ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Thane Movie: ʼಠಾಣೆʼ ಚಿತ್ರದ ʼಬಾಳಿನಲ್ಲಿ ಭರವಸೆಯ ಬೆಳಕುʼ ಹಾಡು ಬಿಡುಗಡೆ

Thane Movie: ʼಠಾಣೆʼ ಚಿತ್ರಕ್ಕಾಗಿ ಖ್ಯಾತ ಗಾಯಕಿ ಮಜಾಟಾಕೀಸ್ ಖ್ಯಾತಿಯ ರೆಮೊ ಅವರು ಬರೆದಿರುವ, ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿರುವ ʼಬಾಳಿನಲ್ಲಿ ಭರವಸೆಯ ಬೆಳಕುʼ ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಅನಾವರಣವಾಯಿತು. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರು: ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ. ನಿರ್ಮಿಸಿರುವ ʼಠಾಣೆʼ ಚಿತ್ರಕ್ಕಾಗಿ (Thane Movie) ಖ್ಯಾತ ಗಾಯಕಿ ಮಜಾಟಾಕೀಸ್ ಖ್ಯಾತಿಯ ರೆಮೊ ಅವರು ಬರೆದಿರುವ ʼಬಾಳಿನಲ್ಲಿ ಭರವಸೆಯ ಬೆಳಕುʼ ಎಂಬ ಅರ್ಥಗರ್ಭಿತ ಹಾಡು ಇತ್ತೀಚೆಗೆ ಅನಾವರಣವಾಯಿತು. ಮಾನಸ ಹೊಳ್ಳ ಸಂಗೀತ ಸಂಯೋಜಿಸಿ, ಜ್ಞಾನ, ಅನುಷ್ಕ, ಜನ್ಯ ಆದರ್ಶ್ ಹಾಗೂ ಮೌಲ್ಯ ಅಚಿಂತ್ಯ ಎಂಬ ಬಾಲ ಪ್ರತಿಭೆಗಳು ಹಾಡಿರುವ ಈ ಸುಂದರ ಹಾಡನ್ನು ನಟ ರಿಷಿ, ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ಡಿ.ಎಸ್.ಮ್ಯಾಕ್ಸ್‌ನ‌ ದಯಾನಂದ್ ಅವರು ಅನಾವರಣ ಮಾಡಿ ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಮಾನಸ ಹೊಳ್ಳ ಅವರ ಸಂಗೀತ ನಿರ್ದೇಶನದಲ್ಲಿ ಮಕ್ಕಳು ಹಾಡಿರುವ ಹಾಗೂ ರೆಮೊ ಅವರು ಬರೆದಿರುವ ನಮ್ಮ ಚಿತ್ರದ ಈ ಹಾಡನ್ನು ಅನಾವರಣ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ‌. ಇನ್ನು ʼಠಾಣೆʼ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿ, ತೆರೆಗೆ ಬರುವ ಹಂತದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ಸಾಹಸ ಕಲಾವಿದನಾಗಿ ಗುರುತಿಸಿಕೊಂಡಿರುವ ಹಾಗೂ ರಂಗಭೂಮಿ ಕಲಾವಿದ ಪ್ರವೀಣ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಮೈಸೂರಿನ ಹರಿಣಾಕ್ಷಿ ಈ ಚಿತ್ರದ ನಾಯಕಿ. ಬಿ.ವಿ. ರಾಜರಾಂ, ಬಲ ರಾಜ್ವಾಡಿ, ರೋಹಿತ್ ನಾಗೇಶ್, ಕುಲದೀಪ್, ಸಂತೋಷ್ ಕರ್ಕಿ, ಭೀಷ್ಮ ರಾಮಯ್ಯ, ನಾಗರಾಜ್,‌ ಬಲ ರಾಜ್ವಾಡಿ , ಪಿ.ಡಿ.ಸತೀಶ್ ಚಂದ್ರ, ಪ್ರವೀಣ್ ಜಾನ್, ಪೂಜಾ ರಾವ್ . ಕುಮಾರಿ ದೀಪಿಕಾ, ರೂಪ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 20 ವರ್ಷಗಳ ಹಿಂದೆ ಮಾಧ್ಯಮಗಳು, ಪೊಲೀಸ್ ಇಲಾಖೆಗಳ ಪ್ರಮಾಣ ಕಡಿಮೆ ಇದ್ದ ಕಾರಣ ಜನರೇ ನ್ಯಾಯಕ್ಕಾಗಿ ಹೋರಾಡಿ ಇಲಾಖೆಗಳ ಗಮನ ಸೆಳೆಯುವ ಕಾಲದಲ್ಲಿ ನಾಯಕ ಕಾಳಿ ನ್ಯಾಯಕ್ಕಾಗಿ ಯಾವ ರೀತಿಯ ಹೋರಾಟ ಮಾಡಿದ ಎನ್ನುವುದೇ ಈ ಚಿತ್ರದ ಪ್ರಮುಖ ಕಥಾಹಂದರ. ʼಠಾಣೆʼ ಚಿತ್ರಕ್ಕೆ C/O ಶ್ರೀರಾಂಪುರ ಎಂಬ ಅಡಿಬರಹವಿದೆ ಎಂದು ಎಸ್. ಭಗತ್ ರಾಜ್ ತಿಳಿಸಿದರು‌.

