ಬೆಂಗಳೂರು, ಆ.8: ಸಂಪುಟ ವಿಸ್ತರಣೆ ಸಂಕಟ ನಿಯಂತ್ರಣಕ್ಕೆ ಬಂತು ಅಂದುಕೊಂಡಿದ್ದಾಗಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಖಾತೆ ಹಂಚಿಕೆ ತಲೆಬೇನೆ ಜೋರಾಗಿದೆ. ಯಾವ ಖಾತೆ ಯಾರಿಗೆ ಎನ್ನುವ ಕುತೂಹಲಕ್ಕೆ ಶುಕ್ರವಾದರೂ ತೆರೆಬೀಳಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈಗ ಮತ್ತೆ ಗೊಂದ ಲಕ್ಕೆ ಪರಿಹಾರ ಕಂಡುಕೊಳ್ಳಲು ಶಿವಕುಮಾರ್ ಮತ್ತೊಮ್ಮೆ ದೆಹಲಿಯತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಲೇಔಟ್ ಕೃಷ್ಣಪ್ಪ ಸಚಿವಸ್ಥಾನಕ್ಕಾಗಿ ಪಟ್ಟು ಹಿಡಿದುಕುಳಿತ್ತಿದ್ದಾರೆ. ಅವರಿಗಾಗಿ ಸ್ಥಾನ ಬಿಟ್ಟುಕೊಡಲು ತಾನು ಸಿದ್ಧ ಎಂದು ಮೊದಲ ಬಾರಿಗೆ ಸಚಿವರಾಗಿರುವ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಮಹಿಳೆಯರಿಗೆ ಸ್ಥಾನ ಕೊಡ ಲೇಬೇಕೆಂದರೆ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರಿಂದ ರಾಜೀನಾಮೆ ಕೊಡಿಸಿ, ಪುತ್ರಿ ರೂಪಕಲಾ ಶಶಿಧರಗೆ ಪಟ್ಟ ಕೊಡಲಾ ಗುವುದು ಎಂಬ ಸುದ್ದಿಗಳೂ ಹಬ್ಬಿವೆ. ಆದರೆ ಇದನ್ನು ಮುನಿಯಪ್ಪ ನಿರಾಕರಿಸಿದ್ದಾರೆ.
ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳುವ ಮಾತುಗಳು ರಾಜಕೀಯ ವಿಷಯದಲ್ಲಿ ಕೇಳಿಬರುತ್ತಿವೆಯಾದರೂ, ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಪಕ್ಷದ ಹೈಕಮಾಂಡ್ ನಾಯಕರ ಲಭ್ಯತೆ ನೋಡಿಕೊಂಡು ಶನಿವಾರ ದೆಹಲಿಗೆ ತೆರಳಲಿರುವ ಶಿವಕುಮಾರ್, ಖಾತೆ ಹಂಚಿಕೆ ಸಂಬಂಧ ಸ್ಪಷ್ಟನೆ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ದೆಹಲಿ ಪ್ರವಾಸ ಕೇವಲ ಖಾತೆ ಹಂಚಿಕೆ ಯಷ್ಟೇ ಅಲ್ಲದೇ, ಪಕ್ಷದ ಹಿರಿಯ ಶಾಸಕರು ಅಸಮಾಧಾನಗೊಂಡಿರುವ ಬಗ್ಗೆಯೂ ದೆಹಲಿ ನಾಯಕರಿಗೆ ಮಾಹಿತಿ ನೀಡಿ ನಿಭಾಯಿಸುವ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.
