಯಗೊಳಿಸುವ ಪರಿಹಾರವೇ ನಮ್ಮ ಗುರಿ ಎಂದು ತಿಳಿಸಿದರು.