ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೋನಿಯಾ ಗಾಂಧಿ ನಮ್ಮ ದೇಶದವರಲ್ಲ, ಅವರಲ್ಲಿ ಹರಿಯುತ್ತಿರುವುದು ಇಟಲಿ ರಕ್ತ ಎಂದ ಎಚ್‌.ಡಿ. ಕುಮಾರಸ್ವಾಮಿ

HD Kumaraswamy: ಸೋನಿಯಾ ಗಾಂಧಿ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಸೋನಿಯಾ ಗಾಂಧಿ ಅವರೇನು ನಮ್ಮ ದೇಶದವರಾ? ಅವರು ಮದುವೆಯಾಗಿ ನಮ್ಮ ದೇಶಕ್ಕೆ ಬಂದರು ಅಷ್ಟೇ. ಅವರಲ್ಲಿ ಹರಿಯುತ್ತಿರುವುದು ಇಟಲಿಯ ರಕ್ತ ಅಲ್ಲವೇ? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (ಸಂಗ್ರಹ ಚಿತ್ರ).

ಹಾಸನ, ಆ.17: ಬಂಕಿಮಚಂದ್ರ ಚಟರ್ಜಿ ಬರೆದಿರುವ ʼವಂದೇ ಮಾತರಂʼ ಗೀತೆಗೆ ಎಲ್ಲರೂ ಗೌರವ ಕೊಡಬೇಕು ಎಂದು ಸಂಸತ್‌ ಒಪ್ಪಿಗೆ ನೀಡಿದೆ. ಆದರೆ ಕಾಂಗ್ರೆಸ್ಸಿಗೆ ಅದು ಇಷ್ಟವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಟೀಕಿಸಿದರು. ಹಾಸನದ ಹೊಳೆನರಸೀಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರಿಂದ ʼವಂದೇ ಮಾತರಂʼ ಗೀತೆಗೆ ಅವಮಾನ ಆರೋಪದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದರು.

ಈ ಗೀತೆಗೆ ಪತಿಯೊಬ್ಬರೂ ಗೌರವಿಸಬೇಕು ಎನ್ನುವುದು ನಮ್ಮ ಅಭಿಪ್ರಾಯ. ಕಾಂಗ್ರೆಸ್ ನಾಯಕರು ಇದರಲ್ಲಿ ಸಣ್ಣತನ ತೋರಿಸುವ ಅಗತ್ಯ ಇಲ್ಲ. ಮಹಾತ್ಮಗಾಂಧಿ ಭಾಗಿಯಾದ ಕಾಂಗ್ರೆಸ್ ಅಧಿವೇಶನದಲ್ಲಿ ಮತ್ತು ಮೊದಲ ಬಾರಿಗೆ ಈ ಗೀತೆಯನ್ನು ಹಾಡಲಾಗಿತ್ತು. ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರೇ ಹಾಡಿದ್ದರು. ಹೀಗಿದ್ದರೂ ಕೂಡ ಕಾಂಗ್ರೆಸ್ ವಂದೇ ಮಾತರಂ ಗೀತೆಯನ್ನು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಸೋನಿಯಾ ಗಾಂಧಿ ಅವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಸೋನಿಯಾ ಗಾಂಧಿ ಅವರೇನು ನಮ್ಮ ದೇಶದವರಾ? ಅವರು ಮದುವೆಯಾಗಿ ನಮ್ಮ ದೇಶಕ್ಕೆ ಬಂದರು ಅಷ್ಟೇ. ಅವರಲ್ಲಿ ಹರಿಯುತ್ತಿರುವುದು ಇಟಲಿಯ ರಕ್ತ ಅಲ್ಲವೇ? ಎಂದು ಟೀಕಿಸಿದರು. ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಈಗಾಗಲೇ ತಕ್ಕಪಾಠ ಕಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಸ್ತಿ ಮಾಡಲಿದ್ದಾರೆ ಎಂದು ಕಿಡಿಕಾರಿದರು.

ಹನೂರಿನ ಶೂಟೌಟ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಈ ಘಟನೆಯ ಬಗ್ಗೆ ಸರ್ಕಾರದಿಂದ ಒಂದು ಬುಲೆಟಿನ್ ಬಿಟ್ಟಿದ್ದಾರೆ. ಅಲ್ಲಿಯ ರೈತರ ಕುಟುಂಬಗಳು ಅವರ ನೋವು ವ್ಯಕ್ತಪಡಿಸಿದ್ದಾರೆ. ಒಂದೇ ಕುಟುಂಬದ ಮೂವರ ಸಾವಿನ ಬಗ್ಗೆ ಜನರ ಆಕ್ರೋಶ ಇರುವುದು ಸಹಜ. ಸರ್ಕಾರ ಅವರ ಉತ್ತಮ ಬದುಕಿಗೆ ದಾರಿ ಮಾಡಿದಾಗ ಇಂತಹ ಘಟನೆಗಳು ಆಗಲ್ಲ. ಇದನ್ನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