ಇಲಾಖೆ ಅರಿಯಲು ಸಿಗೋದೇ 3 ದಿನ
ಸಂಪುಟ ವಿಸ್ತರಣೆಯಾಗಿಲ್ಲ ಎನ್ನುವ ಕಾರಣಕ್ಕೆ ಆ.೬ಕ್ಕೆ ನಿಗದಿಯಾಗಿದ್ದ ಮಳೆಗಾಲದ ಅಧಿವೇಶನವನ್ನು ಆ.13ಕ್ಕೆ ನಡೆಸಲು ತೀರ್ಮಾನಿಸಲಾಗಿದೆ. ಆದರೀಗ, ಸಚಿವರ ಪ್ರಮಾಣವಚನ ಬೋಧನೆ ನೆರವೇರಿದ್ದರೂ, ಖಾತೆ ಹಂಚಿಕೆಯಾಗದಿ ರುವುದು ಗೊಂದಲಕ್ಕೆ ಕಾರಣವಾಗಿದೆ. ಒಂದು ವೇಳೆ ಶನಿವಾರವೇ ಖಾತೆ ಹಂಚಿಕೆಯಾದರೂ, ಎರಡನೇ ಶನಿವಾರ ಹಾಗೂ ಭಾನುವಾರವಾಗಿ ರುವುದರಿಂದ ಬಹುತೇಕ ಅಧಿಕಾರಿಗಳು ಸಚಿವರ ಕೈಗೆ ಸೋಮವಾರವೇ ಸಿಗುವುದು. ಆ.10ಕ್ಕೆ ಇಲಾಖಾ ಮಾಹಿತಿ ಪಡೆದುಕೊಂಡರೂ, ಆ.13 ಕ್ಕೆ ಮಳೆಗಾಲದ ಅಧಿವೇಶನ ಆರಂಭವಾಗುವುದ ರಿಂದ ಇದನ್ನು ಯಾವ ರೀತಿ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಅನೇಕರಲ್ಲಿದೆ.
ಹೊರಟ್ಟಿ ರಾಜೀನಾಮೆ ಪತ್ರಕ್ಕೆ ಬಲವಂತದ ಸಹಿ
13ಕ್ಕೆ ಸಂತಾಪ ಸೂಚನೆ ಮಂಡಿಸಿ ಸದನ ಮುಂದೂಡಿ ದರೂ, 14ಕ್ಕೆ ನೂತನ ವಿಧಾನಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿಧಾನಪರಿಷತ್‌ನ ಸಭಾಪತಿ, ಉಪಸಭಾ-ತಿಗಳ ಚುನಾವಣಾ ಪ್ರಕ್ರಿಯೆ ಇರುವುದರಿಂದ ಸದನ ನಡೆಯುವುದಿಲ್ಲ. ಆ,15, 16ರಿಂದಲೇ ಪೂರ್ಣಪ್ರಮಾಣದಲ್ಲಿ ಆರಂಭವಾಗುತ್ತದೆ. ಆದ್ದರಿಂದ ಆ ವೇಳೆಗೆ ಎಲ್ಲ ಗೊಂದಲಗಳಿಗೂ ಉತ್ತರ ಸಿಗಲಿದೆ ಎನ್ನುವ ವಿಶ್ವಾಸದಲ್ಲಿ ಸಚಿವರಿದ್ದಾರೆ.
ಕೆಲ ಸಚಿವರ ರಾಜೀನಾಮೆ?
ಸಚಿವ ಸಂಪುಟ ವಿಸ್ತರಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಭಾರಿ ಅಸಮಾಧಾನ ಭುಗಿಲೆದ್ದಿದೆ. ರಾಜೀನಾಮೆ ನೀಡಿದರೆ ಪಡೆಯುವ ಎನ್ನುವ ಮಾತನ್ನು ಡಿ.ಕೆ.ಶಿವಕುಮಾರ್ ಹೇಳಿದ್ದರೂ ಭವಿಷ್ಯದಲ್ಲಿ ಪಕ್ಷಕ್ಕೆ ಇದು ಹೊಡೆತ ಬೀಳುವ ಆತಂಕವಿರುವುದರಿಂದ, ಒಂದಿಬ್ಬರು ಸಚಿವರಿಂದ ರಾಜೀನಾಮೆ ಪಡೆದು ಬೇರೆಯವರಿಗೆ ಅವಕಾಶ ನೀಡಿದರೆ ಹೇಗೆ ಎನ್ನುವ ಆಲೋಚನೆ ನಾಯಕರಲ್ಲಿದೆ ಎಂದು ಹೇಳಲಾಗುತ್ತಿದೆ. ಮಹಿಳೆಯರಿಗೆ ಅವಕಾಶ ನೀಡಿಲ್ಲ ಎನ್ನುವ ಆಕ್ಷೇಪವಿರುವುದರಿಂದ ಹಿರಿಯ ಸಚಿವ ಕೆ.