ಬೆಂಗಳೂರು : ದೀಪಾವಳಿ ಹಬ್ಬದ (Deepavali Festival) ಪ್ರಯುಕ್ತ ರಾಜಧಾನಿಯಿಂದ ಇತರ ಕಡೆಗಳಿಗೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ನೈಋತ್ಯ ರೈಲ್ವೆಯು ವಿಶೇಷ ರೈಲುಗಳ (Special trains) ಸೇವೆ ಕಲ್ಪಿಸಿದೆ. ಇವು ಬೆಂಗಳೂರು (Bengaluru), ಮಂಗಳೂರು (mangaluru), ಹುಬ್ಬಳ್ಳಿ (Hubballi), ಬೆಳಗಾವಿ (Belagavi) ನಡುವೆ ಓಡಾಡಲಿವೆ. ದೀಪಾವಳಿ ಹಬ್ಬ ಹಾಗೂ ಮುಂದಿನ ವಾರಾಂತ್ಯಗಳು ಒಟ್ಟಿಗೆ ಬಂದಿರುವುದರಿಂದ ಈ ಬಾರಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರಲಿದೆ. ಹೀಗಾಗಿ ಕೆಎಸ್‌ಆರ್‌ಟಿಸಿಯ ವಿಶೇಷ ಬಸ್ಸುಗಳ ಜೊತೆಗೆ ರೈಲ್ವೆ ಇಲಾಖೆಯೂ ಹೆಚ್ಚಿನ ರೈಲುಗಳನ್ನು ಹೊರಡಿಸಿದೆ.
ಯಶವಂತಪುರ- ಮಂಗಳೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ (06229) ರೈಲು ಅ.19 ರಂದು ತಡರಾತ್ರಿ 12.15 ಗಂಟೆಗೆ ಯಶವಂತಪುರದಿಂದ ಹೊರಟು, ಬೆಳಗ್ಗೆ 11.15 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ. ವಾಪಸಾಗುವ ರೈಲು (06230) ಅ.19 ರಂದು ಮಧ್ಯಾಹ್ನ 2.35 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ತಡರಾತ್ರಿ 12.30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇದು ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಮತ್ತು ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಎಸ್ಎಸ್ಎಸ್ ಹುಬ್ಬಳ್ಳಿ-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್ ರೈಲು (07353) ಅ.17 ರಂದು ಮಧ್ಯಾಹ್ನ 3 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಮರುದಿನ ಅ.8 ರಂದು 11.15 ಗಂಟೆಗೆ ಮಂಗಳೂರು ಜಂಕ್ಷನ್ ತಲುಪಲಿದೆ.
ವಾಪಸಾಗುವ ರೈಲು (07354) ಅ.18 ರಂದು 2.35 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಹೊರಟು, ಅದೇ ದಿನ ರಾತ್ರಿ 11.15 ಗಂಟೆಗೆ ಯಶವಂತಪುರ ತಲುಪಲಿದೆ. ಈ ರೈಲು ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ ಮತ್ತು ಕುಣಿಗಲ್ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್
ರೈಲು (06507) ಅ.18 ರಂದು 8 ಗಂಟೆಗೆ ಬೆಳಗಾವಿಯಿಂದ ಹೊರಟು ರಾತ್ರಿ 7.45 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಹಿಂದಿರುಗುವ ರೈಲು (06508) ಅ.18 ರಂದು ರಾತ್ರಿ 9 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಅ.19 ರಂದು ಬೆಳಗ್ಗೆ 8.35 ಗಂಟೆಗೆ ಬೆಳಗಾವಿ ತಲುಪಲಿದೆ. ಈ ರೈಲು ಲೋಂಡಾ, ಅಳ್ನಾವರ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರದಲ್ಲಿ ನಿಲ್ಲಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Deepavali festival: ದೀಪಾವಳಿ ಹಬ್ಬದ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿಯಿಂದ 2500 ಹೆಚ್ಚುವರಿ ಬಸ್