Winter Season End Sale 2024: ವಿಂಟರ್ ಸೀಸನ್ ಎಂಡ್ ಸೇಲ್‌ನಲ್ಲಿ ಶಾಪಿಂಗ್ ಮಾಡುವುದು ಹೇಗೆ?
Winter Season End Sale 2024: ಚಳಿಗಾಲ ಮುಗಿಯುತ್ತಿದ್ದಂತೆ ಎಲ್ಲ ಮಾಲ್ ಹಾಗೂ ಶಾಪ್‌ಗಳಲ್ಲೂ ವಿಂಟರ್ ಸೀಸನ್ ಇಯರ್ ಎಂಡ್ ಸೇಲ್ ಆರಂಭಗೊಂಡಿದೆ. ಈ ಸೇಲ್‌ನಲ್ಲಿ ಶಾಪಿಂಗ್ ಮಾಡಿ ಸದುಪಯೋಗಪಡಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಶಾಪಿಂಗ್ ಎಕ್ಸ್‌ಪರ್ಟ್ಸ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಚಿತ್ರಗಳು: ಮಿಂಚು

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್ ಆರಂಭಗೊಳ್ಳುತ್ತಿದ್ದಂತೆ, ವಿಂಟರ್ ಸೀಸನ್ ಇಯರ್ ಎಂಡ್ ಸೇಲ್ (Winter Season End Sale 2024) ಎಲ್ಲೆಡೆ ಆರಂಭಗೊಂಡಿದೆ. ಹೌದು ಲೇಯರ್ ಲುಕ್ ನೀಡುವ ಬಗೆಬಗೆಯ ಕೋಟ್‌ಗಳಿಂದ ಹಿಡಿದು ನಾನಾ ಬಗೆಯ ಆಕ್ಸೆಸರೀಸ್‌ಗಳು ಈ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ಮಾತ್ರವಲ್ಲ ಗರಿಷ್ಠ ಶೇ. 70ರಷ್ಟು ಕಡಿತದಲ್ಲಿ ದೊರೆಯುತ್ತಿದೆ. ಈ ಸೇಲ್‌ನಲ್ಲಿ ಖರೀದಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ, ಶಾಪಿಂಗ್‌ನ ಸದುಪಯೋಗಪಡಿಸಿಕೊಳ್ಳಬಹುದು. ಒಂದಿಷ್ಟು ಹಣವನ್ನು ಉಳಿಸಬಹುದು ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್. ಮೊದಲಿಗೆ ಸೇಲ್‌ನಲ್ಲಿ ಏನೆಲ್ಲ ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳಲು ಮೊದಲು ವಿಂಡೋ ಶಾಪಿಂಗ್ ಮಾಡಿ. ಆಗಷ್ಟೇ ನಿಮಗೆ ಸೇಲ್‌ನಲ್ಲಿ ಏನೇನಿದೆ? ಯಾವುದು ಕೊಳ್ಳಲು ಸೂಕ್ತ? ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸೋ, ರೆಗ್ಯುಲರ್ ಶಾಪಿಂಗ್‌ಗೆ ಮುನ್ನ ವಿಂಡೋ ಶಾಪಿಂಗ್‌ಗೆ ಮೊರೆ ಹೋಗಿ.

ಖರೀದಿ ಕಾರಣ ತಿಳಿದಿರಲಿ
ಖರೀದಿಸುವ ವಿಂಟರ್ ಸೀಸನ್‌ನ ಉಡುಪುಗಳು ಮುಂಬರುವ ಸೀಸನ್‌ಗೆ ಹೊಂದುವುದಿಲ್ಲ! ಆದರೆ ಖರೀದಿಸುತ್ತಿರುವುದು ಯಾಕೆ? ಎಂಬುದು ಮೊದಲು ತಿಳಿದಿರಲಿ. ಮುಂದಿನ ವರ್ಷದ ವಿಂಟರ್‌ಗಾಗಿ ಯಾವುದೇ ಕಾರಣಕ್ಕೂ ಖರೀದಿಸಬೇಡಿ. ಫ್ಯಾಷನ್ ಬದಲಾಗುವ ಚಾನ್ಸ್ ಇರುತ್ತದೆ.

ಬಿಡಿ ಬಿಡಿ ಔಟ್‌ಫಿಟ್ಸ್ ಆಯ್ಕೆ ಮಾಡಿ
ಆದಷ್ಟೂ ಬಿಡಿಬಿಡಿಯಾಗಿರುವ ಉಡುಪುಗಳನ್ನು ಖರೀದಿಸಿ. ಉದಾಹರಣೆಗೆ ಟಾಪ್, ಸ್ಕರ್ಟ್ಸ್, ಪ್ಯಾಂಟ್. ಅದರಲ್ಲೂ ಸ್ಟ್ರಾಪ್, ಸ್ಲೀವ್ಲೆಸ್, ತೆಳುವಾದ ಇನ್ನರ್ ಔಟ್‌ಫಿಟ್‌ಗಳು ಮುಂಬರುವ ಸೀಸನ್‌ಗೂ ಹೊಂದಬಲ್ಲದು.

ಫ್ಯಾಬ್ರಿಕ್ ಗಮನಿಸಿ
ಈಗಾಗಲೇ ಸೆಕೆ ಆರಂಭವಾಗಿರುವುದರಿಂದ ದಪ್ಪನೆಯ ಫ್ಯಾಬ್ರಿಕ್‌ನ ಉಡುಪು ಖರೀದಿಸಬೇಡಿ. ಇದು ಸೆಕೆಯನ್ನು ಹೆಚ್ಚಿಸಬಹುದು. ಇದರಿಂದ ಧರಿಸಲು ಸಾಧ್ಯವಾಗದೇ ಸುಮ್ಮನೆ ಮೂಲೆ ಸೇರಬಹುದು. ಹಾಗಾಗಿ ಇದು ಖರೀದಿಸುವಾಗ ಗಮನದಲ್ಲಿರಲಿ.
ಈ ಸುದ್ದಿಯನ್ನೂ ಓದಿ | Holi Dresscode 2025: ಹೋಳಿ ಸಂಭ್ರಮಕ್ಕೆ ಬಂತು 3 ಶೈಲಿಯ ಡ್ರೆಸ್ ಕೋಡ್ಸ್
ಎಥ್ನಿಕ್‌ವೇರ್ ಆಯ್ಕೆ ಉತ್ತಮ
ಸಮಾರಂಭಗಳಲ್ಲಿ ಹಾಗೂ ಹಬ್ಬಗಳಲ್ಲಿ ಎಥ್ನಿಕ್‌ವೇರ್‌ಗಳನ್ನು ಧರಿಸಬಹುದು. ಹಾಗಾಗಿ ಇವು ವಿಂಟರ್ ಸೇಲ್‌ನಲ್ಲಿ ಕಡಿಮೆ ಬೆಲೆಗೆ ದೊರಕಿದಾಗ ಖರೀದಿಸಿ. ಇವುಗಳ ಖರೀದಿ ಲಾಭವಾಗಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)