ಎಚ್. ಮುನಿಯಪ್ಪ ಅವರಿಂದ ರಾಜೀನಾಮೆ ಪಡೆದು, ಅವರ ಪುತ್ರಿ ರೂಪಾಕಲಾ ಶಶಿಧರ ಅವರನ್ನು ಸಚಿವೆ ಮಾಡುವ ಚಿಂತನೆಗಳು ನಡೆದಿವೆಯಾದರೂ, ಇದು ಊಹಾಪೋಹ ಎಂದಿದ್ದಾರೆ ಸಚಿವ ಮುನಿಯಪ್ಪ. ಇದರೊಂದಿಗೆ ದಲಿತ ಕೋಟಾದಲ್ಲಿಯೂ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ಮಹಿಳಾ ಹಾಗೂ ಕೋಲಾರ ಜಿ ಕೋಟದಲ್ಲಿ ಒಬ್ಬರಿಗೆ ಅವಕಾಶ ನೀಡಿದಂತಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಪಕ್ಷದ ಹೈಕಮಾಂಡ್‌ಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಮುನಿಯಪ್ಪನವರ ಕಚೇರಿ, ದಲಿತ ಎಡ ಸಮುದಾಯದ ಹಿರಿಯ ಹಾಗೂ ಮುಂಚೂಣಿ ನಾಯಕರಾದ ಕೆ.ಎಚ್. ಮುನಿಯಪ್ಪ, ಕಳೆದ 50 ವರ್ಷಗಳ ಸುದೀರ್ಘ ಕಾಲದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿzರೆ. ನಾಯಕರಾಗಿ ಪಕ್ಷವನ್ನು ಬಲವರ್ಧನೆಗೊಳಿಸುತ್ತಾ ಬಂದಿzರೆ. ರೂಪಕಲಾ ಶಶಿಧರ್‌ರವರಿಗೆ ಸಚಿವ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದೆ.
ರಾಜೀನಾಮೆಗೆ ಸಿದ್ಧವೆಂದ ಬಾಲಕೃಷ್ಣ
ಒಬ್ಬರನ್ನು ಸಮಾಧಾನ ಪಡಿಸಲು ಮತ್ತೊಬ್ಬರು ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಸಚಿವ ಎಚ್.ಸಿ.ಬಾಲಕೃಷ್ಣ ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಮೊದಲ ಬಾರಿ ಸಚಿವ ಸ್ಥಾನ ಸಿಕ್ಕಿದ್ದರೂ ರಾಜೀನಾಮೆ ಬಗ್ಗೆ ಮಾತಾಡಿzರೆ. ಪಕ್ಷ ಹೇಳಿದರೆ ತ್ಯಾಗಕ್ಕೆ ಸಿದ್ಧವಿದ್ದೇನೆ ಎಂದು ನೂತನ ಸಚಿವ ಬಾಲಕೃಷ್ಣ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅಸಮಾಧಾನಿತರು ಸಚಿವ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪಿಲ್ಲ ಎಂದೂ ಹೇಳಿದ್ದಾರೆ. ಅಸಮಾಧಾನಿತರ ಬಗ್ಗೆ ಮಾತನಾಡಿದ ಬಾಲಕೃಷ್ಣ ಅವರು, ಕೆಲವರನ್ನು ಸಮಾಧಾನಪಡಿಸಲಾಗಿದೆ. ಇನ್ನೂ ಕೆಲವರೊಂದಿಗೆ ಸಂಧಾನ ನಡೆಯುತ್ತಿದೆ. ಕೃಷ್ಣಪ್ಪ ಅವರು ಒಕ್ಕಲಿಗರು. ಅವರನ್ನು ಸಂಪುಟದೊಳಗೆ ಸೇರಿಸಲು ನಾನು ರಾಜೀನಾಮೆಗೂ ಸಿದ್ಧ ಎಂದು ಹೇಳಿದ್ದಾರೆ.