ಜಿಂಕೆ ಭೇಟೆಗೆ ಹೋಗಿದ್ದವರು ಎಂದು ಸರ್ಕಾರದಿಂದ ಮಾಹಿತಿ ನೀಡಲಾಗಿದೆ. ಸಿಎಂ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಪ್ರಶ್ನೆ ಇರುವುದು ನಮ್ಮ ಅರಣ್ಯ ಇಲಾಖೆ ಸಿಬ್ಬಂದಿ ಸಾಯುವ ರೀತಿ ಗುಂಡು ಹಾರಿಸಿದ ಬಗ್ಗೆ. ಇದು ತಪ್ಪು. ಕಾಲಿಗೊ ಅಥವಾ ಜೀವಕ್ಕೆ ಅಪಾಯ ಆಗದಂತೆ ಗುಂಡು ಹಾರಿಸಿದ್ದರೆ ಎಲ್ಲರೂ ಒಪ್ಪುತ್ತಿದ್ದರು ಎಂದರು.

ನಿಮ್ಮ ಸತ್ಯಶೋಧನಾ ಸಮಿತಿ ವರದಿ‌ ಇಡೀ ರಾಜ್ಯದ ಮುಂದೆ ಇಡಿ

ಬಿಡದಿ ಪಾದಯಾತ್ರೆ ಬಗ್ಗೆ ಕಾಂಗ್ರೆಸ್ ಪಕ್ಷ ನೀಡಿರುವ ಜಾಹೀರಾತುಗಳ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು; ಇಂತಹ ಇನ್ನೂ ಹತ್ತು ಜಾಹೀರಾತು ಕೊಟ್ಟರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ರೈತರು, ರೈತ ಮಹಿಳೆಯರು ನಾವು ಭೂಮಿ ಕೊಡಲ್ಲ ಎಂದು ಹೇಳಿದ್ದಾರೆ. ಐನೂರು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಯಾಕೆ ದಬ್ಬಾಳಿಕೆ ಮಾಡಿ, ಕೆಲವು ರೌಡಿಗಳನ್ನು ಬಿಟ್ಟು ಹೆದರಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ನೀವು ಭೂಮಿ ಕೊಡದೆ ಹೋದರೆ ಗ್ರಾಂಟ್ ಭೂಮಿ ವಾಪಸ್ ಪಡೆಯುತ್ತೇವೆ ಎಂದು ದಬ್ಬಾಳಿಕೆ ಮಾಡಿ ಏನು ಸಾಧನೆ ಮಾಡಲಿಕ್ಕೆ ಹೊರಟಿದ್ದಾರೆ ಇವರು? ಈ ಯೋಜನೆ ನಿಮಗಷ್ಟೇ ಯಾಕೆ ಬೇಕಾಗಿದೆ? ಬೇರೆ ಕಡೆ ಜಾಗ ಇಲ್ಲವೆ? ಇಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕಕ್ಕೆ ಮತ್ತೆ ಆಘಾತ; ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸುಪ್ರೀಂ ಸೂಚನೆ

ನಿಮ್ಮ ಪಕ್ಷದ ಸತ್ಯ ಶೋಧನಾ ಸಮಿತಿ ವರದಿಯನ್ನು ಇಡೀ ರಾಜ್ಯದ ಮುಂದೆ ಇಡಿ. ಕಾಗೋಡು ತಿಮ್ಮಪ್ಪ ಸಮಿತಿಯಲ್ಲಿ ನೀವು ಸದಸ್ಯರಾಗಿದ್ದಿರಿ ಅಲ್ಲವೇ? ಆ ಸಮಿತಿಯ ವರದಿಯಲ್ಲಿ ಏನು ಉಲ್ಲೇಖ ಮಾಡಿದ್ದಾರೆ ಎಂಬುದು ಈ ಮುಖ್ಯಮಂತ್ರಿಗೆ ಗೊತ್ತಿಲ್ಲವೇ? ಯಾವುದೇ ಕಾರಣಕ್ಕೂ ಟೌನ್‌ಶಿಪ್ ಬರಕೂಡದು ಎಂದು ಅದರಲ್ಲಿ ವರದಿ ನೀಡಿದ್ದಾರೆ. ಆಗ ಏನು ಶಿಫಾರಸು ಮಾಡಿದ್ದೀರಿ, ಅದೇ ಅಂಶಗಳನ್ನು ಮುದ್ರಿಸಿ ಜಾಹೀರಾತು ಕೊಡಿ ನೋಡೋಣ. ಹಾಗೆ ಮಾಡಿದರೆ ನಮಗೂ ಸ್ವಲ್ಪ ಹಣ ಖರ್ಚು ಕಡಿಮೆ ಆಗುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಟಾಂಗ್ ನೀಡಿದರು.