ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯ ಬಜೆಟ್‌: ರಾಜ್ಯ ನೀತಿ, ಯೋಜನಾ ಆಯೋಗದ 5 ಉಪಸಮಿತಿಗಳಿಂದ ಇಲಾಖಾವಾರು ಅಧ್ಯಯನ ವರದಿ

Karnataka Budget: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ 5 ಉಪಸಮಿತಿಗಳಿಂದ ಇಲಾಖಾವಾರು ಅಧ್ಯಯನ ಕೈಗೊಂಡು 2026-27ನೇ ಸಾಲಿನ ಬಜೆಟ್‌ಗೆ ಪರಿಗಣಿಸಲು ವರದಿ ಸಿದ್ಧಪಡಿಸಲಾಗಿದೆ. ಶಿಕ್ಷಣ ಮತ್ತು ಕೌಶಲ್ಯ, ಆರೋಗ್ಯ, ಪೋಷಣೆ, ನೈರ್ಮಲ್ಯ ಮತ್ತುನೀರು ಸರಬರಾಜು, ಪರಿಸರ-ಹವಾಮಾನ ಬದಲಾವಣೆ, ಕೃಷಿ ಮತ್ತು ಕೃಷಿ ಸಂಬಂಧಿತ ವಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದುರ್ಬಲ ವರ್ಗ ಮತ್ತು ಕಾರ್ಮಿಕ ವಲಯದ ಮೂಲಕ ಇಲಾಖಾವಾರು ಅಧ್ಯಯನ ನಡೆಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು, ಫೆ. 19: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ 5 ಉಪಸಮಿತಿಗಳಿಂದ ಇಲಾಖಾವಾರು ಅಧ್ಯಯನ ಕೈಗೊಂಡು 2026-27ನೇ ಸಾಲಿನ ಬಜೆಟ್‌ಗೆ (Karnataka Budget) ಪರಿಗಣಿಸಲು ವರದಿ ಸಿದ್ಧಪಡಿಸಲಾಗಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಾರ್ಚ್ 6ರಂದು ಮಂಡಿಸಲಿದ್ದಾರೆ. ಇದು ಅವರ ದಾಖಲೆಯ 17ನೇ ಬಜೆಟ್‌. ಶಿಕ್ಷಣ ಮತ್ತು ಕೌಶಲ್ಯ, ಆರೋಗ್ಯ, ಪೋಷಣೆ, ನೈರ್ಮಲ್ಯ ಮತ್ತುನೀರು ಸರಬರಾಜು, ಪರಿಸರ-ಹವಾಮಾನ ಬದಲಾವಣೆ, ಕೃಷಿ ಮತ್ತು ಕೃಷಿ ಸಂಬಂಧಿತ ವಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ದುರ್ಬಲ ವರ್ಗ ಮತ್ತು ಕಾರ್ಮಿಕ ವಲಯದ ಮೂಲಕ ಇಲಾಖಾವಾರು ಅಧ್ಯಯನ ನಡೆಸಲಾಗಿದೆ.

ಶಿಕ್ಷಣ ಮತ್ತು ಕೌಶಲ್ಯ ಉಪಸಮಿತಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಉನ್ನತ ಶಿಕ್ಷಣ, ಕೌಶಲ್ಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ವೈದ್ಯಕೀಯ ಇಲಾಖೆಗಳು ಸೇರಿವೆ. ಆರೋಗ್ಯ, ಪೋಷಣೆ, ನೈರ್ಮಲ್ಯ ಮತ್ತು ನೀರು ಸರಬರಾಜು ಉಪಸಮಿತಿಯಲ್ಲಿ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆ ಇದೆ. ಪರಿಸರ-ಹವಾಮಾನ ಬದಲಾವಣೆ ಉಪ ಸಮಿತಿಯು ಅರಣ್ಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂವಿಜ್ಞಾನ, ಕಂದಾಯ-ವಿಪತ್ತು ನಿರ್ವಹಣೆ ಇಲಾಖೆಯನ್ನು ಹೊಂದಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ವಲಯವು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ, ಸಹಕಾರ, ರೇಷ್ಮೆ ಮತ್ತು ಅರಣ್ಯ ಇಲಾಖೆಯನ್ನು ಒಳಗೊಂಡಿದೆ. ಮಹಿಳಾ ಮತ್ತು ಮಕಕ್ಕಳ ಕಲ್ಯಾಣ, ದುರ್ಬಲ ವರ್ಗ ಮತ್ತು ಕಾರ್ಮಿಕ ವಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಒಲಾಖೆ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇದೆ.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನೆಯ ಆಯೋಗದ 5 ಉಪಸಮಿತಿಗಳ ಇಲಾಖಾವಾರು ಅಧ್ಯಯನ ವರದಿ



ಪರಿಸರ ರಕ್ಷಣೆಗೆ 4,500 ಕೋಟಿ ರುಪಾಯಿ ಅನುದಾನಕ್ಕೆ ಮನವಿ

ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಅನುದಾನ ಅಗತ್ಯವಿದ್ದು, ರಾಜ್ಯದ ಒಟ್ಟು ಬಜೆಟ್‌ನ ಶೇ. 1ರಷ್ಟು ಅನುದಾನವನ್ನು ಅರಣ್ಯ ಹಾಗೂ ಪರಿಸರ ಇಲಾಖೆಗೆ ಮೀಸಲಿಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರಾಜ್ಯ ಬಜೆಟ್‌ಗೆ ದಿನಾಂಕ ನಿಗದಿ; ದೀರ್ಘಾವಧಿ ಸಿಎಂ ಸಿದ್ದರಾಮಯ್ಯ ಮತ್ತೊಂದು ದಾಖಲೆ ಬರೆಯಲು ಸಜ್ಜು

2026-27ನೇ ಸಾಲಿನ ರಾಜ್ಯ ಬಜೆಟ್ ಸುಮಾರು 4.5 ಲಕ್ಷ ಕೋಟಿ ರುಪಾಯಿ ಗಾತ್ರದ್ದಾಗಿದ್ದು, ಇದರ ಶೇ. 1 ಎಂದರೆ 4,500 ಕೋಟಿ ರುಪಾಯಿ ಅನುದಾನ ಒದಗಿಸುವಂತೆ ಅರಣ್ಯ ಹಾಗೂ ಪರಿಸರ ಇಲಾಖೆ ಕೋರಿದೆ.

Ramesh Ballamoole

View all posts by this author