ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹಾವು ಕಡಿತದಿಂದ ಸಾವು: ಕರ್ನಾಟಕದಲ್ಲಿಯೇ ಅತ್ಯಧಿಕ! 2025ರಲ್ಲಿ ದುಪ್ಪಟ್ಟು

ಕರ್ನಾಟಕದಲ್ಲಿ 2023 ರಲ್ಲಿ 183ಗಳಿದ್ದ ಹಾವು ಕಡಿತ ಪ್ರಕರಣಗಳು 2024ರಲ್ಲಿ 370ಕ್ಕೆ, 2025ರಲ್ಲಿ 431ಕ್ಕೆ ಏರುವುದರೊಂದಿಗೆ ಎರಡು ವರ್ಷಗಳಲ್ಲಿ ದುಪ್ಪಟ್ಟು ಹೆಚ್ಚಾಗಿದೆ. ಹಳ್ಳಿಗಳಲ್ಲಿ ಸಂಭವಿಸುವ ಅನೇಕ ಹಾವು ಕಡಿತದ ಸಾವುಗಳು ಸಂಪೂರ್ಣವಾಗಿ ವರದಿಯಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ 153 ಮಂದಿ ಸಾವನ್ನಪ್ಪಿರುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ.

ಹಾವು ಕಡಿತದ ಹೆಚ್ಚಳ

ಬೆಂಗಳೂರು, ಏ.02: 2024 ಮತ್ತು 2025 ಎರಡರಲ್ಲೂ ಕರ್ನಾಟಕದಲ್ಲಿ (Karnataka) ಹಾವು ಕಡಿತದಿಂದ (Snake bite) ಅತಿ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ದೇಶದಲ್ಲಿಯೇ ಅತಿ ಹೆಚ್ಚಿನ ಮಂದಿ ಕರ್ನಾಟಕದಲ್ಲಿ ಮೃತಪಟ್ಟಿರುವುದಾಗಿ (death) ವರದಿಯಾಗಿದೆ. ಲೋಕಸಭೆಯಲ್ಲಿ (lok sabha) ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಈ ಕುರಿತ ಪ್ರಶ್ನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಉತ್ತರಿಸಿದರು.

ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ (IDSP) ಅಡಿಯಲ್ಲಿ 2023 ರಲ್ಲಿ 183ಗಳಿದ್ದ ಹಾವು ಕಡಿತ ಪ್ರಕರಣಗಳು 2024ರಲ್ಲಿ 370ಕ್ಕೆ, 2025ರಲ್ಲಿ 431ಕ್ಕೆ ಏರುವುದರೊಂದಿಗೆ ಎರಡು ವರ್ಷಗಳಲ್ಲಿ ದುಪ್ಪಟ್ಟು ಹೆಚ್ಚಾಗಿದೆ. ಹಳ್ಳಿಗಳಲ್ಲಿ ಸಂಭವಿಸುವ ಅನೇಕ ಹಾವು ಕಡಿತದ ಸಾವುಗಳು ಸಂಪೂರ್ಣವಾಗಿ ವರದಿಯಾಗಿಲ್ಲ. ಏಕೆಂದರೆ ಸಂತ್ರಸ್ತರು ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಸಾವನ್ನಪ್ಪಿರುತ್ತಾರೆ. ಹಾವು ಕಡಿತವನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಡಿ ಅಧಿಸೂಚಿತ ಕಾಯಿಲೆ ಎಂದು ಸಚಿವಾಲಯವು ಸೂಚನೆ ನೀಡಿದೆ ಎಂದು ಹೇಳಿದರು.

ಸಮಗ್ರ ಆರೋಗ್ಯ ಮಾಹಿತಿ ಪೋರ್ಟಲ್ (IHIP) ಮೂಲಕ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದಿಂದ (IDSP) ಪಡೆದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ 2023 ರಲ್ಲಿ ಹಾವು ಕಡಿತದಿಂದ 19 ಮಂದಿ ಸಾವನ್ನಪ್ಪಿದ್ದರೆ, 2024 ರಲ್ಲಿ 101 ಮತ್ತು 2025 ರಲ್ಲಿ 157 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೂರು ವರ್ಷಗಳಲ್ಲಿ ಮೃತಪಟ್ಟವರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಅತ್ಯಂತ ಹೆಚ್ಚಿನ ಮಂದಿ ಕರ್ನಾಟಕದಲ್ಲಿ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

Raichur News: ಸೆಕೆ ಅಂತ ಮನೆ ಮುಂದೆ ಮಲಗಿದ್ದ ವೃದ್ಧೆಗೆ ಕಚ್ಚಿದ ಹಾವು!

ಇದೇ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ 153 ಮಂದಿ ಸಾವನ್ನಪ್ಪಿರುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 2023ರಲ್ಲಿ 43 ಮಂದಿ, 2024ರಲ್ಲಿ 25, 2025ರಲ್ಲಿ 27 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದ 2023 ರಿಂದ 2025 ರವರೆಗೆ ಮೃತಪಟ್ಟವರ ಸಂಖ್ಯೆಯಲ್ಲಿ ಸುಮಾರು ಮೂರು ಪಟ್ಟು ಹೆಚ್ಚಾಗಿದೆ .

ಅರಣ್ಯ ಪ್ರದೇಶ ಮತ್ತು ವಿಷಕಾರಿ ಪ್ರಭೇದಗಳ ಸಾಂದ್ರತೆ ಎರಡೂ ಗಣನೀಯವಾಗಿರುವ ಕರ್ನಾಟಕದಲ್ಲಿ ಅತಿ ಹೆಚ್ಚು ಮಂದಿ ಹಾವು ಕಡಿತದಿಂದ ಸಾವನ್ನಪ್ಪಿರುವುದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಆವಾಸಸ್ಥಾನದ ವಿಘಟನೆ ಮತ್ತು ಕುಗ್ಗುತ್ತಿರುವ ಅರಣ್ಯ ಬಫರ್‌ಗಳು ವಿಶೇಷವಾಗಿ ಪಶ್ಚಿಮ ಘಟ್ಟಗಳ ಗಡಿಯಲ್ಲಿರುವ ಜಿಲ್ಲೆಗಳು ಮತ್ತು ಮಲೆನಾಡು ಪ್ರದೇಶದಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪರಿಸರ ಸಂರಕ್ಷರು ಹೇಳುತ್ತಾರೆ.

Lakkundi Treasure: ಲಕ್ಕುಂಡಿಯಲ್ಲಿ ಉತ್ಖನನ ವೇಳೆ ತ್ರಿಮುಖ ನಾಗಶಿಲೆ, ನಿಜವಾದ ಹಾವು ಪ್ರತ್ಯಕ್ಷ!

ಹರೀಶ್‌ ಕೇರ

View all posts by this author