ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mangaluru commissioner: ಮಂಗಳೂರು ಕಮಿಷನರ್‌ ಮೇಲೆ ಪೊಲೀಸ್‌ ಅಧಿಕಾರಿಯಿಂದಲೇ ಗಂಭೀರ ಆರೋಪ, ಡಿಜಿಪಿಗೆ ಪತ್ರ

ಎಸ್‌ಪಿ ಕಾಶಿನಾಥ್ ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಸಿಆರ್‌ಇ ಆಗಿದ್ದು, ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಗಂಭೀರ ಸ್ವರೂಪದ ದೂರು ನೀಡಿದ್ದಾರೆ. ಕೆಲಸದ ಒತ್ತಡ, ಕಿರುಕುಳ ಅಥವಾ ಕರ್ತವ್ಯದ ವಿಚಾರದಲ್ಲಿ ಹಿರಿಯ ಅಧಿಕಾರಿಯ ಹಸ್ತಕ್ಷೇಪದಂತಹ ಗಂಭೀರ ಅಂಶಗಳು ಪತ್ರದಲ್ಲಿ ಉಲ್ಲೇಖವಾಗಿವೆ ಎಂದು ತಿಳಿದುಬಂದಿದೆ.

ಐಪಿಎಸ್ ಸುಧೀರ್ ಕುಮಾರ್ ರೆಡ್ಡಿ, ಎಸ್‌ಪಿ ಕಾಶಿನಾಥ್

ಬೆಂಗಳೂರು, ಏ.20: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ (Police department) ಉನ್ನತ ಮಟ್ಟದ ಅಧಿಕಾರಿಗಳ ನಡುವಿನ ಶೀತಲ ಸಮರ ಈಗ ಬಹಿರಂಗವಾಗಿದೆ. ಐಪಿಎಸ್ ಅಧಿಕಾರಿ, ಮಂಗಳೂರು ಕಮಿಷನರ್‌ (Mangaluru commissioner) ಸುಧೀರ್ ಕುಮಾರ್ ರೆಡ್ಡಿ (IPS Sudheer Kumar Reddy) ವಿರುದ್ಧ ಡಿಸಿಆರ್‌ಇ (DCRE) ಎಸ್‌ಪಿ ಕಾಶಿನಾಥ್ ಅವರು ಡಿಜಿಪಿ ಸಲೀಂ (DGP Saleem) ಅವರಿಗೆ ಗಂಭೀರ ಆರೋಪಗಳಿರುವ ಪತ್ರ ಬರೆದು ದೂರು ನೀಡಿದ್ದಾರೆ.

ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ತಾರತಮ್ಯ ಮಾಡುತ್ತಿದ್ದಾರೆ ಎಂದು ಎಸ್‌ಪಿ ಕಾಶಿನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. “ನನಗೆ ಕೇವಲ 30 ನಿಮಿಷಗಳ ಕಾಲಾವಕಾಶ ನೀಡಿ, ಈ ಐಪಿಎಸ್ ಅಧಿಕಾರಿಯ ಎಲ್ಲಾ ಕರ್ಮಕಾಂಡಗಳನ್ನು ನಿಮ್ಮ ಮುಂದೆ ಬಯಲು ಮಾಡುತ್ತೇನೆ. ಅಧಿಕಾರಿಗೆ ಬ್ಯಾಕ್ ಟು ಬ್ಯಾಕ್ ಮೆಮೊ ಕೊಟ್ಟು, ಅವರು ಹೇಳಿದಂತೆ ಕೆಲಸ ಮಾಡಬೇಕು, ಇಲ್ಲವಾದರೆ ಮಾನಸಿಕ ಹಿಂಸೆ ಕೊಡ್ತಾರೆ. ಕನ್ನಡಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ, ಟಾರ್ಚರ್ ಕೊಡ್ತಿದ್ದಾರೆ. ಹಲವು ಬಾರಿ ಅನ್ಯಾಯದ ವಿರುದ್ಧ ಲಿಖಿತ ದೂರು ನೀಡಿದ್ದೇನೆ" ಎಂದು ತಿಳಿಸಿದ್ದಾರೆ.

ಎಸ್‌ಪಿ ಕಾಶಿನಾಥ್ ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಸಿಆರ್‌ಇ ಆಗಿದ್ದು, ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಗಂಭೀರ ಸ್ವರೂಪದ ದೂರು ನೀಡಿದ್ದಾರೆ. ಕೆಲಸದ ಒತ್ತಡ, ಕಿರುಕುಳ ಅಥವಾ ಕರ್ತವ್ಯದ ವಿಚಾರದಲ್ಲಿ ಹಿರಿಯ ಅಧಿಕಾರಿಯ ಹಸ್ತಕ್ಷೇಪದಂತಹ ಗಂಭೀರ ಅಂಶಗಳು ಪತ್ರದಲ್ಲಿ ಉಲ್ಲೇಖವಾಗಿವೆ ಎಂದು ತಿಳಿದುಬಂದಿದೆ.

IPS Transfer: ಕಗ್ಗೊಲೆಗಳ ಹಿನ್ನೆಲೆ; ದಕ್ಷಿಣ ಕನ್ನಡ, ಉಡುಪಿಯ ಐಪಿಎಸ್‌ಗಳ ಬದಲಾವಣೆ, ಸುಧೀರ್‌ ಕುಮಾರ್‌ ರೆಡ್ಡಿ ಮಂಗಳೂರು ಡಿಜಿ, ಆಯುಕ್ತ

ಶಿಸ್ತಿನ ಇಲಾಖೆ ಎನಿಸಿಕೊಂಡಿರುವ ಪೊಲೀಸ್ ಇಲಾಖೆಯಲ್ಲಿ ಇಬ್ಬರು ಉನ್ನತ ಅಧಿಕಾರಿಗಳ ನಡುವಿನ ಈ ‘ಶೀತಲ ಸಮರ’ ಬೀದಿಗೆ ಬಂದಿರುವುದು ಸರ್ಕಾರಕ್ಕೂ ಮುಜುಗರ ತಂದಿದೆ. ಈ ಪತ್ರದಲ್ಲಿನ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಆಂತರಿಕ ತನಿಖೆ ನಡೆಯುವ ಸಾಧ್ಯತೆಯಿದೆ. ಗೃಹ ಸಚಿವರು ಈ ವಿಷಯವಾಗಿ ಮಾಹಿತಿ ಪಡೆದಿದ್ದಾರೆ.

ಹರೀಶ್‌ ಕೇರ

View all posts by this author