2007 ರಿಂದಲೂ ನಾನು ಚಿತ್ರರಂಗದಲ್ಲಿದ್ದೇನೆ. ಹೆಸರಾಂತ ಸಾಹಸ ಕಲಾವಿದರ ಬಳಿ ಕಾರ್ಯ ನಿರ್ವಹಿಸಿದ್ದೇನೆ. ಜತೆಗೆ ನಾನು ರಂಗಭೂಮಿ ಕಲಾವಿದನು ಹೌದು. ನನ್ನ ಜತೆಗೆ ರಂಗಭೂಮಿಯಲ್ಲಿದ್ದ ಅನೇಕ ಕಲಾವಿದರು ಇಂದು ಜನಪ್ರಿಯರಾಗಿದ್ದಾರೆ. ನಾನು ಈಗ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದೇನೆ. ಕಾಳಿ ನನ್ನ ಪಾತ್ರದ ಹೆಸರು. ಇದರ ಕಥೆ ಶ್ರೀರಾಮಪುರದಲ್ಲೇ ನಡೆಯುವ ಕಥೆ. ನಾನು ಕೂಡ ಇಲ್ಲೇ ಗಾಯತ್ರಿ ನಗರದವನು. ಶ್ರೀರಾಮಪುರವನ್ನು ಹತ್ತಿರದಿಂದ ಬಲ್ಲವನು. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಅನುಕೂಲವಾಯಿತು ಎನ್ನುತ್ತಾರೆ ನಾಯಕ ಪ್ರವೀಣ್‌.

ನಾನು ಮೈಸೂರಿನವಳು. ರಂಗ ಕಲಾವಿದೆ. ಈ ಚಿತ್ರದಲ್ಲಿ ನನ್ನ ಶ್ರೀ ದೇವಿ ಪಾತ್ರ ಕೂಡ ಚೆನ್ನಾಗಿದೆ ಎಂದು ನಾಯಕಿ ಹರಿಣಾಕ್ಷಿ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Winter Season End Sale 2024: ವಿಂಟರ್ ಸೀಸನ್ ಎಂಡ್ ಸೇಲ್‌ನಲ್ಲಿ ಶಾಪಿಂಗ್ ಮಾಡುವುದು ಹೇಗೆ?

ನಮ್ಮ ಚಿತ್ರದಲ್ಲಿ ಎರಡು ಹಾಡುಗಳಿವೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ. ಮತ್ತೊಂದು ಹಾಡು ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಖ್ಯಾತ ಗಾಯಕ ರಾಜೇಶ್ ಕೃಷ್ಣನ್‌ ಆ ಹಾಡನ್ನು ಹಾಡಿದ್ದಾರೆ ಎಂದು ಮಾನಸ ಹೊಳ್ಳ ಮಾಹಿತಿ ನೀಡಿದರು. ಹಾಡು ಹುಟ್ಟಿದ ಸಮಯ ಬಗ್ಗೆ ಮಜಾ ಟಾಕೀಸ್ ಖ್ಯಾತಿಯ ರೆಮೊ ಹೇಳಿದರು. ಬಾಲ ಗಾಯಕಿಯರು ವೇದಿಕೆಯಲ್ಲೂ ಹಾಡಿ ರಂಜಿಸಿದರು.‌ ಛಾಯಾಗ್ರಾಹಕ ಪ್ರಶಾಂತ್ ಸಾಗರ್ ಸೇರಿದಂತೆ ಠಾಣೆ ಚಿತ್ರದ ಕಲಾವಿದರು, ತಂತ್ರಜ್ಞರು ಸಮಾರಂಭದಲ್ಲಿದ್ದರು. ನಿರ್ಮಾಪಕಿ ಗಾಯತ್ರಿ ಅವರು ಎಲ್ಲರಿಗೂ ಧನ್ಯವಾದ ತಿಳಿಸಿದರು.