ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lakkundi Treasure: ಲಕ್ಕುಂಡಿಯಲ್ಲಿ ಉತ್ಖನನ ವೇಳೆ ತ್ರಿಮುಖ ನಾಗಶಿಲೆ, ನಿಜವಾದ ಹಾವು ಪ್ರತ್ಯಕ್ಷ!

ಉತ್ಖನನದ ಗುಂಡಿಯಲ್ಲಿ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತಲಾದ ಐತಿಹಾಸಿಕ 'ತ್ರಿಮುಖ ನಾಗಶಿಲೆ' ದೊರೆತಿದೆ. ಈ ಶೋಧನೆಯು ಜನಪದ ನಂಬಿಕೆಗಳಿಗೆ ಮರುಜೀವ ನೀಡಿದೆ. ಗ್ರಾಮೀಣ ಭಾಗದಲ್ಲಿ ತ್ರಿಮುಖ, ಪಂಚಮುಖ ಅಥವಾ ಸಪ್ತಮುಖ ನಾಗಶಿಲೆಗಳಿರುವ ಕಡೆ ನಿಧಿ ಇರುತ್ತದೆ ಎಂಬ ಬಲವಾದ ನಂಬಿಕೆಯಿದೆ.

ಲಕ್ಕುಂಡಿಯಲ್ಲಿ ಉತ್ಖನನ ವೇಳೆ ತ್ರಿಮುಖ ನಾಗಶಿಲೆ, ನಿಜವಾದ ಹಾವು ಪ್ರತ್ಯಕ್ಷ!

ಉತ್ಖನನದಲ್ಲಿ ದೊರೆತ ನಾಗಶಿಲೆ -

ಹರೀಶ್‌ ಕೇರ
ಹರೀಶ್‌ ಕೇರ Jan 30, 2026 1:04 PM

ಗದಗ, ಜ.30: ಗದಗ (Gadaga news) ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ನಿಧಿ (Lakkundi Treasure) ದೊರೆತ ಬಳಿಕ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನ (excavation) ಕಾರ್ಯವು 13ನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಅತ್ಯಂತ ಅಪರೂಪದ 'ತ್ರಿಮುಖ ನಾಗಶಿಲೆ' ಹಾಗೂ ಕಲ್ಲಿನ ಮುಕುಟಮಣಿ ಪತ್ತೆಯಾಗಿದೆ. ಇದರ ಜೊತೆಗೆ, ಜೀವಂತ ಹಾವು ಕೂಡ ಕಂಡುಬಂದಿದ್ದು, ಉತ್ಖನನ ನಡೆಸುತ್ತಿರುವವರು ಆತಂಕಗೊಂಡಿದ್ದಾರೆ.

ಉತ್ಖನನ ಆರಂಭವಾದ ಕೆಲವೇ ಸಮಯದಲ್ಲಿ ಗುಂಡಿಯೊಂದರಲ್ಲಿಅಡಕೆ ಆಕಾರದ ಕಲ್ಲಿನ ಮುಕುಟ ಮಣಿ ಪತ್ತೆಯಾಗಿದೆ. ಈ ಶಿಲೆಯ ಕೆಳಭಾಗದಲ್ಲಿ ರಂಧ್ರವಿರುವುದು ಕುತೂಹಲ ಪತ್ತೆಯಾಗಿದೆ. ಇದು ದೇವಾಲಯದ ಶಿಲ್ಪದ ಮೇಲ್ಭಾಗದ ಕಿರೀಟ ಅಥವಾ ಯಾವುದೋ ವಿಗ್ರಹದ ಅಲಂಕಾರಿಕ ವಸ್ತುವಾಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ತ್ರಿಮುಖ ನಾಗಶಿಲೆ

ಮತ್ತೊಂದು ಗುಂಡಿಯಲ್ಲಿ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತಲಾದ ಐತಿಹಾಸಿಕ 'ತ್ರಿಮುಖ ನಾಗಶಿಲೆ' ದೊರೆತಿದೆ. ಈ ಶೋಧನೆಯು ಜನಪದ ನಂಬಿಕೆಗಳಿಗೆ ಮರುಜೀವ ನೀಡಿದೆ. ಗ್ರಾಮೀಣ ಭಾಗದಲ್ಲಿ ತ್ರಿಮುಖ, ಪಂಚಮುಖ ಅಥವಾ ಸಪ್ತಮುಖ ನಾಗಶಿಲೆಗಳಿರುವ ಕಡೆ ನಿಧಿ ಇರುತ್ತದೆ ಎಂಬ ಬಲವಾದ ನಂಬಿಕೆಯಿದೆ. ನಿಧಿಯ ಕಾವಲುಗಾರನ ಸಂಕೇತವಾಗಿ ಇಂತಹ ಶಿಲೆಗಳನ್ನು ಸ್ಥಾಪಿಸಲಾಗುತ್ತಿತ್ತು ಎಂದು ಗ್ರಾಮೀಣ ಭಾಗದ ಜನ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಕ್ಕೆ ನಿಧಿ ಹಸ್ತಾಂತರಿಸಿದ್ದ ಲಕ್ಕುಂಡಿಯ ಪ್ರಜ್ವಲ್‌ ರಿತ್ತಿ ಕುಟುಂಬಕ್ಕೆ ಸೈಟ್‌ ಘೋಷಣೆ

ಕಾಣಿಸಿಕೊಂಡ ಹಾವು

ನಿಧಿ ಶೋಧ ನಡೆಸುವ ವೇಳೆ ನಿಜವಾಗಿಯೂ ಒಂದು ಹಾವು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಇದೀಗ ಆತಂಕ ಮನೆ ಮಾಡಿದೆ. ನಿನ್ನೆ ಮೂರು ಹೆಡೆ ನಾಗಶಿಲೆ ಪತ್ತೆಯ ಬೆನ್ನಲ್ಲೇ, ಇಂದು ನಿಜವಾದ ಹಾವು ಪತ್ತೆಯಾಗಿದೆ. ನಿಜವಾದ ಹಾವು ಕಂಡ ಕೂಡಲೇ ಸ್ಥಳೀಯರಲ್ಲಿ ಭಯ ಹೆಚ್ಚಿದೆ.

ವಿದ್ಯಾರ್ಥಿಗಳ ಭೇಟಿ

ಲಕ್ಕುಂಡಿಯ ಉತ್ಖನನ ಕಾರ್ಯವು ಈಗ ಕೇವಲ ಸಂಶೋಧನೆಯಾಗಿ ಉಳಿಯದೆ ಪ್ರವಾಸಿ ತಾಣವಾಗಿಯೂ ಮಾರ್ಪಟ್ಟಿದೆ. ಗುರುವಾರ ಧಾರವಾಡ ಜಿಲ್ಲೆಯ ನವಲಗುಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಸ್ಥಳಕ್ಕೆ ಭೇಟಿ ನೀಡಿ ಉತ್ಖನನದ ನೈಜ ಪ್ರಾತ್ಯಕ್ಷಿಕೆ ಹಾಗೂ ಲಕ್ಕುಂಡಿಯ ಇತಿಹಾಸದ ಬಗ್ಗೆ ಮಾಹಿತಿ ಪಡೆದ ವಿದ್ಯಾರ್ಥಿಗಳು ಶೋಧನೆ ಕಂಡು ಬೆರಗಾದರು.