ಶಿವಮೊಗ್ಗ: ನಗರದ ಹೊರವಲಯದ ತ್ಯಾವರೆಕೊಪ್ಪದಲ್ಲಿನ ಹುಲಿ ಹಾಗೂ ಸಿಂಹಧಾಮದ ಪ್ರಮುಖ ಆಕರ್ಷಣೆಯಾಗಿದ್ದ 17 ವರ್ಷದ ಹೆಣ್ಣು ಹುಲಿ ದಶಮಿ (Tigress Dashami) ವಯೋಸಹಜ ಕಾಯಿಲೆಯಿಂದ ಮೃಗಾಲಯದಲ್ಲಿ ಭಾನುವಾರ ಮೃತಪಟ್ಟಿದೆ.
ವೃದ್ಧಾಪ್ಯದ ಕಾರಣಕ್ಕೆ ಆರೋಗ್ಯ ಸಮಸ್ಯೆ ಹೊಂದಿದ್ದ ದಶಮಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿತ್ತು. ಇದಕ್ಕೆ ಕಳೆದ 10 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆಗೆ ಸ್ಪಂದಿಸದೇ ದಶಮಿ ಹುಲಿ ಸಾವನ್ನಪ್ಪಿದೆ. ದಶಮಿ, ಶಿವಮೊಗ್ಗ ಮೃಗಾಲಯದಲ್ಲೇ ಜನಿಸಿತ್ತು. ಕಳೆದ 17 ವರ್ಷದಿಂದ ಮೃಗಾಲಯದ ಭಾಗವಾಗಿದ್ದ ದಶಮಿ ಸಾವನ್ನಪ್ಪಿರುವುದು ಪ್ರವಾಸಿಗರಲ್ಲೂ ನೋವುಂಟು ಮಾಡಿದೆ.
ಸೋಮವಾರ ಪಶು ವೈದ್ಯಕೀಯ ಕಾಲೇಜಿನ ವೈದ್ಯರಿಂದ ದಶಮಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮೃಗಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರಾಕ್ಷರ್ ಮಾಹಿತಿ ನೀಡಿದ್ದಾರೆ.